ETV Bharat / business

ಅದಾನಿ-ಹಿಂಡೆನ್​ಬರ್ಗ್​ ಪ್ರಕರಣ: 24ರಲ್ಲಿ 22 ತನಿಖಾ ವರದಿ ಪೂರ್ಣ- ಸುಪ್ರೀಂ ಕೋರ್ಟ್​ಗೆ ತಿಳಿಸಿದ ಸೆಬಿ

ಅದಾನಿ- ಹಿಂಡನ್​​ಬರ್ಗ್​​ ಪ್ರಕರಣದಲ್ಲಿ 24 ವಿಷಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, 22 ವಿಷಯಗಳ ತನಿಖಾ ವರದಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ಸೆಬಿ ಸುಪ್ರೀಂ ಕೋರ್ಟ್​ಗೆ ಹೇಳಿದೆ.

Adani-Hindenburg case:
Adani-Hindenburg case:
author img

By ETV Bharat Karnataka Team

Published : Aug 25, 2023, 6:59 PM IST

ನವದೆಹಲಿ: ಅದಾನಿ-ಹಿಂಡೆನ್​​ಬರ್ಗ್​ ಬಗೆಗಿನ ಆರೋಪಿತ ಹಗರಣದ ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೆಕ್ಯುರಿಟೀಸ್ ಎಕ್ಸ್​ಚೇಂಜ್​ ಬೋರ್ಡ್ ಆಫ್ ಇಂಡಿಯಾ (ಸೆಬಿ) ಶುಕ್ರವಾರ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಹೊಸ ಸ್ಥಿತಿಗತಿ ವರದಿಯಲ್ಲಿ (status report) ತಿಳಿಸಿದೆ. ಉನ್ನತ ನ್ಯಾಯಾಲಯದ ಆದೇಶಗಳಿಗೆ ಅನುಸಾರವಾಗಿ ಆಗಸ್ಟ್ 25 ರವರೆಗೆ 24 ವಿಷಯಗಳನ್ನು ಪರಿಶೀಲಿಸಲಾಗಿದೆ ಎಂದು ಸೆಬಿ ತಿಳಿಸಿದೆ.

ಈ 24 ತನಿಖಾ ವರದಿಗಳ ಪೈಕಿ 22 ವರದಿಗಳು ಅಂತಿಮ ಸ್ವರೂಪದ್ದಾಗಿವೆ ಮತ್ತು ಎರಡು ಮಧ್ಯಂತರ ಸ್ವರೂಪದ್ದಾಗಿವೆ. ಇಲ್ಲಿಯವರೆಗೆ, ಈ 22 ಅಂತಿಮ ತನಿಖಾ ವರದಿಗಳು ಮತ್ತು ಒಂದು ಮಧ್ಯಂತರ ತನಿಖಾ ವರದಿಯನ್ನು ಸೆಬಿಯ ಅಸ್ತಿತ್ವದಲ್ಲಿರುವ ಅಭ್ಯಾಸ ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ ಸಕ್ಷಮ ಪ್ರಾಧಿಕಾರವು ಅನುಮೋದಿಸಿದೆ ಎಂದು ಸೆಬಿ ಕಾರ್ಯನಿರ್ವಾಹಕ ನಿರ್ದೇಶಕ ವಿ.ಎಸ್.ಸುಂದರೇಶನ್ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಉಳಿದ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಂತರ ತನಿಖಾ ವರದಿಯನ್ನು ಸಕ್ಷಮ ಪ್ರಾಧಿಕಾರವು ಅನುಮೋದಿಸಿದೆ ಮತ್ತು ಸೆಬಿ ಬಾಹ್ಯ ಏಜೆನ್ಸಿಗಳು ಅಥವಾ ಘಟಕಗಳಿಂದ ಮಾಹಿತಿಯನ್ನು ಕೋರಿದೆ ಎಂದು ಅದು ಹೇಳಿದೆ. ಆಗಸ್ಟ್ 14 ರಂದು ಸೆಬಿ ತನ್ನ ತನಿಖಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ಮತ್ತು ಈ ವಿಷಯದಲ್ಲಿ ಸ್ಥಿತಿಗತಿ ವರದಿಯನ್ನು ಸಲ್ಲಿಸಲು 15 ದಿನಗಳ ವಿಸ್ತರಣೆಯನ್ನು ಕೋರಿತ್ತು.

"ಈ 24 ತನಿಖೆಗಳು / ಪರೀಕ್ಷೆಗಳಲ್ಲಿ, 17 ಅಂತಿಮ ಮತ್ತು ಸಂಪೂರ್ಣವಾಗಿವೆ ಮತ್ತು ಸೆಬಿಯ ಅಸ್ತಿತ್ವದಲ್ಲಿರುವ ಅಭ್ಯಾಸ ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿವೆ" ಎಂದು ಮಾರುಕಟ್ಟೆ ನಿಯಂತ್ರಕ ಆಗ ಹೇಳಿತ್ತು. ಅದಾನಿ-ಹಿಂಡೆನ್​​ಬರ್ಗ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೇಮಿಸಿದ ತಜ್ಞರ ಸಮಿತಿಯು ಮಾಡಿದ ವಿವಿಧ ಶಿಫಾರಸುಗಳ ಬಗ್ಗೆ ಸೆಬಿ ಈ ಹಿಂದೆ ಸುಪ್ರೀಂ ಕೋರ್ಟ್​ಗೆ ತನ್ನ ಅಭಿಪ್ರಾಯಗಳನ್ನು ಸಲ್ಲಿಸಿತ್ತು.

ತನಿಖೆ ಮತ್ತು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಮಯ ನಿಗದಿಪಡಿಸುವ ಸಲಹೆಯನ್ನು ಸೆಬಿ ವಿರೋಧಿಸಿತ್ತು ಮತ್ತು ತನಿಖೆಯನ್ನು ಪೂರ್ಣಗೊಳಿಸಲು ನಿರ್ದಿಷ್ಟ ಸಮಯ ನಿಗದಿಪಡಿಸುವುದರಿಂದ ತನಿಖೆಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಸಂದರ್ಭ ಬರಬಹುದು ಎಂದು ಸೆಬಿ ಹೇಳಿತ್ತು.

ಅಸ್ತಿತ್ವದಲ್ಲಿರುವ ಹಣಕಾಸು ನಿಯಂತ್ರಕ ಕಾರ್ಯವಿಧಾನಗಳನ್ನು ಪರಿಶೀಲಿಸುವ ಮತ್ತು ಬಲಪಡಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮಾರ್ಚ್ 2 ರಂದು ಸುಪ್ರೀಂ ಕೋರ್ಟ್​ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎ.ಎಂ.ಸಪ್ರೆ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿತ್ತು. ಎರಡು ತಿಂಗಳೊಳಗೆ ತನಿಖೆಯನ್ನು ತ್ವರಿತವಾಗಿ ಮುಕ್ತಾಯಗೊಳಿಸಿ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಅದು ಸೆಬಿಗೆ ನಿರ್ದೇಶನ ನೀಡಿತ್ತು.

ನಂತರ ಮೇ ತಿಂಗಳಲ್ಲಿ, ಸುಪ್ರೀಂ ಕೋರ್ಟ್ ತನ್ನ ವರದಿಯನ್ನು ಸಲ್ಲಿಸಲು ಸೆಬಿಗೆ ಆಗಸ್ಟ್ 14 ರವರೆಗೆ ಸಮಯವನ್ನು ವಿಸ್ತರಿಸಿತ್ತು. ವಿವಾದಾತ್ಮಕ ಹಿಂಡೆನ್​ಬರ್ಗ್​ ರಿಸರ್ಚ್​ ವರದಿಯು ಅದಾನಿ ಗ್ರೂಪ್ ಆಫ್ ಕಂಪನಿಗಳು ತಮ್ಮ ಕಂಪನಿಯ ಷೇರು ಬೆಲೆಗಳಲ್ಲಿ ಹಸ್ತಕ್ಷೇಪ ಮಾಡಿವೆ ಎಂದು ಆರೋಪಿಸಿದೆ.

ಇದನ್ನೂ ಓದಿ : ಉಕ್ರೇನ್​ ಪೈಲಟ್​ಗಳಿಗೆ ಅಮೆರಿಕದಿಂದ ಎಫ್-16 ಫೈಟರ್ ಜೆಟ್ ತರಬೇತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.