ETV Bharat / business

ಟಿಸಿಎಸ್‌ನ ನೇಮಕಾತಿ ಹಗರಣ.. 100 ಕೋಟಿ ವ್ಯವಹಾರ ನಡೆದಿರುವ ಶಂಕೆ: ನಾಲ್ಕು ಅಧಿಕಾರಿಗಳ ಅಮಾನತು!

author img

By

Published : Jun 24, 2023, 11:44 AM IST

ಟಿಸಿಎಸ್‌ನ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದರ ಬಗ್ಗೆ ವರದಿಗಳು ಹೊರಬಿದ್ದ ನಂತರ ಶುಕ್ರವಾರ ಬಿಎಸ್‌ಇಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಷೇರುಗಳು ಶೇ 0.66 ಕುಸಿತ ಕಂಡಿವೆ.

TCS IT jobs  recruitment process  Tata Consultancy Services  TCS careers  TCS scandal news  ನಾಲ್ಕು ಅಧಿಕಾರಿಗಳು ಅಮಾನತು  100 ಕೋಟಿ ವ್ಯವಹಾರ ನಡೆದಿರುವ ಶಂಕೆ  ಟಿಸಿಎಸ್‌ನ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ  ದೈತ್ಯ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್  ಉದ್ಯೋಗ ನೀಡುವುದಕ್ಕೆ ಲಂಚ
100 ಕೋಟಿ ವ್ಯವಹಾರ ನಡೆದಿರುವ ಶಂಕೆ

ನವದೆಹಲಿ: ಐಟಿ ಕ್ಷೇತ್ರದ ದೈತ್ಯ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್​ನಲ್ಲಿ ಉದ್ಯೋಗ ನೀಡುವುದಕ್ಕೆ ಲಂಚ ತೆಗೆದುಕೊಳ್ಳಲಾಗಿದೆ ಎಂಬ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ವರದಿಯ ಪ್ರಕಾರ, ಲಂಚ ಪ್ರಕರಣದ ತನಿಖೆಯಲ್ಲಿ, ಹಿರಿಯ ಅಧಿಕಾರಿಗಳು ಕೆಲಸದಲ್ಲಿ ಇರಿಸಿಕೊಳ್ಳಲು ಸಿಬ್ಬಂದಿ ಸಂಸ್ಥೆಗಳಿಂದ ಲಂಚ ಪಡೆಯುತ್ತಿರುವುದು ಕಂಡುಬಂದಿದೆ. ಸದ್ಯ ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದ 4 ಅಧಿಕಾರಿಗಳನ್ನು ವಜಾಗೊಳಿಸಲಾಗಿದ್ದು, ಹಗರಣದಲ್ಲಿ ಭಾಗಿಯಾಗಿರುವ ಮೂರು ಸಿಬ್ಬಂದಿ ಮತ್ತು ಸಂಸ್ಥೆಗಳನ್ನು ನಿಷೇಧಿಸಲಾಗಿದೆ.

ವರದಿ ಪ್ರಕಾರ, ವಿಸ್ಲ್‌ಬ್ಲೋವರ್‌ನ ದೂರನ್ನು ಸ್ವೀಕರಿಸಿದ ನಂತರ ಟಿಸಿಎಸ್ ತಕ್ಷಣ ಕಂಪನಿಯ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಅಜಿತ್ ಮೆನನ್ ಸೇರಿದಂತೆ ಮೂವರು ಅಧಿಕಾರಿಗಳ ತಂಡವನ್ನು ತನಿಖೆಗಾಗಿ ರಚಿಸಿದೆ. ವಾರಗಳ ತನಿಖೆಯ ನಂತರ ಟಿಸಿಎಸ್ ನೇಮಕಾತಿ ಮುಖ್ಯಸ್ಥರನ್ನು ರಜೆಯ ಮೇಲೆ ಕಳುಹಿಸಿದೆ. ಅಷ್ಟೇ ಅಲ್ಲ ಸಂಪನ್ಮೂಲ ನಿರ್ವಹಣಾ ಸಮೂಹದ ನಾಲ್ವರು ಅಧಿಕಾರಿಗಳನ್ನು ವಜಾಗೊಳಿಸಿದೆ. ಮೂರು ಸಿಬ್ಬಂದಿ ಸಂಸ್ಥೆಗಳನ್ನು ಬ್ಲ್ಯಾಕ್​ ಲಿಸ್ಟ್​ಗೆ ಸೇರಿಸಲಾಗಿದೆ.

ಕಂಪನಿಯು ಅಕ್ರಮಗಳ ಪ್ರಮಾಣ ಎಷ್ಟು ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ ಎಂದು ವರದಿ ತಿಳಿಸಿದೆ. ಸುದ್ದಿ ಪ್ರಕಾರ, ಹಗರಣದಲ್ಲಿ ಭಾಗಿಯಾಗಿರುವವರು ಕಮಿಷನ್ ಮೂಲಕ 100 ಕೋಟಿ ಗಳಿಸಿರಬಹುದು ಎಂದು ಇಬ್ಬರು ಅಧಿಕಾರಿಗಳಲ್ಲಿ ಒಬ್ಬರು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಮಾಧ್ಯಮಗಳಲ್ಲಿ ಪ್ರಕಟವಾದ TCS ನ ಅಧಿಕೃತ ಹೇಳಿಕೆಯ ಪ್ರಕಾರ, TCS ನ ನೇಮಕಾತಿ ಚಟುವಟಿಕೆಗಳನ್ನು RMG ನಿರ್ವಹಿಸುವುದಿಲ್ಲ. ಬಹುತೇಕ ಕಾಮಗಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಕಂಪನಿಯಲ್ಲಿ ಪ್ರಾಥಮಿಕವಾಗಿ ಯಾವುದೇ ವಂಚನೆಯ ಪ್ರಕರಣಗಳು ಇಲ್ಲ ಅಥವಾ ಯಾವುದೇ ಆರ್ಥಿಕ ಪರಿಣಾಮವು ಇಲ್ಲ. ಈ ವಿಷಯವು ಕೆಲವು ಉದ್ಯೋಗಿಗಳು ಮತ್ತು ಗುತ್ತಿಗೆದಾರರಿಂದ ಕಂಪನಿಯ ನೀತಿ ಸಂಹಿತೆಯ ಉಲ್ಲಂಘನೆಗೆ ಸಂಬಂಧಿಸಿದೆ. ಕಂಪನಿಯ ಯಾವುದೇ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಇದರಲ್ಲಿ ಭಾಗಿಯಾಗಿರುವುದು ಕಂಡುಬಂದಿಲ್ಲ ಎಂದು ಕಂಪನಿ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದೆ.

ಪುಣೆ ಮೂಲದ ಟ್ರೇಡ್ ಯೂನಿಯನ್ ನೇಸೆಂಟ್ ಮಾಹಿತಿ ತಂತ್ರಜ್ಞಾನ ನೌಕರರ ಸೆನೆಟ್ (NITES) ಈ ವಿಷಯದ ಬಗ್ಗೆ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಕಂಪನಿ ಹೇಳಿದೆ. NITES ಅಧ್ಯಕ್ಷ ಹರ್‌ಪ್ರೀತ್ ಸಿಂಗ್ ಸಲೂಜಾ ಅವರು TCS ನ ಪ್ರಸ್ತುತ ಮತ್ತು ಭವಿಷ್ಯದ ಉದ್ಯೋಗಿಗಳ ಮೇಲೆ ಹಗರಣದ ಪರಿಣಾಮವನ್ನು ಕಡಿಮೆ ಅಂದಾಜು ಮಾಡಲಾಗುವುದಿಲ್ಲ. ಇದು ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸಿದೆ. ಉದ್ಯೋಗಿಗಳ ನೈತಿಕತೆ ಮತ್ತು ಪ್ರೇರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದು ನ್ಯಾಯೋಚಿತ ಸ್ಪರ್ಧೆಯನ್ನು ದುರ್ಬಲಗೊಳಿಸುತ್ತದೆ. ಅರ್ಹತೆ ಆಧಾರಿತ ನೇಮಕಾತಿಯನ್ನು ತಡೆಯುತ್ತದೆ ಮತ್ತು ಅಪನಂಬಿಕೆ ಮತ್ತು ಅನಿಶ್ಚಿತತೆಯ ವಾತಾವರಣವನ್ನು ಸೃಷ್ಟಿಸುತ್ತದೆ ಎಂದರು. ಇನ್ನು ಶುಕ್ರವಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಷೇರುಗಳು ಬಿಎಸ್‌ಇಯಲ್ಲಿ 0.66% ಕುಸಿದು ರೂ 3,217.45 ಕ್ಕೆ ತಲುಪಿದೆ, ಬೆಂಚ್‌ಮಾರ್ಕ್ ಸೆನ್ಸೆಕ್ಸ್ 0.41% ಕಡಿಮೆಯಾಗಿ 62,979.37 ಕ್ಕೆ ತಲುಪಿದೆ.

ಓದಿ: ಭಾರತದಲ್ಲಿ ಇನ್ನೂ 15 ಬಿಲಿಯನ್​ ಡಾಲರ್​ ಹೂಡಿಕೆ ಮಾಡಲಿರುವ ಅಮೆಜಾನ್​.. ಮೋದಿ ಭೇಟಿ ಬಳಿಕ ಸಿಇಒ ಆಂಡಿ ಜಾಸ್ಸಿ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.