ಮುಂಬೈ, ಮಹಾರಾಷ್ಟ್ರ: ಎಲ್ಲಾ ಬ್ಯಾಂಕ್‌ಗಳು ಮತ್ತು ಎಟಿಎಂ ಸೆಂಟರ್ಗಳಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಅನ್ನು ಬಳಸುವ ಮೂಲಕ ಕಾರ್ಡ್-ರಹಿತ ನಗದು ಪಡೆಯುವ ಸೌಲಭ್ಯವನ್ನು ಲಭ್ಯವಾಗುವಂತೆ ಮಾಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತಾಪಿಸಿದೆ. ಹಣಕಾಸು ನೀತಿಯನ್ನು ಘೋಷಿಸುವ ವೇಳೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ಎಟಿಎಂ ಕೇಂದ್ರಗಳಲ್ಲಿ ಕಾರ್ಡ್ ರಹಿತ ನಗದು ಹಿಂಪಡೆಯುವ ಸೌಲಭ್ಯವನ್ನು ಕೆಲವೇ ಬ್ಯಾಂಕ್‌ಗಳು ನೀಡುತ್ತಿವೆ. ಈಗ ಎಲ್ಲಾ ಬ್ಯಾಂಕ್‌ಗಳು ಮತ್ತು ಎಟಿಎಂ ಕೇಂದ್ರಗಳಲ್ಲಿ ಯುಪಿಐ ಅನ್ನು ಬಳಸಿ ಕಾರ್ಡ್‌ರಹಿತ ನಗದು ಪಡೆಯುವ ಸೌಲಭ್ಯ ಲಭ್ಯವಾಗುವಂತೆ ಮಾಡಲು ಪ್ರಸ್ತಾಪ ಮಾಡಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಣಕಾಸು ನೀತಿ ಘೋಷಿಸುವ ವೇಳೆ ಮಾಹಿತಿ ನೀಡಿದ್ದಾರೆ.
ಕಾರ್ಡ್ ರಹಿತ ನಗದು ಪಡೆಯುವ ಸೌಲಭ್ಯದ ಅಡಿಯಲ್ಲಿ, ಗ್ರಾಹಕರು ಎಟಿಎಂಗಳಿಂದ ಹಣವನ್ನು ಪಡೆಯುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಅಗತ್ಯವಿರುವುದಿಲ್ಲ. ಈ ಮೂಲಕ ವಹಿವಾಟು ಹೆಚ್ಚಳವಾಗುತ್ತದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ದುರುಪಯೋಗ ತಪ್ಪುತ್ತದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.
ಇದನ್ನೂ ಓದಿ: ರೆಪೋ, ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿ : ಸತತ 11ನೇ ಬಾರಿಗೆ ಆರ್‌ಬಿಐ ನಿರ್ಧಾರ