ETV Bharat / business

ಆಕರ್ಷಕವಾಗಿ, ಸರಳವಾಗಿ ಬರೆಯುವ ಟ್ಯಾಲೆಂಟ್​ ನಿಮ್ಮಲಿದೆಯಾ? ಹಾಗಾದರೆ ಇಲ್ಲಿದೆ ಕಂಟೆಂಟ್​ ರೈಟರ್​ ಅವಕಾಶ - ಕಂಟೆಂಟ್​ ರೈಟರ್​ ಆಗುವುದು ಹೇಗೆ

ಜಗತ್ತಿನ ಎಲ್ಲ ವಿಷಯಗಳು ನಮ್ಮ ಅಂಗೈಯಲ್ಲೇ ಇದ್ದರೂ, ಇಂದು ತಮ್ಮ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ವೃತ್ತಿಗಳಲ್ಲಿ ಒಂದು ಕಂಟೆಂಟ್​ ರೈಟರ್. ಬೇಡಿಕೆ ಹೆಚ್ಚುತ್ತಿರುವ ಈ ವೃತ್ತಿಗೆ ತಯಾರಾಗುವುದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಕೆಲವು ಸಲಹೆಗಳು.

Can you write impressively
ಸರಳವಾಗಿ ಬರೆಯುವ ಟ್ಯಾಲೆಂಟ್​ ನಿಮ್ಮಲಿದೆಯಾ
author img

By

Published : Jan 25, 2023, 8:01 PM IST

ಹೈದರಾಬಾದ್​: ರಸ್ತೆಬದಿ ಗೋಡೆಗಳಲ್ಲಿ ಅಥವಾ ವಾಹನಗಳ ಮೇಲೆ ಜಾಹೀರಾತು ಪೋಸ್ಟರ್​ಗಳನ್ನು ಸಾಮಾನ್ಯವಾಗಿ ನಾವು ಪ್ರತಿದಿನ ನೋಡುತ್ತೇವೆ. ಈ ರೀತಿಯ ಕೆಲವೊಂದು ಜಾಹೀರಾತುಗಳು ಅದರಲ್ಲಿ ಪಂಚಿಂಗ್​ ಲೈನ್​ಗಳು, ಡೈಲಾಗ್​ಗಳಿಂದಲೇ ಫೇಮಸ್​ ಆಗಿರುತ್ತವೆ. ಆ ಸಾಲುಗಳನ್ನು ನೋಡಿದರೆ ಸಾಕು ಅದರ ಕಂಪನಿಯ ಹೆಸರೇ ನೆನಪಿಗೆ ಬರುವಷ್ಟು ಕ್ಯಾಚಿ ಆಗಿರುತ್ತವೆ. ಈ ಕ್ಯಾಚಿ ಡೈಲಾಗ್​ಗಳ ಮೂಲಕವೇ ಕೆಲವು ಕಂಪನಿಗಳು ಗ್ರಾಹಕರನ್ನು ಸೆಳೆಯುತ್ತವೆ.

ಇನ್ನೊಂದು ನಾವು ಯಾವುದಾದರೂ ಎಲೆಕ್ಟ್ರಾನಿಕ್​ ವಸ್ತುಗಳನ್ನು ಖರೀದಿಸಿ ಮನೆಗೆ ತರುತ್ತೇವೆ. ಈ ಎಲೆಕ್ಟ್ರಾನಿಕ್​ ವಸ್ತುಗಳ ಬಗ್ಗೆ, ಅವುಗಳನ್ನು ಉಪಯೋಗಿಸುವುದರ ಬಗ್ಗೆ ಎಲ್ಲರಿಗೂ ಅತೀ ವಿರಳ. ವಸ್ತು ತಂದೊಡನೆ ಅದನ್ನು ಉಪಯೋಗಿಸುವುದು ಹೇಗೆ ಎನ್ನುವುದು ಗೊಂದಲವಾಗಿದ್ದರೆ ತಕ್ಷಣ ನಾವು ಅದರೊಳಗೆ ಇರುವ ಪುಟ್ಟ ಪುಸ್ತಕವನ್ನೇ(ಟೈಟಲ್​ ಬುಕ್​) ತೆರೆದು ನೋಡುತ್ತೇವೆ. ಕಬ್ಬಿಣದ ಕಡಲೆ ತಂತ್ರಜ್ಞಾನದ ಕುರಿತು ಸರಳವಾಗಿ ಆ ಪುಸ್ತಕದಲ್ಲಿ ಬರೆದು ವಿವರಿಸಲಾಗಿರುತ್ತದೆ.

ವಿಷಯ ತಲುಪಿಸುವುದು ಒಂದು ಕಲೆ: ಎಲೆಕ್ಟ್ರಾನಿಕ್​ ವಸ್ತು ಖರೀದಿಸುವ ಒಬ್ಬ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತೆ ಸರಳವಾಗಿ, ಆಕರ್ಷವಾಗಿ ಅದನ್ನು ಬರೆಯಲಾಗಿರುತ್ತದೆ. ಅಲ್ಲಿರುವ ಸಮಫೂರ್ಣವಾದ, ಸ್ಪಷ್ಟವಾದ ವಿವರಣೆಯನ್ನು ಓದಿ ನಮ್ಮ ಅನುಮಾನಗಳನ್ನು ನಾವು ನಿವಾರಿಸಿಕೊಳ್ಳುತ್ತೇವೆ. ಈಗ ಯಾವುದೇ ವಿಷಯದ ಬಗ್ಗೆ ಆನ್​ಲೈನ್​ನಲ್ಲಿ ಸರ್ಚ್​ ಮಾಡಿದರೆ ಕ್ಷಣ ಮಾತ್ರದಲ್ಲಿ ಮಾಹಿತಿ ಲಭ್ಯವಾಗುತ್ತದೆ. ಆದರೆ ಅದೇ ಮಾಹಿತಿಯನ್ನು ಸರಳವಾಗಿ, ಮನಮುಟ್ಟುವಂತೆ ತಲುಪಿಸುವುದು ಕೂಡ ಒಂದು ಕಲೆ.

ಈ ರೀತಿ ಸರಳವಾಗಿ ಬರೆಯುವವರು ಯಾರು ಎಂದು ಯೋಚಿಸುತ್ತಿದ್ದೀರಾ? ಅವರೇ ಕಂಟೆಂಟ್​ ರೈಟರ್ಸ್​. ಜಗತ್ತಿನಲ್ಲಿ ಈ ರೀತಿ ಯಾವುದೇ ವಿಷಯಗಳ ಬಗ್ಗೆ ಸರಳವಾಗಿ ಸ್ಪಷ್ಟವಾಗಿ, ವಿಸ್ತಾರವಾದ ಸುಂದರವಾದ ಭಾಷೆಯಲ್ಲಿ ಬರೆಯುವವರ ಅಗತ್ಯವಿದೆ. ಎಲ್ಲವೂ ಅಂಗೈಯಲ್ಲೇ ಸಿಗುತ್ತಿರುವ ಈ ಹೊತ್ತಿನಲ್ಲಿಯೂ ಅಂತಹ ಬರಹಗಾರರಿಗೆ ಬೇಡಿಕೆ ಹೆಚ್ಚಿದೆ.

ಒಂದು ಪೊರಕೆಯಿಂದ ಹಿಡಿದು ಚೀನಾದ ಮಹಾಗೋಡೆಯವರೆಗೂ ಯಾವುದೇ ವಸ್ತು, ವಿಷಯದ ಬಗ್ಗೆ ಆಸಕ್ತಿದಾಯಕವಾಗಿ, ಓದಲು ಖುಷಿಯಾಗುವಂತೆ ಬರೆಯುವುದು ಒಂದು ಕಲೆ. ಯಾವುದೇ ಒಂದು ಬರವಣಿಗೆ ಆಗಿದ್ದರೂ ಆದನ್ನು ಕಂಟೆಂಟ್​ ರೈಟರ್​ ಒಬ್ಬರು ಕುಳಿತು ಸಂಶೋಧನೆ ಮಾಡಿ ಬರೆದಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂತಹ ಬರಹಗಾರರು ಉತ್ಪನ್ನ ಕಂಪನಿಗಳು, ವೆಬ್‌ಸೈಟ್‌ಗಳು, ವಿವಿಧ ರೀತಿಯ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿದ್ದಾರೆ

ಇವಿಷ್ಟೇ ಅಲ್ಲ, ಪಿಆರ್ ಡಿಪಾರ್ಟ್​ಮೆಂಟ್​ಗಳು, ಡಾಕ್ಯುಮೆಂಟೇಶನ್ ಅಗತ್ಯವಿರುವವರು, ಯಾವುದೇ ಕಂಪನಿಗಳಿಗೆ ಇಂತಹ ಬರಹಗಾರರು ಅಗತ್ಯ ತುಂಬಾ ಇದೆ. ಅದರಲ್ಲೂ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಬರೆಯಲು ತಿಳಿದಿರುವವರಿಗೆ ಈ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಅದಕ್ಕಾಗಿಯೇ ಉದ್ಯೋಗಾಕಾಂಕ್ಷಿಗಳು ಇದನ್ನು ವೃತ್ತಿಯ ಒಂದು ಆಯ್ಕೆಯಾಗಿಯೂ ಪರಿಗಣಿಸಬಹುದು.

ಕಂಟೆಂಟ್​ ರೈಟರ್​ ಆಗುವುದು ಹೇಗೆ?: ಕಂಟೆಂಟ್​ ರೈಟಿಂಗ್​ನ ವಿಶೇಷತೆಯೆಂದರೆ ಈ ಕ್ಷೇತ್ರಕ್ಕೆ ಬರಲು ಇಂತಹದ್ದೇ ಪದವಿಗಳನ್ನು ಅಧ್ಯಯನ ಮಾಡಿರಬೇಕು ಎಂದಿಲ್ಲ. ನಿಮ್ಮ ವಿದ್ಯಾರ್ಹತೆ ಏನೇ ಇರಲಿ. ಈ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯ ಏನು ಎಂಬುದನ್ನು ಪ್ರೂವ್​ ಮಾಡಲು ಅವಕಾಶವಿದೆ. ಆದರೆ ಮಾಡಬೇಕಾಗಿರುವ ಮೊದಲ ವಿಷಯವೆಂದರೆ.. ಆದಷ್ಟು ಹೆಚ್ಚು ಹೆಚ್ಚು ಓದಬೇಕು. ನೀವು ಎಷ್ಟು ಹೆಚ್ಚು ಓದುತ್ತೀರೋ ಅಷ್ಟು ಚೆನ್ನಾಗಿ ಬರೆಯುತ್ತೀರಿ. ನೀವು ಬರೆಯಲು ಬಯಸುವ ಭಾಷೆಯಲ್ಲಿ ಸಾಹಿತ್ಯವನ್ನು ಓದಲು ಪ್ರಯತ್ನಿಸಿ. ಪ್ರಸಿದ್ಧ ಲೇಖಕರು ಬರೆದ ವಿವಿಧ ರೀತಿಯ ಸಾಹಿತ್ಯ ಪುಸ್ತಕಗಳನ್ನು ಓದುವುದರಿಂದ ಅವರ ತಿಳಿವಳಿಕೆ ಹೆಚ್ಚಾಗುತ್ತದೆ. ಆಂತರಿಕವಾಗಿ ನಮ್ಮ ಬರವಣಿಗೆಯ ಶೈಲಿಯನ್ನು ನಮ್ಮ ಓದು ಸುಧಾರಿಸುತ್ತದೆ. ಭಾಷೆಯಲ್ಲಿ ಹಿಡಿತ ಸಿಕ್ಕಿದರೆ ಯಾವುದನ್ನಾದರೂ ಸರಳವಾಗಿ, ಅಸಾಧಾರಣವಾಗಿ ಹೇಳುವ ಪ್ರತಿಭೆ ನಿಮ್ಮದಾಗುತ್ತದೆ!

ಹೆಚ್ಚು ಹೆಚ್ಚು ಓದುತ್ತಿದ್ದಂತೆಯೇ ಸ್ವಂತ ಬರೆಯುವುದನ್ನು ಅಭ್ಯಾಸ ಮಾಡಿ. ನಮ್ಮ ಆಯ್ಕೆಯ ವಿಷಯವನ್ನು ಆರಿಸಿಕೊಂಡು ಅದನ್ನು ಓದುಗರಿಗೆ ಪ್ರಸ್ತುತಪಡಿಸಲು ಸಂಪೂರ್ಣ ವಿಶ್ಲೇಷಣಾತ್ಮಕ ರೀತಿಯಲ್ಲಿ ಬರೆಯಬಹುದೇ ಎಂಬುದನ್ನು ನೋಡಿ, ಪ್ರಯತ್ನ ಪಡಿ. ಸಾಧ್ಯವಾದರೆ, ನೀವು ಬರೆದಿರುವುದನ್ನು ಇತರ ನಿಮ್ಮ ಸ್ನೇಹಿತರಿಗೆ ಅಥವಾ ಅದೇ ಕ್ಷೇತ್ರದಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ನಿಮ್ಮ ಸ್ನೇಹಿತರಿಗೆ ತೋರಿಸಿ ಮತ್ತು ಅವರ ಅಭಿಪ್ರಾಯಗಳನ್ನು ಕೇಳಿ. ತಪ್ಪುಗಳನ್ನು ಸರಿಪಡಿಸಿಕೊಂಡು ಹೊಸತನದೊಂದಿಗೆ ಬರೆಯಲು ಪ್ರಯತ್ನಿಸಿ

ಕಂಟೆಂಟ್​ನ ವಿವಿಧ ಪ್ರಕಾರಗಳು: ಈ ಕಂಟೆಂಟ್​ಗಳಲ್ಲಿ ಹಲವು ಪ್ರಕಾರಗಳಿವೆ. ವೆಬ್‌ಸೈಟ್‌ಗಳು, ಬ್ಲಾಗ್‌ಗಳು, ಲೇಖನಗಳು, ಇ-ಪುಸ್ತಕಗಳು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು, ಆನ್‌ಲೈನ್ ಜಾಹೀರಾತು ಸಾಮಗ್ರಿಗಳು, ಉತ್ಪನ್ನ ವಿವರಣೆಗಳು, ಸಾರ್ವಜನಿಕ ಸಂಪರ್ಕ ಸಾಮಗ್ರಿಗಳು, ಮಾರ್ಕೆಟಿಂಗ್ ಇ-ಮೇಲ್‌ಗಳು, ವಿಡಿಯೋ ನಕಲು, ಪಾಡ್‌ಕಾಸ್ಟ್ ಸ್ಕ್ರಿಪ್ಟ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ, ವಾಣಿಜ್ಯ ಉದ್ದೇಶಗಳಿಗಾಗಿ ಆನ್‌ಲೈನ್ ಜಾಹೀರಾತು ಮತ್ತು ಮಾರ್ಕೆಟಿಂಗ್‌ನ ಹೆಚ್ಚಳದೊಂದಿಗೆ, ಡಿಜಿಟಲ್ ಕಾಪಿರೈಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

SEO (ಸರ್ಚ್ ಇಂಜಿನ್ ಆಪ್ಟಿಮೈಸೇಶನ್): SEO ಹೆಚ್ಚಿನ ಬರಹಗಾರರು ಬಳಸುವ ಒಂದು ವಿಧಾನವಾಗಿದೆ. ಆನ್‌ಲೈನ್ ವಿಷಯ ಬರೆಯುವವರಿಗೆ ಇದು ತುಂಬಾ ಸಹಾಯಕವಾಗಿದೆ. ನೀವು ಬರೆಯಲು ಬಯಸುವ ಕಂಟೆಂಟ್​ಗಳಲ್ಲಿ ಕೀವರ್ಡ್‌ಗಳನ್ನು ಬಳಸುವುದರಿಂದ, ಕಂಟೆಂಟ್​ ಹೆಚ್ಚು ಜನರನ್ನು ತಲುಪುತ್ತದೆ. ಇದನ್ನು ಕೂಲಂಕಷವಾಗಿ ತಿಳಿದುಕೊಳ್ಳಲು ಆನ್‌ಲೈನ್‌ನಲ್ಲಿ ಟ್ಯುಟೋರಿಯಲ್‌ಗಳು ಮತ್ತು ಮಾಹಿತಿ ಲಭ್ಯವಿದೆ. ಇದರ ಸಹಾಯದಿಂದ ಕಂಟೆಂಟ್​ ಓದುಗರು ಹೆಚ್ಚು ತಲುಪಬಹುದು.

ಇದು ಟ್ಯಾಲೆಂಟ್​ ನಿಮ್ಮಲಿರಲಿ: ಇದರಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಬಯಸುವವರಿಗೆ ವಿಶ್ಲೇಷಣಾತ್ಮಕ ಕೌಶಲ್ಯಗಳ ಜೊತೆಗೆ, ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸುವುದು, ಅದನ್ನು ಒಟ್ಟುಗೂಡಿಸುವ ಮತ್ತು ಅವರ ಶೈಲಿಯಲ್ಲಿ ಬರೆಯುವ ಸಾಮರ್ಥ್ಯ, ವಿಮರ್ಶಾತ್ಮಕ ಚಿಂತನೆ, ವೇಗದ ಮತ್ತು ಸಡಿಲವಾದ ಸಂಪಾದನೆ, ಸಾಕಷ್ಟು ವೇಗದ ಟೈಪಿಂಗ್ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಸೃಜನಶೀಲತೆ ಬೇಕು. ಒಂದು ಮೊದಲೇ ಇವೆಲ್ಲ ಇಲ್ಲದಿದ್ದರೂ ಇವೆಲ್ಲಕ್ಕೆ ನಿಧಾನವಾಗಿ ಒಗ್ಗಿಕೊಳ್ಳಲು ಏಕಾಗ್ರತೆ, ಆಸಕ್ತಿ ಬೇಕು.

ಕೋರ್ಸ್‌ಗಳು: ಭಾಷೆಯಲ್ಲಿ ಪದವಿಗಳು- ಸಾಹಿತ್ಯ, ಪಿಜಿ, ಪತ್ರಿಕೋದ್ಯಮ ಮತ್ತು ಸಂವಹನಗಳು ಕಂಟೆಂಟ್​ ಬರವಣಿಗೆಗೆ ಸಂಬಂಧಿಸಿದ ಸಾಂಪ್ರದಾಯಿಕ ಕೋರ್ಸ್‌ಗಳಾಗಿವೆ. ಇದಕ್ಕಾಗಿ ಆನ್‌ಲೈನ್ ಕೋರ್ಸ್‌ಗಳು ವಾರಗಳಿಂದ ತಿಂಗಳವರೆಗೆ ಲಭ್ಯವಿದೆ. ಇವುಗಳ ಜೊತೆಗೆ ಕಂಟೆಂಟ್ ಮಾರ್ಕೆಟಿಂಗ್ ಸ್ಟ್ರಾಟಜಿ, ಪ್ರಚಾರದ ಆಡಿಯೋ-ವಿಡಿಯೋ ಮೇಕಿಂಗ್, ಸ್ಕ್ರಿಪ್ಟ್ ರೈಟಿಂಗ್ ಮುಂತಾದ ಹಲವು ವಿಭಾಗಗಳಲ್ಲಿ ಕೋರ್ಸ್‌ಗಳನ್ನು ಮಾಡಲು ಅವಕಾಶವಿದೆ.

Coursera, Udemy, ಮತ್ತು Simplelarn ನಂತಹ ಪ್ರಸಿದ್ಧ ಸಂಸ್ಥೆಗಳು ವಿವಿಧ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಇವುಗಳನ್ನು ನೀಡುತ್ತಿವೆ. ಬರವಣಿಗೆಯನ್ನು ಸಂಪೂರ್ಣವಾಗಿ ಕಲಿತ ನಂತರ, ನೀವು ಯಾವುದೇ ಕಂಪನಿಯಲ್ಲಿ ಅಥವಾ ಸ್ವತಂತ್ರ ಉದ್ಯೋಗಿಯಾಗಿ ಕೆಲಸ ಮಾಡಲು ಪ್ರಯತ್ನಿಸಬಹುದು.

ನಿಮ್ಮಲ್ಲಿರಬೇಕಾದ ಕೌಶಲ್ಯಗಳು ಯಾವುವು?: ಈ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು, ಮೊದಲು ಬೇಕಿರುವುದು ಭಾಷೆಯ ಮೇಲಿನ ಪಾಂಡಿತ್ಯ. ತೆಲುಗು, ಇಂಗ್ಲಿಷ್, ಹಿಂದಿ ಯಾವುದೇ ಆಗಿರಬಹುದು, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಅರ್ಥಪೂರ್ಣ, ದೋಷರಹಿತ ಮತ್ತು ಸರಿಯಾದ ಮಾಹಿತಿಯನ್ನು ಬರೆಯಲು ಸಾಕಷ್ಟು ಭಾಷಾ ಜ್ಞಾನವನ್ನು ಪಡೆದುಕೊಳ್ಳಬೇಕು. ಶಬ್ದಕೋಶ ಮತ್ತು ವ್ಯಾಕರಣದ ಮೇಲೆ ಹಿಡಿತ ಇರಲಿ.

ಅದೇ ಸಮಯದಲ್ಲಿ, ಬರವಣಿಗೆಯ ವಿಷಯದ ಬಗ್ಗೆ ಆಳವಾದ ಸಂಶೋಧನೆ ಮಾಡುವ ತಾಳ್ಮೆ ಇರಬೇಕು. ಮತ್ತು ಅಸ್ತಿತ್ವದಲ್ಲಿರುವ ಮಾಹಿತಿಯ ಸಂಪೂರ್ಣ ಅಧ್ಯಯನವನ್ನು ಅಭ್ಯಾಸ ಮಾಡಬೇಕು. ನಾವು ಯಾವುದನ್ನಾದರೂ ಹೇಳಲು ಬಯಸಿದಾಗ, ನಾವು ಮೊದಲು ಅವುಗಳ ಬಗ್ಗೆ ಸಂಪೂರ್ಣ ತಿಳುವಳಿಕೆ ಮತ್ತು ಅಭಿಪ್ರಾಯಗಳನ್ನು ಹೊಂದಿರಬೇಕು. ಆ ಪರಿಕಲ್ಪನೆಗಳನ್ನು ಇತರರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ವಿವರವಾಗಿ ವಿವರಿಸಲು ಭಾಷಾ ಕೌಶಲ್ಯಗಳು ಬೇಕಾಗುತ್ತವೆ. ಇವುಗಳಿಗೆ ಒಗ್ಗಿಕೊಂಡವರು ಕಂಟೆಂಟ್​ ರೈಟಿಂಗ್​ ಕ್ಷೇತ್ರದಲ್ಲಿ ತಮ್ಮ ಕೌಶಲ್ಯ ತೋರಿಸಬಹುದು.

ಇದನ್ನೂ ಓದಿ: ಹಸಿವೆ ನೀಗಿಸಲು ಮಗು ಕಟ್ಟಿಕೊಂಡು ಕೂಲಿ ಮಾಡ್ತಿದ್ದ ಮಹಿಳೆ ಇಂದು 10 ಮಂದಿಗೆ ಉದ್ಯೋಗದಾತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.