ETV Bharat / business

ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಇಂದು ಕೇಂದ್ರ ಸರ್ಕಾರ ಹೆಚ್ಚಿಸಿದೆ.

Centre increases minimum support price of copra

author img

By ETV Bharat Karnataka Team

Published : Dec 27, 2023, 7:31 PM IST

Updated : Dec 27, 2023, 8:54 PM IST

ನವದೆಹಲಿ: 2024ರ ಋತುವಿನಲ್ಲಿ ಮಿಲ್ಲಿಂಗ್ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್​ಪಿ) ಪ್ರತಿ ಕ್ವಿಂಟಾಲ್​ಗೆ 300 ರೂ.ಗಳಷ್ಟು ಮತ್ತು ಚೆಂಡು ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್​ಗೆ 250 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರಕಾರವು ಬುಧವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಈ ನಿರ್ಧಾರ ಕೈಗೊಂಡಿದೆ.

2024ರ ಋತುವಿನಲ್ಲಿ ಮಿಲ್ಲಿಂಗ್ ಕೊಬ್ಬರಿಯ ನ್ಯಾಯೋಚಿತ ಸರಾಸರಿ ಗುಣಮಟ್ಟದ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್​ಗೆ 11,160 ರೂ. ಮತ್ತು ಚೆಂಡು ಕೊಬ್ಬರಿಗೆ ಪ್ರತಿ ಕ್ವಿಂಟಾಲ್​ಗೆ 12,000 ರೂ.ಗೆ ನಿಗದಿಪಡಿಸಲಾಗಿದೆ. ಇದು ಮಿಲ್ಲಿಂಗ್ ಕೊಬ್ಬರಿಗೆ ಶೇಕಡಾ 51.84 ಮತ್ತು ಚೆಂಡು ಕೊಬ್ಬರಿಗೆ ಶೇಕಡಾ 63.26ರಷ್ಟು ಲಾಭವನ್ನು ಖಾತರಿಪಡಿಸುತ್ತದೆ. ಇದು ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಿಲ್ಲಿಂಗ್ ಕೊಬ್ಬರಿಯನ್ನು ಎಣ್ಣೆ ಉತ್ಪಾದನೆಗೆ ಮತ್ತು ಚೆಂಡು ಕೊಬ್ಬರಿಯನ್ನು ಆಹಾರ ಪದಾರ್ಥವಾಗಿ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕೇರಳ ಮತ್ತು ತಮಿಳುನಾಡು ಮಿಲ್ಲಿಂಗ್ ಕೊಬ್ಬರಿಯನ್ನು ಹೆಚ್ಚಾಗಿ ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿವೆ. ಕರ್ನಾಟಕದಲ್ಲಿ ಹೆಚ್ಚಾಗಿ ಚೆಂಡು ಕೊಬ್ಬರಿಯನ್ನು ಉತ್ಪಾದಿಸಲಾಗುತ್ತದೆ.

ಹೆಚ್ಚಿನ ಎಂಎಸ್​ಪಿ ತೆಂಗು ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಾತ್ರಿಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಏತನ್ಮಧ್ಯೆ, ಪ್ರಸಕ್ತ 2023 ರ ಋತುವಿನಲ್ಲಿ ಸರ್ಕಾರವು 1,493 ಕೋಟಿ ರೂ.ಗಳ ವೆಚ್ಚದಲ್ಲಿ 1.33 ಲಕ್ಷ ಮೆಟ್ರಿಕ್ ಟನ್ ಗಿಂತ ಹೆಚ್ಚು ಕೊಬ್ಬರಿಯನ್ನು ಸಂಗ್ರಹಿಸಿದೆ. ಇದು ಸುಮಾರು 90,000 ರೈತರಿಗೆ ಪ್ರಯೋಜನ ನೀಡಲಿದೆ. 2023 ರ ಪ್ರಸಕ್ತ ಋತುವಿನಲ್ಲಿ ಸಂಗ್ರಹವು ಹಿಂದಿನ ಋತುವಿಗೆ ಹೋಲಿಸಿದರೆ ಶೇಕಡಾ 227 ರಷ್ಟು ಏರಿಕೆಯನ್ನು ಸೂಚಿಸುತ್ತದೆ.

ತ್ರಿಪುರಾ ಹೆದ್ದಾರಿ ಯೋಜನೆಗೆ ಅನುಮೋದನೆ: ತ್ರಿಪುರಾದ ಎನ್ಎಚ್ -208 ರಲ್ಲಿ ಖೋವಾಯಿಯಿಂದ ಹರಿನಾವರೆಗಿನ 135 ಕಿ.ಮೀ ರಸ್ತೆಯನ್ನು ಅಗಲಗೊಳಿಸುವ ಮತ್ತು ದ್ವಿಪಥವಾಗಿ ಸುಧಾರಿಸುವ 2,486.78 ಕೋಟಿ ರೂ.ಗಳ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಅನುಮೋದನೆ ನೀಡಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಈ ಯೋಜನೆಯು ಅಧಿಕೃತ ಅಭಿವೃದ್ಧಿ ನೆರವು (ಒಡಿಎ) ಯೋಜನೆಯಡಿ ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಯಿಂದ 1,511.70 ಕೋಟಿ ರೂ.ಗಳ ಸಾಲವನ್ನು ಒಳಗೊಂಡಿದೆ.

  • The MSP for milling kopra (coconut) for the year 2024 will be higher than it was in 2023. It has been increased by Rs 300 per quintal. Ball kopra MSP has increased by Rs 250 per quintal. This cabinet decision comes as a relief to farmers. I thank the Prime Minister. @PMOIndia

    — H D Deve Gowda (@H_D_Devegowda) December 27, 2023 " class="align-text-top noRightClick twitterSection" data=" ">

ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ ದೇವೇಗೌಡರು: ಕೊಬ್ಬರಿಗೆ ಬೆಂಬಲ ಬೆಲೆ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ದೇವೇಗೌಡರು, 2023ರ ಸಾಲಿಗೆ ಹೋಲಿಸಿದರೆ ಈ ಬಾರಿ ಮಿಲ್ಲಿಂಗ್ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ 300 ರೂಪಾಯಿಷ್ಟು ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ. ಉಂಡೇ ಕೊಬ್ಬರಿಗೆ 250 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಸ್​ಬಿಐ ಫಿಕ್ಸೆಡ್ ಡಿಪಾಸಿಟ್ ಬಡ್ಡಿದರ ಹೆಚ್ಚಳ

Last Updated : Dec 27, 2023, 8:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.