ETV Bharat / business

ಸ್ಟಾರ್ಟಪ್ ಫಂಡಿಂಗ್ ಶೇ 70ರಷ್ಟು ಕುಸಿತ; 2023ರಲ್ಲಿ ಕೇವಲ $15 ಶತಕೋಟಿ ಹೂಡಿಕೆ

author img

By

Published : Jul 18, 2023, 12:36 PM IST

ಭಾರತೀಯ ಸ್ಟಾರ್ಟಪ್ ಫಂಡಿಂಗ್ ತೀವ್ರ ಕುಸಿತ ಕಂಡಿದೆ. ಹಣಕಾಸು ವರ್ಷ 2023ರಲ್ಲಿ ಸ್ಟಾರ್ಟಪ್ ಫಂಡಿಂಗ್ ಶೇ 70 ರಷ್ಟು ಕಡಿಮೆಯಾಗಿದೆ.

Indian startups faced 70% drop in funding i
Indian startups faced 70% drop in funding

ನವದೆಹಲಿ : ಭಾರತೀಯ ಸ್ಟಾರ್ಟಪ್​ ಉದ್ಯಮಕ್ಕೆ ಬರುತ್ತಿದ್ದ ಫಂಡಿಂಗ್ ಹಣಕಾಸು ವರ್ಷ 2023ರಲ್ಲಿ ಶೇ 70ರಷ್ಟು ಕುಸಿತ ಕಂಡು 15 ಶತಕೋಟಿ ಡಾಲರ್​ಗೆ ತಲುಪಿದೆ. ಕಳೆದ ಹಣಕಾಸು ವರ್ಷ 2022ರಲ್ಲಿ ಸ್ಟಾರ್ಟಪ್ ಉದ್ಯಮದ ಫಂಡಿಂಗ್ ಗರಿಷ್ಠ ಮಟ್ಟಕ್ಕೇರಿ 50 ಶತಕೋಟಿ ಡಾಲರ್​ಗೆ ತಲುಪಿತ್ತು. ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್‌ಸೀರ್‌ನ ವರದಿಯ ಪ್ರಕಾರ, ಬಂಡವಾಳ ಕುಸಿಯುತ್ತಿದ್ದಂತೆ, ಸ್ಟಾರ್ಟ್‌ಪ್‌ಗಳು ತಮ್ಮ ಖರ್ಚು ವೆಚ್ಚ ಕಡಿಮೆ ಮಾಡುತ್ತಿವೆ ಮತ್ತು ಲಾಭದಾಯಕತೆಯ ಹಾದಿಯನ್ನು ತ್ವರಿತಗೊಳಿಸುತ್ತಿವೆ.

"ಬಂಡವಾಳ ವೆಚ್ಚ ಮತ್ತು ಬಡ್ಡಿದರಗಳ ವೆಚ್ಚಗಳಲ್ಲಿನ ಹೆಚ್ಚಳ, ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿನ ಹಿಂಜರಿತ, ಟೆಕ್ ಸ್ಟಾಕ್‌ಗಳ ಮೌಲ್ಯದಲ್ಲಿನ ಕುಸಿತ ಮತ್ತು ಗ್ರಾಹಕ ಇಂಟರ್ನೆಟ್ ಬೆಳವಣಿಗೆಯಲ್ಲಿನ ನಿಧಾನಗತಿಗಳ ಕಾರಣದಿಂದ ಸ್ಟಾರ್ಟಪ್ ಉದ್ಯಮಕ್ಕೆ ಫಂಡಿಂಗ್ ಸ್ಥಿರವಾಗಿ ಹರಿದು ಬರುತ್ತಿಲ್ಲ" ಎಂದು ರೆಡ್‌ಸೀರ್‌ನ ಪಾಲುದಾರ ಮೋಹಿತ್ ರಾಣಾ ಹೇಳಿದರು. 1 ಶತಕೋಟಿ ಡಾಲರ್​ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ಸುಮಾರು 100 ಯುನಿಕಾರ್ನ್‌ಗಳು ಮತ್ತು 400ಕ್ಕಿಂತ ಕಡಿಮೆ ಸಾರ್ವಜನಿಕ ಕಂಪನಿಗಳು ದೇಶದಲ್ಲಿವೆ.

ಸ್ಟಾರ್ಟಪ್ ಕಂಪನಿಗಳಲ್ಲಿ ಸಂಸ್ಥಾಪಕರ ಮಾಲೀಕತ್ವದ ಪಾಲನ್ನು ನೋಡುವುದಾದರೆ- ಶೇಕಡಾ 65 ರಷ್ಟು ಸಾರ್ವಜನಿಕ ಸ್ಟಾರ್ಟಪ್ ಕಂಪನಿಗಳಲ್ಲಿ (ಲಿಸ್ಟೆಡ್ ಕಂಪನಿಗಳು) ಸಂಸ್ಥಾಪಕರ ಮಾಲೀಕತ್ವದ ಪಾಲು ಶೇಕಡಾ 50ಕ್ಕಿಂತ ಜಾಸ್ತಿ ಇದ್ದರೆ, ಶೇಕಡಾ 59ರಷ್ಟು ಖಾಸಗಿ ಸ್ಟಾರ್ಟಪ್ ಕಂಪನಿಗಳಲ್ಲಿ ಸಂಸ್ಥಾಪಕರ ಮಾಲೀಕತ್ವದ ಪಾಲು ಶೇಕಡಾ ಸೊನ್ನೆಯಿಂದ 20ರಷ್ಟಿದೆ.

ಎಲ್ಲ ಸ್ಟಾರ್ಟಪ್​ಗಳು ಸಾಮಾನ್ಯವಾಗಿ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತವೆ. ಆದರೆ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಗಳು ಸಂಸ್ಥಾಪಕರೊಂದಿಗೆ ಗಟ್ಟಿಯಾಗಿ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ ಎನ್ನುತ್ತಾರೆ ರಾಣಾ.

"ಲಿಸ್ಟೆಡ್ ಟೆಕ್ ಕಂಪನಿಗಳು ಕಳೆದ ಐದು ತ್ರೈಮಾಸಿಕಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ. ಪೇಟಿಎಂ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಹೊಸ ವ್ಯಾಪಾರ ವಿಭಾಗಗಳಿಗೆ ವ್ಯವಹಾರ ವಿಸ್ತರಿಸಿಕೊಂಡಿದೆ. ಪ್ರತಿಯೊಬ್ಬ ಗ್ರಾಹಕರಿಂದ ಬರುವ ಆದಾಯವನ್ನು ಹೆಚ್ಚಿಸಲು ಮತ್ತು CAC ಅನ್ನು ಕಡಿಮೆ ಮಾಡಲು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ upsold/cross-sold ವೈಶಿಷ್ಟ್ಯಗಳನ್ನು ಅದು ಪರಿಚಯಿಸಿದೆ. ಹಾಗೆಯೇ ಜೊಮ್ಯಾಟೊ ರೆಸ್ಟೋರೆಂಟ್ ಪಾಲುದಾರರಿಂದ ಟೇಕ್ ದರಗಳನ್ನು ಹೆಚ್ಚಿಸಿದೆ ಮತ್ತು ಗ್ರಾಹಕರಿಗೆ ಚಾರ್ಜ್ ಮಾಡಲಾಗುವ ಡೆಲಿವರಿ ಶುಲ್ಕಗಳನ್ನು ಹೆಚ್ಚಿಸಿದೆ" ಎಂದು ಅವರು ಹೇಳಿದರು.

ವರದಿಯ ಪ್ರಕಾರ, ಎಲ್ಲ ವಲಯಗಳಲ್ಲಿನ ಲಾಭದಾಯಕ ಯುನಿಕಾರ್ನ್‌ಗಳ ಸಂಖ್ಯೆಯು ಮೂರರಿಂದ ನಾಲ್ಕು ವರ್ಷಗಳಲ್ಲಿ ಬೆಳೆಯುವ ನಿರೀಕ್ಷೆಯಿದೆ. ಹಣಕಾಸು ವರ್ಷ 2022ರಲ್ಲಿ ಲಾಭದಾಯಕ ಯುನಿಕಾರ್ನ್​​ಗಳ ಸಂಖ್ಯೆ 30 ಇದ್ದದ್ದು ಹಣಕಾಸು ವರ್ಷ 2027 ರಲ್ಲಿ 55ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಹಣಕಾಸು ವರ್ಷ 2027 ರ ವೇಳೆಗೆ ಸುಮಾರು ಶೇಕಡಾ 50 ರಷ್ಟು ಯುನಿಕಾರ್ನ್‌ಗಳು ಲಾಭದಾಯಕ ಸ್ಥಿತಿಗೆ ತಲುಪುವ ನಿರೀಕ್ಷೆಯಿದೆ. ಆದರೆ ಶೇಕಡಾ 20 ರಷ್ಟು ಯುನಿಕಾರ್ನ್​ಗಳು ಕಾಯ್ದೆ ಕಾನೂನು ಸಮಸ್ಯೆಗಳು, ಬೇಡಿಕೆ ಕುಸಿತ ಮತ್ತು ಅಸ್ಪಷ್ಟ ವ್ಯವಹಾರ ಮಾದರಿಗಳಿಂದಾಗಿ ಲಾಭದಾಯಕವಾಗಲು ಕಷ್ಟಪಡುವ ಸಾಧ್ಯತೆಯಿದೆ. ಸಂಕಷ್ಟದಲ್ಲಿರುವ ಕೆಲ ಯುನಿಕಾರ್ನ್‌ಗಳು ಹೊಸ ವ್ಯವಹಾರಕ್ಕೆ ಬದಲಾಯಿಸಬಹುದು, ಕೆಲವನ್ನು ಬೇರೆ ಕಂಪನಿಗಳು ಸ್ವಾಧೀನಪಡಿಸಿಕೊಳ್ಳಬಹುದು ಅಥವಾ ಇನ್ನು ಕೆಲವು ಸಂಪೂರ್ಣವಾಗಿ ಮುಚ್ಚಬಹುದು ಎಂದು ವರದಿ ತಿಳಿಸಿದೆ. ಇದೆಲ್ಲವನ್ನೂ ಮೀರಿ ಆಶಾದಾಯಕ ಬೆಳವಣಿಗೆ ಏನೆಂದರೆ- ಹಣಕಾಸು ವರ್ಷ 2022ಕ್ಕೆ ಹೋಲಿಸಿದರೆ 2027ರಲ್ಲಿ ಲಾಭದಾಯಕ ಯುನಿಕಾರ್ನ್​ಗಳು 5 ಪಟ್ಟು ಹೆಚ್ಚಿನ ಲಾಭ ಮಾಡಬಹುದು.

ಇದನ್ನೂ ಓದಿ : IT return ಫೈಲಿಂಗ್​ಗೆ ಜುಲೈ 31ರ ಗಡುವು; ಈ ಬಾರಿ ಅವಧಿ ವಿಸ್ತರಣೆ ಸಾಧ್ಯತೆ ಕಡಿಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.