ETV Bharat / business

ನಿಮಗೆ ಹೆಚ್ಚಿನ ವೇತನ ಬೇಕೆ? ಹೆಚ್‌ಆರ್ ಬಳಿ ಚೌಕಾಶಿಗಿಲ್ಲಿದೆ ಉಪಯುಕ್ತ ಮಾಹಿತಿ.. - ಹೆಚ್ ಆರ್ ಜೊತೆ ಮಾತುಕತೆ ನಡೆಸುವುದು ಹೇಗೆ

ನೀವು ಹೊಸ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಮತ್ತು ಹೆಚ್ಚಿನ ಸಂಬಳ ಬಯಸುತ್ತಿದ್ದೀರಾ?, ಆದರೆ, ಹೆಚ್ ಆರ್ ಜೊತೆ ಮಾತಕತೆ ನಡೆಸಲು ಕಷ್ಟ ಪಡುತ್ತಿದ್ದೀರಾ? ಹೌದು ಎಂದಾದರೆ, ನೀವು ಚಿಂತಿಸಬೇಕಾಗಿಲ್ಲ. ವೃತ್ತಿಪರರಂತೆ ಹೆಚ್ಚಿನ ಸಂಬಳಕ್ಕಾಗಿ ಮಾತುಕತೆ ನಡೆಸುವುದು ಹೇಗೆ ಎಂಬುದರ ಕುರಿತು ಉಪಯುಕ್ತ ಮಾಹಿತಿ ಇಲ್ಲಿದೆ.

A step-by-step guide to negotiate a higher salary
ಹೆಚ್ಚಿನ ವೇತನಕ್ಕೆ ಹೆಚ್ ಆರ್ ಬಳಿ ಮಾತನಾಡುವುದು ಹೇಗೆ ? ಇಲ್ಲಿದೆ ಪರಿಹಾರ.
author img

By

Published : May 1, 2022, 11:50 AM IST

ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹಲವು ವಿಷಯಗಳು ಪ್ರಮುಖವಾಗಿರುತ್ತವೆ. ಈ ಪೈಕಿ ಪಡೆದುಕೊಳ್ಳುವ ಸಂಬಳವೂ ಮುಖ್ಯ. ಉದ್ಯೋಗಿಗೆ ಸಂಬಳ ಒಂದು ನಿರ್ಣಾಯಕ ಅಂಶವಲ್ಲದಿದ್ದರೂ, ಒಂದಲ್ಲೊಂದು ರೀತಿಯಲ್ಲಿ ಪ್ರಮುಖ ಅಂಶವೆಂದೇ ಪರಿಗಣಿಸಲ್ಪಡುತ್ತದೆ. ಈ ಬಗ್ಗೆ ಹೆಚ್ಚಿನ ವೇತನ ಪಡೆಯುವಲ್ಲಿ ನಿಮ್ಮ ಹೆಚ್‌ಆರ್‌ ಜೊತೆ (ಮಾನವ ಸಂಪನ್ಮೂಲ ಅಧಿಕಾರಿ) ಮಾತುಕತೆ ನಡೆಸಲು ಅನುಸರಿಸಬೇಕಾದ ಕೆಲವು ವಿಧಾನಗಳು ಇಲ್ಲಿವೆ.

  • ಆತ್ಮವಿಶ್ವಾಸ ಹೊಂದಿ: ಮೊದಲಾಗಿ ನಾವು ಆತ್ಮವಿಶ್ವಾಸ ಹೊಂದಬೇಕು. ಹೆಚ್ಚಿನ ವೇತನವನ್ನು ಕೇಳಲು ಅರ್ಹ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಈ ಬಗ್ಗೆ ಮನಸ್ಸಿನಲ್ಲಿ ದೃಢ ನಿರ್ಧಾರವನ್ನು ಹೊಂದಬೇಕು. ಈ ಹಂತದಲ್ಲಿ ನೀವು ಎಷ್ಟು ವೇತನವನ್ನು ಕೇಳಬೇಕೆಂಬುದರ ಬಗ್ಗೆ ತಿಳಿದುಕೊಂಡಿರಬೇಕಿಲ್ಲ. ಬದಲಾಗಿ ಹೆಚ್ಚಿನ ವೇತನವನ್ನು ಪಡೆಯಲು ಅರ್ಹರು ಎಂಬುದನ್ನು ಅರಿಕೊಂಡರೆ ಸಾಕು.
  • ಸಂಶೋಧನೆ ಮಾಡಿ: ನೀವು ಯಾವುದೇ ಸಂಸ್ಥೆಯ ಹೆಚ್ಅರ್ ಅನ್ನು ಭೇಟಿ ಮಾಡುವಾಗ ಕೆಲವು ವಿಷಯಗಳನ್ನು ತಿಳಿದಿರಬೇಕಾಗುತ್ತದೆ. ಹೆಚ್‌ಆರ್ ಸಿಬ್ಬಂದಿಯ ಪ್ರಮುಖ ಕಾರ್ಯವೆಂದರೆ, ಕನಿಷ್ಠ ವೇತನಕ್ಕಾಗಿ ಗರಿಷ್ಠ ಗಂಟೆಗಳವರೆಗೆ ಕೆಲಸ ಮಾಡುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡುವುದು. ಇದನ್ನು ನೀವು ಅರಿತಿರಬೇಕು. ನಿಮ್ಮಷ್ಟೇ ಅನುಭವವಿರುವ ಇತರ ಅಭ್ಯರ್ಥಿಗಳು ಎಷ್ಟು ವೇತನವನ್ನು ಪಡೆಯುತ್ತಾರೆ ಎಂಬ ಬಗ್ಗೆ ತಿಳಿದಿರುವುದು ಇಲ್ಲಿ ಅವಶ್ಯ ಸಂಗತಿ.
  • ಭಾವನೆಯನ್ನು ಮುಕ್ತವಾಗಿ ವ್ಯಕ್ತಪಡಿಸಿ: ಪ್ರಮುಖವಾಗಿ ಯಾವುದೇ ಭಾವನೆಯನ್ನು ಮುಕ್ತವಾಗಿ ವ್ಯಕ್ತಪಡಿಸಬೇಕು. ನಿಮಗೆ ನಿಮ್ಮ ವೇತನದ ಬಗ್ಗೆ ಅಸಮಾಧಾನ ಇದ್ದರೆ ಅದನ್ನೂ ಅಂತೆಯೇ ವ್ಯಕ್ತಪಡಿಸಬೇಕಾಗುತ್ತದೆ. ಯಾಕೆಂದರೆ ಇಲ್ಲಿ ನೀವು ನಿಮ್ಮ ಕೆಲಸಕ್ಕೆ ಪೂರಕವಾದ ವೇತನವನ್ನು ಆಪೇಕ್ಷೆ ಪಡುತ್ತಿದ್ದೀರಿ. ಒಂದೋ ನಿಮ್ಮ ಅಪೇಕ್ಷೆಗೆ ಪೂರಕವಾದ ಪ್ರತಿಕ್ರಿಯೆ ದೊರೆಯಬಹುದು, ಇಲ್ಲ ನಿಮ್ಮ ಅಪೇಕ್ಷೆಗೆ ವಿರುದ್ಧವಾಗಿ ಆಗಬಹುದಷ್ಟೇ.
  • ಹಿಂದಿನ ಸಂಬಳದ ಬಲೆಗೆ ಬೀಳಬೇಡಿ: ಸಾಮಾನ್ಯವಾಗಿ ಉದ್ಯೋಗಕಾಂಕ್ಷಿಗಳು ತಾವು ಹಿಂದೆ ಪಡೆಯುತ್ತಿದ್ದ ಸಂಬಳದ ಅಲ್ಪ ಪ್ರಮಾಣದ ಹೆಚ್ಚುವರಿಯನ್ನು ವೇತನವಾಗಿ ಪಡೆಯುವ ಬಗ್ಗೆ ಒಪ್ಪಬಾರದು. ಇದು ಹೆಚ್‌ಆರ್‌ಗಳ ಒಂದು ಸ್ಟ್ರಾಟರ್ಜಿಯಾಗಿದ್ದು, ಈ ಬಲೆಗೆ ನೀವು ಬೀಳಬೇಡಿ. ಸಾಮಾನ್ಯವಾಗಿ ಹೊಸ ಉದ್ಯೋಗಾಕಾಂಕ್ಷಿಗಳು ಈ ಬಲೆಗೆ ಬೀಳುತ್ತಾರೆ. ಮರೆಯದಿರಿ!, ನಿಮ್ಮ ಅರ್ಹತೆಗೆ ಅರ್ಹವಾದ ವೇತನವನ್ನು ಪಡೆಯುವುದು ನಿಮ್ಮ ಹಕ್ಕು.
  • ನೇರ ಮಾತುಕತೆ ಇರಲಿ: ನಮಗೆ ಬೇಕಾದ ಉದ್ಯೋಗವನ್ನು ಮತ್ತು ನಮಗೆ ಬೇಕಾದ ಆಕರ್ಷಕ ವೇತನವನ್ನು ಪಡೆಯುವುದು ನಮ್ಮ ನಮ್ಮ ಆಯ್ಕೆಗೆ ಬಿಟ್ಟಿದ್ದು. ನಾವು ನಮ್ಮ ಬಳಿ ಇರುವ ಉದ್ಯೋಗಾವಕಾಶಗಳ ಬಗ್ಗೆ ನಮ್ಮ ಹೆಚ್‌ಆರ್‌ಗಳಿಗೆ ತಿಳಿಯಪಡಿಸಬೇಕು. ನಮ್ಮ ಹೆಚ್ಚಿನ ಉದ್ಯೋಗಾವಕಾಶಗಳು ಒಂದು ದಿನ ಉತ್ತಮ ವೃತ್ತಿಪರರನ್ನಾಗಿ ಮಾಡುತ್ತದೆ.

ಇದನ್ನೂ ಓದಿ: ನೃತ್ಯ ಮಾಡುತ್ತಾ ಆರೋಗ್ಯ ವೃದ್ಧಿಸಿಕೊಳ್ಳಿ: ಇಲ್ಲಿವೆ ಅತ್ಯಮೂಲ್ಯ 5 ಪ್ರಯೋಜನಗಳು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.