ETV Bharat / business

19 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಆ್ಯಕ್ಸೆಂಚರ್ - ಆಕ್ಸೆಂಚರ್‌ನ ಬಿಲ್ ಮಾಡಲಾಗದ ಕಾರ್ಪೊರೇಟ್ ವಿಭಾಗ

ತಂತ್ರಜ್ಞಾನ ವಲಯದ ಬೃಹತ್ ಕಂಪನಿಯಾಗಿರುವ ಆ್ಯಕ್ಸೆಂಚರ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ಬಾರಿ ಕಂಪನಿ ತನ್ನ 19 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಸಾಧ್ಯತೆಯಿದೆ.

Accenture to lay off 19000 staff in next 18 months

author img

By

Published : Mar 24, 2023, 1:12 PM IST

ನವದೆಹಲಿ : ಐಟಿ ಸೇವೆ ಮತ್ತು ಸಲಹಾ ಸಂಸ್ಥೆಯಾಗಿರುವ ಆಕ್ಸೆಂಚರ್ ಮುಂದಿನ ಒಂದೂವರೆ ವರ್ಷಗಳ ಅವಧಿಯಲ್ಲಿ ತನ್ನ ಶೇ 2.5 ರಷ್ಟು ಅಥವಾ 19,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಕಂಪನಿಯು ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ. ಆಕ್ಸೆಂಚರ್​ನಲ್ಲಿ ಪ್ರಸ್ತುತ 7 ಲಕ್ಷಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 3 ಲಕ್ಷ ಜನ ಉದ್ಯೋಗಿಗಳು ಭಾರತದಲ್ಲಿಯೇ ಇದ್ದಾರೆ.

2023 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಾವು ವಿಶೇಷವಾಗಿ ನಮ್ಮ ಕಾರ್ಯತಂತ್ರದ ಬೆಳವಣಿಗೆಯ ಆದ್ಯತೆಗಳನ್ನು ಬೆಂಬಲಿಸಲು ನೇಮಕಾತಿಗಳನ್ನು ಮುಂದುವರಿಸಿದ್ದೇವೆ. ಆದರೆ ಅದೇ ಸಮಯದಲ್ಲಿ ಕಂಪನಿಯ ಕಾರ್ಯಕಲಾಪಗಳನ್ನು ಸುಗಮಗೊಳಿಸಲು ಮತ್ತು ವೆಚ್ಚ ಕಡಿಮೆ ಮಾಡಲು ಕೂಡ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಇದರ ಅಂಗವಾಗಿ ಮುಂದಿನ 18 ತಿಂಗಳುಗಳಲ್ಲಿ ಸರಿಸುಮಾರು 19,000 ಜನರನ್ನು (ಅಥವಾ ನಮ್ಮ ಪ್ರಸ್ತುತ ಉದ್ಯೋಗಿಗಳ ಶೇಕಡಾ 2.5) ಕೆಲಸದಿಂದ ವಜಾಗೊಳಿಸಬಹುದು ಎಂದು ಕಂಪನಿಯು ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ. ಈ ಕಡಿತದಲ್ಲಿ ಅರ್ಧದಷ್ಟು ಜನರು ಆಕ್ಸೆಂಚರ್‌ನ ಬಿಲ್ ಮಾಡಲಾಗದ ಕಾರ್ಪೊರೇಟ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಜನರನ್ನು ಒಳಗೊಂಡಿರುತ್ತದೆ ಎಂದು ಫೈಲಿಂಗ್ ಹೇಳಿದೆ.

ಅಮೆಜಾನ್​​ನಲ್ಲಿ ಮತ್ತೆ ದೊಡ್ಡ ಪ್ರಮಾಣದ ಉದ್ಯೋಗ ಕಡಿತ : ಕೆಲ ತಿಂಗಳ ಹಿಂದೆ ಅತಿದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿದ್ದ ಅಮೆಜಾನ್ ಈಗ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಮುಂದಿನ ಕೆಲ ವಾರಗಳಲ್ಲಿ ಮತ್ತೆ 9 ಸಾವಿರ ಜನರನ್ನು ವಜಾಗೊಳಿಸಲಿರುವುದಾಗಿ ಅಮೆಜಾನ್ ಸೋಮವಾರ ಹೇಳಿದೆ. ಅಲ್ಲಿಗೆ 2023 ರಲ್ಲಿ ಅಮೆಜಾನ್ ಒಟ್ಟು 27 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದಂತಾಗಲಿದೆ.

ಈ ಎಲ್ಲ ಬೆಳವಣಿಗೆಗಳು ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪ್ರತಿಫಲನವಾಗಿವೆ. ಕಳೆದ ಒಂದು ದಶಕದಲ್ಲಿ ಅಗಾಧ ಬೆಳವಣಿಗೆ ಕಂಡಿರುವ ಮೆಟಾ, ಅಮೆಜಾನ್ ಮತ್ತು ಗೂಗಲ್​ನಂಥ ಕಂಪನಿಗಳೇ ಈಗ ಅತಿ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ತಂತ್ರಜ್ಞಾನ ವಲಯಕ್ಕೆ ಬಹುದೊಡ್ಡ ಹಣಕಾಸಿನ ಆಧಾರವಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್​ನಂಥ ಪ್ರತಿಷ್ಠಿತ ಬ್ಯಾಂಕ್​ಗಳು ಸಹ ಈಗ ನಷ್ಟದ ಕಾರಣದಿಂದ ಮುಚ್ಚುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ.

ಲಾಗಿಟೆಕ್​ನಲ್ಲಿ ಉದ್ಯೋಗ ಕಡಿತ : ಜಾಗತಿಕ ಮಟ್ಟದ ಕಂಪ್ಯೂಟರ್ ಸಾಧನಗಳ ತಯಾರಕ ಕಂಪನಿ ಲಾಗಿಟೆಕ್ ಇಂಟರ್​ನ್ಯಾಷನಲ್ ಉದ್ಯೋಗಿಗಳನ್ನು ಕಡಿತ ಮಾಡುವುದಾಗಿ ಹೇಳಿದೆ. ಲಾಗಿಟೆಕ್​ನ 300 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ತಂತ್ರಜ್ಞಾನ ವಲಯದ ಬಹುತೇಕ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿರುವ ಮಧ್ಯೆ ಲಾಗಿಟೆಕ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ಕೊರೊನಾ ಉಲ್ಬಣವಾಗಿದ್ದಾಗ ಎರಡು ವರ್ಷಗಳ ಹಿಂದೆ ಎಲ್ಲರೂ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದರು. ಆಗ ಕಂಪ್ಯೂಟರ್ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಸಾಧನಗಳಿಗೆ ಭಾರಿ ಬೇಡಿಕೆ ಉಂಟಾಗಿತ್ತು. ಆದರೆ ಈಗ ಕೋವಿಡ್ ಸಂಪೂರ್ಣ ಕಾಣೆಯಾಗಿದ್ದರಿಂದ ಕಂಪನಿಯ ಆದಾಯ ಗಮನಾರ್ಹ ಮಟ್ಟದಲ್ಲಿ ಕಡಿಮೆಯಾಗಿದೆ. ಲಾಗಿಟೆಕ್‌ನ ಆದಾಯವು ಅದರ 2023 ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಹಿಂದಿನ ವರ್ಷಕ್ಕಿಂತ 22 ಪ್ರತಿಶತದಷ್ಟು ಕುಸಿದು US $ 1.3 ಶತಕೋಟಿಗೆ ತಲುಪಿದೆ.

ಇದನ್ನೂ ಓದಿ : ಶುಭ ಸುದ್ದಿ: ಭಾರತದ ಐಟಿ ವಲಯದಲ್ಲಿ ಉದ್ಯೋಗ ನೇಮಕಾತಿ ಪುನಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.