ಸೂರತ್(ಗುಜರಾತ್): ಆರ್‌ಬಿಐ 2000 ರೂಪಾಯಿ ನೋಟುಗಳ ಚಲಾವಣೆಯನ್ನು ಹಿಂಪಡೆದಿದೆ. ಇದರಿಂದ ಜನರು ತಮ್ಮ ಬಳಿ ಇರುವ 2 ಸಾವಿರ ರೂ. ನೋಟುಗಳನ್ನು ಹಲವು ರೀತಿಯಲ್ಲಿ ಖರ್ಚು ಮಾಡಿದ್ದಾರೆ ಮತ್ತು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸೂರತ್‌ನ ಪ್ರಾದೇಶಿಕ ಸಾರಿಗೆ ಕಚೇರಿಗೆ ಐಷಾರಾಮಿ ಬಸ್ ನಿರ್ವಾಹಕರೊಬ್ಬರು 2 ಸಾವಿರ ನೋಟುಗಳೊಂದಿಗೆ ತಮ್ಮ ಬಾಕಿ ತೆರಿಗೆಯನ್ನು ಪಾವತಿಸಿದ್ದಾರೆ. 6 ಲಕ್ಷ ತೆರಿಗೆಯಲ್ಲಿ 4 ಲಕ್ಷವನ್ನು 2 ರೂಪಾಯಿ ನೋಟುಗಳೊಂದಿಗೆ ಬಸ್ ನಿರ್ವಾಹಕ ಪಾವತಿಸಿದ್ದು ಈಗ ಎಲ್ಲೆಡೆ ದೊಡ್ಡ ಸುದ್ದಿಯಾಗಿದೆ.
ಉಳಿದ 2 ಲಕ್ಷ ರೂಪಾಯಿಗಳನ್ನು 100 ಮತ್ತು 500 ನೋಟುಗಳೊಂದಿಗೆ ಪಾವತಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಎರಡು ಸಾವಿರ ನೋಟುಗಳನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ಸಾವಿರ ನೋಟುಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕೆಲವು ದಿನಗಳ ಹಿಂದೆ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ರಾಜ್‌ಕೋಟ್‌ನ ಬಸ್ ನಿರ್ವಾಹಕ ಆರ್‌ಟಿಒ ಅಧಿಕಾರಿಗಳ ಕೈ ಸಿಕ್ಕಿಬಿದ್ದರು. ನಂತರ ಬಸ್ಅನ್ನು ಆರ್‌ಟಿಒ ಕಚೇರಿಗೆ ತರಲಾಗಿತ್ತು. ಆರ್‌ಬಿಐ 2 ಸಾವಿರ ನೋಟನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿದ ಮರುದಿನವೇ ಬಸ್ ನಿರ್ವಾಹಕರು ಒಂದೇ ಬಾರಿಗೆ 6 ಲಕ್ಷ ರೂ. ಬಾಕಿ ತೆರಿಗೆಯನ್ನು ಪಾವತಿಸಿದ್ದಾರೆ.
ಸದ್ಯ ಜನರು ಶಾಪಿಂಗ್‌ಗಾಗಿ 2 ಸಾವಿರ ನೋಟುಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಸೂಪರ್ ಸ್ಟೋರ್‌ಗಳು ಮತ್ತು ಕಿರಾಣಿ ಅಂಗಡಿಗಳ ವಸ್ತುಗಳನ್ನು ಖರೀದಿಸಲು ಜನರು ಈಗ 2 ಸಾವಿರ ನೋಟುಗಳನ್ನು ತರುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಪೆಟ್ರೋಲ್ ಬಂಕ್ಗಳಲ್ಲಿ ಇದೇ ಪರಿಸ್ಥಿತಿ ಇದೆ ಮತ್ತು ಆನ್‌ಲೈನ್ ಪಾವತಿ ಮಾಡುವ ಜನರು ಈಗ 2 ಸಾವಿರ ನೋಟುಗಳ ಮೂಲಕ ವಹಿವಾಟು ನಡೆಸುತ್ತಿದ್ದಾರೆ. 2 ಸಾವಿರ ನೋಟು ಬಂದ್ ಆದ ಪರಿಣಾಮ ಸೂರತ್ ರೈಲು ನಿಲ್ದಾಣದ ರಿಸರ್ವೇಶನ್ ಟಿಕೆಟ್ ಕೌಂಟರ್ ನಲ್ಲಿ ಹೆಚ್ಚಾಗಿ ಜನರು ನಗದು ಮೂಲಕ ಪಾವತಿ ಮಾಡಿದ್ದಾರೆ.
ರಿಸರ್ವ್ ಬ್ಯಾಂಕ್ ಶುಕ್ರವಾರ 2 ಸಾವಿರ ರೂಪಾಯಿ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಆದರೆ ಸಾರ್ವಜನಿಕರಿಗೆ ಅಂತಹ ನೋಟುಗಳನ್ನು ಖಾತೆಗಳಲ್ಲಿ ಜಮಾ ಮಾಡಲು ಅಥವಾ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಸಮಯ ನೀಡಿದೆ. ನವೆಂಬರ್ 2016 ರಲ್ಲಿ ಹಳೆಯ 500 ಮತ್ತು 1,000 ರೂ ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯಗೊಳಿಸಿದಾಗ, 2,000 ರೂ. ನೋಟುಗಳು ಚಲಾವಣೆಗೆ ಬಂದಿದ್ದವು.
ಆರ್ಬಿಐನಿಂದ ಮಹತ್ವದ ನಿರ್ಧಾರ: ಆರ್‌ಬಿಐ ಮಹತ್ವದ ನಿರ್ಧಾರಯೊಂದನ್ನು ತೆಗೆದುಕೊಂಡಿದೆ. 2,000 ರೂ. ಮುಖಬೆಲೆಯ ನೋಟ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂತೆಗೆದುಕೊಂಡಿದೆ. ಆದರೆ, 2,000 ರೂ. ಬೆಲೆಯ ಲೀಗಲ್ ಟೆಂಡರ್ ಮುಂದುವರಿಯಲಿದೆ ಎಂದು ಆರ್‌ಸಿಬಿ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 30ರೊಳಗೆ ನಿಮ್ಮ ಬಳಿ ಇರುವ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಬಹುದು. ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1ರಿಂದ 2,000 ರೂ. ನೋಟುಗಳು ಚಲಾವಣೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ಹೊರಡಿಸಿರುವ ಸುತ್ತೋಲೆಯಲ್ಲಿ ದೃಢಪಡಿಸಿದೆ. ಹೀಗಾಗಿ ಯಾರ ಬಳಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಸಂಗ್ರಹವಿದೆಯೋ ಅಂತಹವರು ತಕ್ಷಣ ಬ್ಯಾಂಕ್ಗಳಿಗೆ ಜಮೆ ಮಾಡುವಂತೆ ಆರ್‌ಬಿಐ ಕೋರಿಕೊಂಡಿದೆ.
ಇದನ್ನೂ ಓದಿ:2000 ರೂಪಾಯಿ ನೋಟುಗಳ ವಿನಿಮಯಕ್ಕೆ ಯಾವುದೇ ಐಡಿ ಕಾರ್ಡ್, ಅರ್ಜಿ ತುಂಬುವ ಅಗತ್ಯವಿಲ್ಲ: ಎಸ್ಬಿಐ