ನವದೆಹಲಿ: ಅಗ್ಗದ ಆಹಾರ ಪದಾರ್ಥಗಳ ಮೇಲೆ ಸಗಟು ಬೆಲೆ ಆಧಾರಿತ ಹಣದುಬ್ಬರವು ಸತತ ಎರಡನೇ ತಿಂಗಳಲ್ಲೂ (ಜುಲೈ) ಶೇಕಡಾ 11.16 ಕ್ಕೆ ಇಳಿದಿದೆ. ಉತ್ಪಾದನಾ ವಸ್ತುಗಳ ಬೆಲೆ ಮತ್ತು ಕಚ್ಚಾ ತೈಲದ ಬೆಲೆಗಳು ಸ್ಥಿರವಾಗಿವೆ. ಆದರೂ ಡಬ್ಲ್ಯೂಪಿಐ ಹಣದುಬ್ಬರವು ಜುಲೈನಲ್ಲಿ ಸತತ ಮೂರನೇ ತಿಂಗಳಿಗೆ ಎರಡು ಅಂಕಿಯಲ್ಲೇ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಡಬ್ಲ್ಯೂಪಿಐ ಹಣದುಬ್ಬರವು ಶೇ. (-) 0.25ರಲ್ಲಿ ಇತ್ತು.
2021ರ ಜುಲೈನಲ್ಲಿ ಅಧಿಕ ಹಣದುಬ್ಬರ ದರವು ಪ್ರಾಥಮಿಕವಾಗಿ ಕಡಿಮೆ ಮೂಲ ಪರಿಣಾಮವಾಗಿ ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಖನಿಜ ತೈಲಗಳು, ಮೂಲ ಲೋಹಗಳಿಂದ ತಯಾರಿಸಿದ ಉತ್ಪನ್ನಗಳು, ಆಹಾರ ಉತ್ಪನ್ನಗಳು, ಜವಳಿ ಹಾಗೂ ಇತ್ಯಾದಿ ವಸ್ತುಗಳ ಬೆಲೆ ಏರಿಕೆಯಾಗಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.59ಕ್ಕೆ ಕುಸಿತ
ಆಹಾರ ಪದಾರ್ಥಗಳ ಹಣದುಬ್ಬರವು ಸತತ ಮೂರನೇ ತಿಂಗಳಲ್ಲಿ ಇಳಿಕೆಯಾಗಿದೆ. ಜುಲೈನಲ್ಲಿ ಶೂನ್ಯ ಶೇಕಡಾದಲ್ಲಿತ್ತು. ಈರುಳ್ಳಿಯ ಬೆಲೆಗಳು ಏರಿಕೆಯಾಗಿದ್ದರೂ ಜೂನ್ ನಲ್ಲಿ ಶೇ. 3.09 ರಷ್ಟು ಕಡಿಮೆಯಾಗಿದೆ. ಹಣದುಬ್ಬರದಿಂದಾಗಿ ಗರಿಷ್ಠ ಅಂದ್ರೆ ಶೇ.72.01ಕ್ಕೆ ಏರಿಕೆಯಾಗಿತ್ತು. ಜುಲೈ ತಿಂಗಳಿನಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ 40.28ರಲ್ಲಿತ್ತು. ಜೂನ್‌ನಲ್ಲಿ 36.34 ರಷ್ಟು ಇತ್ತು. ತಯಾರಿಕಾ ಉತ್ಪನ್ನಗಳ ಹಣದುಬ್ಬರ ಜುಲೈನಲ್ಲಿ 11.20ರಷ್ಟಿತ್ತು.
ಇದು ಜೂನ್‌ನಲ್ಲಿ 10.88 ರಷ್ಟಿತ್ತು. ಕಳೆದ ವಾರ ಆರ್‌ಬಿಐ ಹಣಕಾಸು ನೀತಿಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದ ಹಿನ್ನೆಲೆಯಲ್ಲಿ 2021-22ರ ಆರ್ಥಿಕ ವರ್ಷದಲ್ಲಿ ಸಗಟು ಹಣದುಬ್ಬರ ಶೇಕಡಾ 5.7ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.