ETV Bharat / business

ಹಿಂಡೆನ್​ಬರ್ಗ್ ಎಫೆಕ್ಟ್​: ಆಸ್ಟ್ರೇಲಿಯಾದ ರಸ್ತೆ ಯೋಜನೆಯಿಂದ ಹಿಂದೆ ಸರಿದ ಅದಾನಿ ಗ್ರೂಪ್ - ಈಟಿವಿ ಭಾರತ ಕನ್ನಡ

ಹಿಂಡೆನ್​ಬರ್ಗ್ ವರದಿಯ ಪ್ರತಿಕೂಲ ಪರಿಣಾಮಗಳು ಅದಾನಿ ಗ್ರೂಪ್​ಗೆ ಈಗಲೂ ಬಾಧಿಸುತ್ತಿವೆ. ಈಗ ಅದಾನಿ ಗ್ರೂಪ್ ಆಸ್ಟ್ರೇಲಿಯಾದ ಹೂಡಿಕೆದಾರ ಮ್ಯಾಕ್ವಾರಿ ಗ್ರೂಪ್​​ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಿದೆ.

Adani Group
Adani Group
author img

By

Published : Jun 2, 2023, 7:41 PM IST

ನವದೆಹಲಿ : ಹಿಂಡೆನ್​ಬರ್ಗ್ ವರದಿಯು ಅದಾನಿ ಸಮೂಹದ ಸಾಮ್ರಾಜ್ಯದ ಮೇಲೆ ಬಹಳ ದೊಡ್ಡ ಪ್ರಮಾಣದ ಪರಿಣಾಮ ಬೀರಿದೆ. ಈ ವರದಿಯ ಕಾರಣದಿಂದ ಕಂಪನಿಯ ತನ್ನ ಭವಿಷ್ಯದ ಹಲವಾರು ಯೋಜನೆಗಳನ್ನು ಸ್ಥಗಿತಗೊಳಿಸಬೇಕಾಯಿತು. ಹೀಗೆ ಅದಾನಿ ರದ್ದುಗೊಳಿಸುತ್ತಿರುವ ಯೋಜನೆಗಳ ಸರಣಿಗೆ ಮತ್ತೊಂದು ಯೋಜನೆ ಸೇರಿಕೊಂಡಿದೆ. ಇದೀಗ ಅದಾನಿ ಸಮೂಹವು ಮ್ಯಾಕ್ವಾರಿಯಿಂದ ರಸ್ತೆ ಆಸ್ತಿಗಳನ್ನು ಖರೀದಿಸುವ ತನ್ನ ಉದ್ದೇಶಿತ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿದೆ.

ಒಪ್ಪಂದ ರದ್ದಾಗಲು ಕಾರಣ?: ಅದಾನಿ ರೋಡ್ಸ್ ಟ್ರಾನ್ಸ್‌ಪೋರ್ಟ್ ಲಿಮಿಟೆಡ್ ಆಸ್ಟ್ರೇಲಿಯಾದ ಹೂಡಿಕೆದಾರ ಮ್ಯಾಕ್ವಾರಿಯಿಂದ ನಾಲ್ಕು ರಸ್ತೆ ಆಸ್ತಿಗಳನ್ನು ಖರೀದಿಸಲು ಮುಂದಾಗಿತ್ತು. ಇದು 2022 ರಲ್ಲಿ ಆಗಿದ್ದ 3,110 ಕೋಟಿ ರೂ.ಗಳ ಒಪ್ಪಂದವಾಗಿತ್ತು. ಆದರೆ, ಈ ಒಪ್ಪಂದ ಇನ್ನು ಜಾರಿಯಾಗುವುದಿಲ್ಲ. ಅದಾನಿ ಗ್ರೂಪ್ ಸದ್ಯ ಈ ಒಪ್ಪಂದವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಷೇರು ಖರೀದಿ ಒಪ್ಪಂದದ ಪ್ರಕಾರ ನಿಗದಿತ ಸಮಯದೊಳಗೆ ಮುಕ್ತಾಯದ ಷರತ್ತುಗಳನ್ನು ಮ್ಯಾಕ್ವಾರಿ ತೃಪ್ತಿಕರವಾಗಿ ಪೂರೈಸಲಿಲ್ಲ ಎಂಬ ಕಾರಣಕ್ಕೆ ಒಪ್ಪಂದ ರದ್ದುಪಡಿಸಲಾಗಿದೆ ಎಂದು ಅದಾನಿ ಹೇಳಿದೆ. ಇದರಿಂದಾಗಿ ಖರೀದಿದಾರ ಅಂದರೆ ಅದಾನಿ ಗ್ರೂಪ್ ಷೇರು ಒಪ್ಪಂದವನ್ನು ಅಂತ್ಯಗೊಳಿಸಲು ನಿರ್ಧರಿಸಿದೆ.

ಕಳೆದ ವರ್ಷವೇ ಆಗಿತ್ತು ಒಪ್ಪಂದ: ವಾಸ್ತವದಲ್ಲಿ ಅದಾನಿ ರೋಡ್ಸ್ ಟ್ರಾನ್ಸ್‌ಪೋರ್ಟ್ ಲಿಮಿಟೆಡ್ ಸ್ವರ್ಣ ಟೋಲ್‌ವೇ ಪ್ರೈವೇಟ್ ಲಿಮಿಟೆಡ್‌ನಲ್ಲಿ ಶೇಕಡಾ 100 ರಷ್ಟು ಪಾಲನ್ನು ಮತ್ತು ಗುಜರಾತ್ ರೋಡ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಲಿಮಿಟೆಡ್‌ನಲ್ಲಿ ಶೇಕಡಾ 56.8 ರಷ್ಟು ಪಾಲನ್ನು ಪಡೆಯಲು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದವನ್ನು 4 ಆಗಸ್ಟ್ 2022 ರಂದು ಮಾಡಲಾಗಿತ್ತು. ಈ ಎರಡು ಕಂಪನಿಗಳು ಗುಜರಾತ್ ಮತ್ತು ಆಂಧ್ರಪ್ರದೇಶದಲ್ಲಿ 2 ಟೋಲ್ ರಸ್ತೆ ಯೋಜನೆಗಳನ್ನು ಹೊಂದಿವೆ ಎಂಬುದು ಗಮನಾರ್ಹ.

ಈ ಎಲ್ಲ ಒಪ್ಪಂದಗಳನ್ನು ರದ್ದು ಮಾಡಿದ ಅದಾನಿ ಗ್ರೂಪ್‌ : ಈ ವರ್ಷದ ಆರಂಭದಲ್ಲಿ ಜನವರಿ 24 ರಂದು ಹಿಂಡೆನ್‌ಬರ್ಗ್ ವರದಿ ಬಂದ ನಂತರ ಅದಾನಿ ಗ್ರೂಪ್ ತನ್ನ ಹಲವು ಯೋಜನೆಗಳಿಂದ ಹಿಂದೆ ಸರಿಯಬೇಕಾಯಿತು. ಫೆಬ್ರವರಿ ತಿಂಗಳಲ್ಲಿ DB ಪವರ್‌ನಿಂದ ಥರ್ಮಲ್ ಪವರ್ ಸ್ವತ್ತುಗಳನ್ನು ಖರೀದಿಸುವ ಒಪ್ಪಂದ ಮೊದಲಿಗೆ ರದ್ದಾಯಿತು. 7,071 ಕೋಟಿ ರೂಪಾಯಿಗಳಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದೇ ಸಮಯದಲ್ಲಿ, ಗುಂಪು 34,900 ಕೋಟಿ ರೂಪಾಯಿಗಳ ಮುಂಡ್ರಾ ಪೆಟ್ರೋಕೆಮಿಕಲ್ಸ್ ಯೋಜನೆಯ ಉದ್ದೇಶಿತ ಕೆಲಸವನ್ನು ನಿಲ್ಲಿಸಬೇಕಾಯಿತು.

ಅದಾನಿ ಗ್ರೂಪ್ ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು ಇಂಧನ, ಕೃಷಿ ವ್ಯಾಪಾರ, ಸಂಪನ್ಮೂಲಗಳು, ಲಾಜಿಸ್ಟಿಕ್ಸ್ ಮತ್ತು ರಿಯಲ್ ಎಸ್ಟೇಟ್‌ನಂತಹ ವಿವಿಧ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳಿಗೆ ಅದು ಹೆಸರುವಾಸಿಯಾಗಿದೆ.

ಇದು ಬಂದರುಗಳು, ಕೃಷಿ ವ್ಯಾಪಾರ, ಲಾಜಿಸ್ಟಿಕ್ಸ್, ವಿದ್ಯುತ್, ಸೌರ ಮತ್ತು ನವೀಕರಿಸಬಹುದಾದ ಇಂಧನಗಳಲ್ಲಿ ಆಸಕ್ತಿ ಹೊಂದಿರುವ ಹೆಚ್ಚು ವೈವಿಧ್ಯಮಯ ಕಂಪನಿಯಾಗಿದೆ. ಈ ಸಮೂಹವನ್ನು 1988 ರಲ್ಲಿ ಗೌತಮ್ ಅದಾನಿ ಸ್ಥಾಪಿಸಿದರು ಮತ್ತು ಅಂದಿನಿಂದ ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಅದಾನಿ ಗ್ರೂಪ್‌ನ ಮಹತ್ವದ ಯೋಜನೆಗಳಲ್ಲಿ ಭಾರತದ ಅತಿದೊಡ್ಡ ಖಾಸಗಿ ಬಂದರು ಮುಂಡ್ರಾ ಬಂದರು ಮತ್ತು ಭಾರತದ ಅತಿದೊಡ್ಡ ಖಾಸಗಿ ಉಷ್ಣ ವಿದ್ಯುತ್ ಉತ್ಪಾದಕ ಅದಾನಿ ಪವರ್ ಲಿಮಿಟೆಡ್ ಸೇರಿವೆ.

ಇದನ್ನೂ ಓದಿ : ಪಾಕ್ ಪದಚ್ಯುತ ಪ್ರಧಾನಿ ಇಮ್ರಾನ್ ದೇಶ ತೊರೆಯದಂತೆ ನಿರ್ಬಂಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.