ETV Bharat / business

ಬಿಎಸ್​​ಇ ಸೆನ್ಸೆಕ್ಸ್​ 365 ಪಾಯಿಂಟ್​ ಕುಸಿತ; 19,300ಕ್ಕಿಂತ ಕೆಳಗಿಳಿದ ನಿಫ್ಟಿ

ಶುಕ್ರವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಇಳಿಕೆ ಕಂಡಿವೆ.

Sensex declines by 365 points on selling in financials

author img

By ETV Bharat Karnataka Team

Published : Aug 25, 2023, 6:17 PM IST

ಮುಂಬೈ : ಭಾರತದ ಷೇರು ಮಾರುಕಟ್ಟೆಗಳು ಇಂದು (ಶುಕ್ರವಾರ) ಇಳಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿವೆ. ದೇಶೀಯ ಬೆಂಚ್ ಮಾರ್ಕ್ ಬಿಎಸ್​ಇ ಸೆನ್ಸೆಕ್ಸ್ 365 ಪಾಯಿಂಟ್‌ಗಳಷ್ಟು ಕುಸಿದಿದೆ ಮತ್ತು ನಿಫ್ಟಿ ಶುಕ್ರವಾರದ ಅಸ್ಥಿರ ವಹಿವಾಟಿನಲ್ಲಿ 19,300 ಮಟ್ಟಕ್ಕಿಂತ ಕೆಳಗಿಳಿದಿದೆ.

ಸತತ ಎರಡನೇ ದಿನವೂ ಕುಸಿದ ಬಿಎಸ್ಇ ಸೆನ್ಸೆಕ್ಸ್ 365.83 ಪಾಯಿಂಟ್ಸ್ ಅಥವಾ ಶೇಕಡಾ 0.56 ರಷ್ಟು ಕುಸಿದು 64,886.51 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 519.77 ಪಾಯಿಂಟ್ ಅಥವಾ ಶೇಕಡಾ 0.79 ರಷ್ಟು ಕುಸಿದು 64,732.57 ಕ್ಕೆ ತಲುಪಿತ್ತು. ಎನ್ಎಸ್ಇ ನಿಫ್ಟಿ 120.90 ಪಾಯಿಂಟ್ಸ್ ಅಥವಾ ಶೇಕಡಾ 0.62 ರಷ್ಟು ಕುಸಿದು 19,265.80 ಕ್ಕೆ ತಲುಪಿದೆ.

ಸೆನ್ಸೆಕ್ಸ್​​ನಲ್ಲಿ ಲಾರ್ಸೆನ್ ಆಂಡ್ ಟರ್ಬೋ, ಜೆಎಸ್​ಡಬ್ಲ್ಯೂ ಸ್ಟೀಲ್, ಇಂಡಸ್ಇಂಡ್ ಬ್ಯಾಂಕ್, ಪವರ್ ಗ್ರಿಡ್, ಐಟಿಸಿ, ಮಹೀಂದ್ರಾ & ಮಹೀಂದ್ರಾ, ಎನ್​ಟಿಪಿಸಿ, ಎಚ್​ಡಿಎಫ್​ಸಿ ಬ್ಯಾಂಕ್, ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಮೋಟಾರ್ಸ್ ಪ್ರಮುಖವಾಗಿ ಕುಸಿತ ಕಂಡವು. ಬಜಾಜ್ ಫಿನ್ ಸರ್ವ್, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಭಾರ್ತಿ ಏರ್ ಟೆಲ್ ಮತ್ತು ಆಕ್ಸಿಸ್ ಬ್ಯಾಂಕ್ ಲಾಭ ಗಳಿಸಿದವು.

ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಸ್ಟ್​ ಆದ ನಂತರ ಇದೇ ಮೊದಲ ಬಾರಿಗೆ ಏರಿಕೆಯಲ್ಲಿ ಕೊನೆಗೊಂಡಿತು. ಎನ್ಎಸ್ಇಯಲ್ಲಿ ಈ ಷೇರು 221.60 ರೂ.ಗೆ ಕೊನೆಗೊಂಡಿತು. ಇದು ಹಿಂದಿನ ದಿನದ ಮುಕ್ತಾಯವಾಗಿದ್ದ 213.45 ರೂ.ಗಿಂತ ಶೇಕಡಾ 3.82 ರಷ್ಟು ಹೆಚ್ಚಾಗಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ನಕಾರಾತ್ಮಕ ವಲಯದಲ್ಲಿ ವಹಿವಾಟು ನಡೆಸಿದವು. ಆದರೆ ಯುರೋಪಿಯನ್ ಮಾರುಕಟ್ಟೆಗಳು ಏರಿಕೆಯಲ್ಲಿ ವಹಿವಾಟು ನಡೆಸಿವೆ. ಯುಎಸ್ ಮಾರುಕಟ್ಟೆಗಳು ಗುರುವಾರ ಕೆಳಮಟ್ಟದಲ್ಲಿ ಕೊನೆಗೊಂಡವು. ಜಾಗತಿಕ ತೈಲ ಬೆಂಚ್​ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 1.25 ರಷ್ಟು ಏರಿಕೆಯಾಗಿ ಬ್ಯಾರೆಲ್​ಗೆ 84.40 ಡಾಲರ್​ಗೆ ತಲುಪಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಗುರುವಾರ 1,524.87 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ. ರೂಪಾಯಿ ತನ್ನ ಮೂರು ದಿನಗಳ ಏರಿಕೆಯನ್ನು ಕಳೆದುಕೊಂಡಿತು. ಶುಕ್ರವಾರ ರೂಪಾಯಿಯು ಯುಎಸ್ ಡಾಲರ್ ವಿರುದ್ಧ 13 ಪೈಸೆ ಕುಸಿದು 82.69 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇಂಟರ್​ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ರೂಪಾಯಿಯು 82.60 ರಲ್ಲಿ ದುರ್ಬಲವಾಗಿ ಪ್ರಾರಂಭವಾಯಿತು ಮತ್ತು ಡಾಲರ್ ವಿರುದ್ಧ 82.72 ಕ್ಕೆ ತಲುಪಿತ್ತು. ಇದು ಅಂತಿಮವಾಗಿ ಡಾಲರ್ ವಿರುದ್ಧ 82.69 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು.

ಇದನ್ನೂ ಓದಿ : ಸ್ಯಾಮ್​ಸಂಗ್​ ಮಡಚುವ ಫೋನ್​ಗಳಿಗೆ 1.5 ಲಕ್ಷ ಪ್ರಿ-ಆರ್ಡರ್; ಇಎಂಐ ಮೂಲಕವೂ ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.