ETV Bharat / business

ಮಾರುಕಟ್ಟೆ ಮೌಲ್ಯಕ್ಕಿಂತ ಅರ್ಧದಷ್ಟು ಕುಸಿತ ಕಂಡ ಅದಾನಿ ಸಮೂಹದ ಷೇರುಗಳ ಬೆಲೆ

ಅಮೆರಿಕದ ಶಾರ್ಟ್ ಸೆಲ್ಲರ್ ಫರ್ಮ್ ಹಿಂಡೆನ್‌ಬರ್ಗ್ ವರದಿ ಬಂದಾಗಿನಿಂದಲೂ ಅದಾನಿ ಸಮೂಹದ ಷೇರುಗಳು ಕುಸಿಯುತ್ತಲೇ ಇವೆ. ಅದಾನಿ ಎಂಟರ್‌ಪ್ರೈಸಸ್ ಷೇರುಗಳಲ್ಲಿ ಭಾರೀ ಕುಸಿತ ಕಂಡಿವೆ. ಈ ಷೇರುಗಳು ಶೇಕಡಾ 9.50ರಷ್ಟು ಇಳಿಕೆಯಾಗಿವೆ. ಅದಾನಿ ಸಮೂಹದ ಷೇರುಗಳು ಮಾರುಕಟ್ಟೆಯ ಮೌಲ್ಯಕ್ಕಿಂತ ಅರ್ಧದಷ್ಟು ಕುಸಿತ ಕಂಡಿವೆ.

author img

By

Published : Feb 6, 2023, 4:02 PM IST

Gautam Adani
ಅದಾನಿ ಸಮೂಹ

ಮುಂಬೈ (ಮಹಾರಾಷ್ಟ್ರ): ಹಿಂಡನ್‌ಬರ್ಗ್ ಸಂಶೋಧನಾ ವರದಿಯ ನಂತರ ಅದಾನಿ ಸಾಮ್ರಾಜ್ಯದಲ್ಲಿ ತೀವ್ರ ಸಂಚಲನ ಉಂಟಾಗಿದೆ. ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಅದಾನಿ ಸಮೂಹದ ಎಲ್ಲ 10 ಷೇರುಗಳು ಗಣನೀಯವಾಗಿ ಕುಸಿತ ಕಂಡಿವೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಶೇ.9.50ಕ್ಕೆ ಇಳಿಕೆ ಕಂಡಿದೆ. ಷೇರು ಪೇಟೆ ಆರಂಭದಲ್ಲಿ 1,597.95 ರೂಪಾಯಿ ಇಳಿಯಾಗಿತ್ತು, ಬಳಿಕ ಅದಾನಿ ಎಂಟರ್‌ಪ್ರೈಸಸ್ ಬಿಎಸ್‌ಇಯಲ್ಲಿ ರೂ.1,433.60ಕ್ಕೆ ಕುಸಿಯಿತು. ಅದರ ಹಿಂದಿನ ಬೆಲೆಗೆ ಹೋಲಿಸಿದರೆ, ಶೇಕಡಾ 9.50ರಷ್ಟು ಕುಸಿತ ಉಂಟಾಗಿದೆ. ನಂತರದಲ್ಲಿ ಶೇಕಡಾ 6.54ರಷ್ಟು ಇಳಿಕೆಯಾಗಿ 1,480.65 ರೂಪಾಯಿಗೆ ತಲುಪಿದೆ.

ಅದಾನಿ ಷೇರುಗಳ ಸ್ಥಿತಿ ಏನಾಗಿದೆ?: ಅದಾನಿ ಟೋಟಲ್ ಗ್ಯಾಸ್, ಅದಾನಿ ಪವರ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ವಿಲ್ಮಾರ್ ಬಿಎಸ್‌ಇಯಲ್ಲಿ ಶೇ.5ರಷ್ಟು ನಷ್ಟದಲ್ಲಿ ವಹಿವಾಟು ನಡೆಸುತ್ತಿವೆ. ಅದೇ ಸಮಯದಲ್ಲಿ, ಅದಾನಿ ಟ್ರಾನ್ಸಮಿಷನ್ ಶೇಕಡಾ 10 ರಷ್ಟು ಕಡಿಮೆಯಾಗಿದೆ. ಮತ್ತೊಂದೆಡೆ, ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯವು ಶೇಕಡಾ 0.53 ರಷ್ಟು ಏರಿಕೆಯಾಗಿ 501.50 ರೂ.ನಲ್ಲಿ ವಹಿವಾಟು ಮುಂದುವರಿಸಿದೆ.

ಜೊತೆಗೆ ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಇತರ ಕಂಪನಿಗಳು ಅಂದ್ರೆ, ಅಂಬುಜಾ ಸಿಮೆಂಟ್ಸ್ ಶೇ.3.28, ಎಸಿಸಿ ಶೇ.0.82 ಮತ್ತು ಎನ್‌ಡಿಟಿವಿ ಶೇ.4.98ರಷ್ಟು ಕುಸಿದಿವೆ. ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಬಂದ ನಂತರ ಅದಾನಿ ಗ್ರೂಪ್ ಸುಮಾರು 118 ಬಿಲಿಯನ್ ಡಾಲರ್ ನಷ್ಟಕ್ಕೆ ಗುರಿಯಾಗಿದೆ. ಈ ವರದಿಯಿಂದಾಗಿ ಕಂಪನಿಯ ಮಾರುಕಟ್ಟೆ ಮೌಲ್ಯವು ಅರ್ಧಕ್ಕಿಂತ ಹೆಚ್ಚು ನಷ್ಟವನ್ನು ಅನುಭವಿಸಿದೆ.

ಸಂಸತ್​ ಕಲಾಪಕ್ಕೆ ತೀವ್ರ ಅಡ್ಡಿ: ಹಣಕಾಸು ಸಂಸ್ಥೆಗಳು ಮತ್ತು ಹೂಡಿಕೆದಾರರ ಗುಂಪುಗಳು ಅಪಾಯವನ್ನು ಎದುರಿಸುತ್ತಿವೆ. ಅದಾನಿ ಬಗ್ಗೆ ಸಂಸತ್ತಿನಲ್ಲಿ ಗಲಾಟೆ ಮುಂದುವರೆದಿದೆ. ಈ ಕೋಲಾಹಲವು ಸಂಸತ್​ ಕಲಾಪಕ್ಕೆ ತೀವ್ರ ಅಡ್ಡಿಪಡಿಸಿದೆ. ಈ ವಿಷಯದ ಬಗ್ಗೆ ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿರೋಧ ಪಕ್ಷಗಳ ನಾಯಕರು ಒತ್ತಡ ಹೇರುತ್ತಿವೆ. ಸಣ್ಣ ಹೂಡಿಕೆದಾರರಿಗೆ ಅಪಾಯವನ್ನು ಎತ್ತಿ ತೋರಿಸಲು ರಾಷ್ಟ್ರವ್ಯಾಪಿ ದೊಡ್ಡಮಟ್ಟದ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ.

10 ಬಿಲಿಯನ್ ರೂ. ಬಾಂಡ್ ರದ್ದು: ಜನವರಿ 24 ರಂದು ಬಂದ ಹಿಂಡೆನ್‌ಬರ್ಗ್ ವರದಿಯಿಂದ ಎಫ್​ಪಿಓ ಅದಾನಿ ಗ್ರೂಪ್ ಒಂದಾದ ನಂತರ ಒಂದರಂತೆ ಭಾರಿ ಹಿನ್ನಡೆಗಳನ್ನು ಎದುರಿಸುತ್ತಿದೆ. ಇದರ ಎಫೆಕ್ಟ್​ನ ನಂತರ ಬಾಂಡ್​ ಅನ್ನು ರದ್ದುಗೊಳಿಸಲಾಗಿದೆ. ಅದಾನಿ ಗ್ರೂಪ್ 20 ಸಾವಿರ ಕೋಟಿ ಮೌಲ್ಯದ ಮೊದಲ ಎಫ್‌ಪಿಒ ರದ್ದುಗೊಳಿಸಲಾಯಿತು. ಬಳಿಕ 10 ಬಿಲಿಯನ್ ರೂಪಾಯಿಗಳ (122 ಮಿಲಿಯನ್ ಡಾಲರ್​) ಬಾಂಡ್ ಅನ್ನು ಕೂಡಾ ರದ್ದು ಮಾಡಲಾಗಿದೆ.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಮಾರುಕಟ್ಟೆಯಲ್ಲಿ ಭಾರೀ ನಷ್ಟದ ಬಳಿಕ ಕಂಪನಿಯು ಬಾಂಡ್ ಅನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ಹಿಂಡೆನ್‌ಬರ್ಗ್ ವರದಿಯ ನಂತರ, ಕಂಪನಿಯ ಮಾರುಕಟ್ಟೆ ಮೌಲ್ಯವು ಅರ್ಧಕ್ಕಿಂತ ಕಡಿಮೆಯಾಗಿದೆ.

ಕೆಲವು ಕಂಪನಿಗಳ ಪಾಲುದಾರಿಕೆ ರದ್ದು: ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ಅವರ ಪ್ರಮುಖ ಸಂಸ್ಥೆಯು ಜನವರಿಯಲ್ಲಿ ಸಾರ್ವಜನಿಕ ಮಾಹಿತಿಯನ್ನು ನೀಡಲು ಯೋಜಿಸಿದೆ ಎಂದು ಬ್ಲೂಮ್‌ಬರ್ಗ್ ತನ್ನ ಡಿಸೆಂಬರ್ ವರದಿಯಲ್ಲಿ ವರದಿ ಮಾಡಿದೆ. ಇದಕ್ಕಾಗಿ ಕಂಪನಿಯು ಎಡೆಲ್‌ವೀಸ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್, ಎಕೆ ಕ್ಯಾಪಿಟಲ್, ಜೆಎಂ ಫೈನಾನ್ಶಿಯಲ್ ಮತ್ತು ಟ್ರಸ್ಟ್ ಕ್ಯಾಪಿಟಲ್ ಜೊತೆ ಪಾಲುದಾರಿಕೆ ಹೊಂದಿದ್ದು, ಈಗ ಕಾರ್ಯನಿರ್ವಹಿಸುತ್ತಿದೆ. ಅದನ್ನೂ ರದ್ದುಗೊಳಿಸಲಾಗಿದೆ.

ಶ್ರೀಮಂತ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡ ಅದಾನಿ: ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿ ಫೆಬ್ರುವರಿ 1ರಂದು ಬಿಡುಗಡೆಯಾಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ಭಾರತೀಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 2023ರ ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿಯಂತೆ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ 84.3 ಶತಕೋಟಿ ಡಾಲರ್​ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಶ್ರೀಮಂತರ ಪೈಕಿ ಒಬ್ಬರಾಗಿ ಅಂಬಾನಿ ಗುರುತಿಸಿಕೊಂಡಿದ್ದಾರೆ. ಒಟ್ಟು 10 ಮಂದಿ ಸಿರಿವಂತರ ಪಟ್ಟಿಯಲ್ಲಿ, ಭಾರತೀಯರ ಪೈಕಿ ಮುಖೇಶ್ ಅಂಬಾನಿ ಅಗ್ರ ಸ್ಥಾನಿಯಾಗಿದ್ದಾರೆ. ಹಿಂಡೆನ್‌ಬರ್ಗ್ ವರದಿ ಎಫೆಕ್ಟ್​ನಿಂದ ನಂತರ ಅದಾನಿ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತವಾಗಿವೆ.

ಇದನ್ನೂ ಓದಿ: RBI ಎಂಪಿಸಿ ಸಭೆ ಆರಂಭ: ಫೆ.8 ರಂದು ಹೊಸ ರೆಪೋ ದರ ಘೋಷಣೆ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.