ನವದೆಹಲಿ: ವೇತನದಾರರು ಪಿಎಫ್ ಬದಲಾಗಿ ಪಡೆಯುವ ಟಿಡಿಎಸ್ ಮೊತ್ತದಲ್ಲಿ ಇಂತಿಷ್ಟನ್ನು ತೆರಿಗೆ ರೂಪದಲ್ಲಿ ಕಟ್ಟಬೇಕು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಸುತ್ತೋಲೆ ಹೊರಡಿಸಿದೆ. ಕಳೆದ ವಾರ ಸಿಬಿಡಿಟಿ ಈ ಆದೇಶವನ್ನು ಜಾರಿ ಮಾಡಿದೆ.
ಪ್ರಸಕ್ತ ಹಣಕಾಸು ವರ್ಷಕ್ಕೆ ಅನ್ವಯಿಸುವಂತೆ ವೇತನದಾರರು ಪಡೆಯುವ ಟಿಡಿಎಸ್ ಹಣದಲ್ಲಿ ಆದಾಯ ತೆರಿಗೆಯನ್ನು ಕಡಿತ ಮಾಡಬೇಕು. ಜಾರಿಯಲ್ಲಿರುವ ದರಗಳ ಆಧಾರದ ಮೇಲೆ ಮತ್ತು ವೇತನದಾರನ ವೇತನದ ಆದಾಯದ ಸರಾಸರಿ ಲೆಕ್ಕ ಹಾಕಿ ಟ್ಯಾಕ್ಸ್ ಕಟ್ ಮಾಡಬೇಕು ಎಂದು ಸುತ್ತೋಲೆ ಹೇಳಿದೆ.
ಆದಾಯ ತೆರಿಗೆ ಕಾಯಿದೆ-1961ರ ಸೆಕ್ಷನ್ 192ರ ಅಡಿಯಲ್ಲಿ ವೇತನದಲ್ಲಿ ತೆರಿಗೆ ಕಡಿತದ ಕುರಿತು ಉದ್ಯೋಗದಾತರ ಬಾಧ್ಯತೆಯನ್ನು ಸುತ್ತೋಲೆಯು ವಿವರಿಸುತ್ತದೆ. ಅಲ್ಲದೇ, ವೇತನದಾರರು ಪಡೆಯುವ ಸಂಬಳ, ಲಾಭ ಮತ್ತದರ ಸಂಪೂರ್ಣ ವಿವರಗಳನ್ನು ತೆರಿಗೆ ಇಲಾಖೆಗೆ ನೀಡಬೇಕು ಎಂದು ಸುತ್ತೋಲೆ ತಿಳಿಸಿದೆ.
ಓದಿ: ಬಿಲಿಯನ್ ಡಾಲರ್ ವೆಚ್ಚದಲ್ಲಿ 500 ವಿಮಾನಗಳ ಖರೀದಿಗೆ ಮುಂದಾದ ಏರ್ ಇಂಡಿಯಾ?