ನವದೆಹಲಿ : ಜರ್ಮನಿಯ ಆಟೋಮೊಬೈಲ್ ದೈತ್ಯ ಕಂಪನಿ ಫೋಕ್ಸ್‌ವ್ಯಾಗನ್ ಟೈಗೂನ್ ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಇಂದು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 31.99 ಲಕ್ಷ ರೂಪಾಯಿಗಳು. ಇಂದಿನಿಂದಲೇ ಬುಕ್ಕಿಂಗ್ ಕೂಡ ಆರಂಭವಾಗಿದೆ. ಮುಂದಿನ ವರ್ಷದ ಜನವರಿ ಎರಡನೇ ವಾರದಲ್ಲಿ ಈ ಹೊಸ ಆವೃತ್ತಿಯ ಕಾರು ಗ್ರಾಹಕರ ಕೈ ಸೇರಲಿದೆ.
ಫೋಕ್ಸ್‌ವ್ಯಾಗನ್ ಟೈಗೂನ್ ಯುವಿ ಕಾರು ತನ್ನ ಪ್ರೀಮಿಯಂ ಲುಕ್‌ನೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ನಿರ್ದೇಶಕ ಆಶಿಶ್ ಗುಪ್ತಾ ಹೇಳಿದ್ದಾರೆ. ಶೈಲಿ, ಕಾರ್ಯಕ್ಷಮತೆ ಹಾಗೂ ಸುರಕ್ಷತೆ ವಿಭಾಗಗಳು ಉತ್ತಮವಾಗಿವೆ. ಒಟ್ಟಾರೆಯಾಗಿ ಈ ವರ್ಷ ವೋಕ್ಸ್‌ವ್ಯಾಗನ್ ನಾಲ್ಕು ಕಾರುಗಳನ್ನು ಎಸ್‌ಯುವಿಗಳಲ್ಲಿ ಬಿಡುಗಡೆ ಮಾಡಿದೆ.
ಟೈಗೂನ್ ಯುವಿಯ ವೈಶಿಷ್ಟ್ಯಗಳು..
- 12.65 ಕಿಮೀ ಮೈಲೇಜ್
- 7 ಸ್ಪೀಡ್ ಟ್ರಾನ್ಸ್‌ಮಿಷನ್
- 1984 ಸಿಸಿ ಎಂಜಿನ್
- ಐವದು ಆಸನಗಳು
- ಆಂಟಿ-ಲಾಕಿಂಗ್ ಸಿಸ್ಟಮ್
- ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ
ಇದನ್ನೂ ಓದಿ: ಭಾರತಕ್ಕೆ ಲಗ್ಗೆಯಿಟ್ಟ ಔಡಿ ಎ4 ಸೆಡಾನ್ ಕಾರು: ಬೆಲೆ, ವೈಶಿಷ್ಟ್ಯತೆ ಹೀಗಿದೆ..