ನವದೆಹಲಿ: ಭಾರೀ ನಿರೀಕ್ಷೆ ಹುಟ್ಟಿಸಿದ್ದ ಆ್ಯಪಲ್ ಕಂಪನಿಯ ಐಪೋನ್ 14 ಪ್ರೊ, ಪ್ರೊ ಮ್ಯಾಕ್ಸ್ ಮೊಬೈಲ್ಗಳ ಕ್ಯಾಮೆರಾದಲ್ಲಿ ದೋಷ ಕಾಣಿಸಿಕೊಂಡಿದೆ. ಕ್ಯಾಮೆರಾ ಕ್ಲಿಕ್ ಮಾಡುವಾಗ ಫೋಟೋ ಅಲುಗಾಡಿದಂತಾಗಿ ಚಿತ್ರ ನಿಖರವಾಗಿ ಬರುತ್ತಿಲ್ಲ ಎಂಬುದು ಬಳಕೆದಾರರ ದೂರು. ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದು ಕಂಪನಿ ಹೇಳಿದೆ.
iPhone 14 Pro ಮತ್ತು iPhone 14 Pro Max ಫೋನ್‌ಗಳಲ್ಲಿನ ಹೊಸ ಕ್ಯಾಮೆರಾ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳೊಂದಿಗೆ ಹೊಂದಿಕೊಳ್ಳುತ್ತಿಲ್ಲ. ಆಟೋಫೋಕಸ್ ತೆಗೆದುಕೊಳ್ಳದೇ ಚಿತ್ರಗಳು ನಿಖರತೆ ಕಳೆದುಕೊಳ್ಳುತ್ತಿವೆ. ಅಲುಗಾಡಿದಂತಾಗಿ ಚಿತ್ರ ಬ್ಲರ್ ಆಗುತ್ತಿದೆ. ಇದನ್ನು ಗ್ರಾಹಕರು ಕಂಪನಿಯ ಗಮನಕ್ಕೆ ತಂದಿದ್ದು, ಸಮಸ್ಯೆಯನ್ನು ಸರಿಪಡಿಸು ಕಾರ್ಯ ಪ್ರಗತಿಯಲ್ಲಿದೆ ಎಂದು ಕಂಪನಿ ತಿಳಿಸಿದೆ.
ಫೋಟೋ ಮಾತ್ರವಲ್ಲದೇ, ವಿಡಿಯೋದಲ್ಲೂ ಸಮಸ್ಯೆ ಇದೆ. ಸೆರೆ ಹಿಡಿದ ವಿಡಿಯೋ ಉತ್ತಮವಾಗಿ ಮೂಡಿ ಬರುತ್ತಿಲ್ಲವಾಗಿದೆ. ಈ ಸಮಸ್ಯೆಯು iPhone 14 ಮತ್ತು 14 Plus ಸರಣಿಯಲ್ಲಿ ಕಾಣಿಸಿಕೊಂಡಿಲ್ಲ. ಮೊಬೈಲ್ನಲ್ಲಿ ಅಡಕವಾಗಿರುವ ಕ್ಯಾಮೆರಾದ ಅಪ್ಲಿಕೇಶನ್ ಉತ್ತಮವಾಗಿದೆ. ಮೂರನೇ ಅಪ್ಲಿಕೇಶನ್ ಮೂಲಕ ಬಳಸುವಾಗ ಸಮಸ್ಯೆ ತಲೆದೋರುತ್ತಿದೆ ಎಂದು ಕಂಪನಿ ಹೇಳಿದೆ.