ETV Bharat / business

ಮೋದಿ ಗತ್ತು, ಸೀತಾರಾಮನ್ ತಾಕತ್ತು: ಪೇಟೆಗೆ ಬಂತು ಲಕ್ಷಾಂತರ ಕೋಟಿ ರೂ. ಸಂಪತ್ತು

ಸೀತಾರಾಮನ್ ಮೊದಲ ಬಾರಿಗೆ ಹಣಕಾಸು ಮಂತ್ರಿಯಾಗಿ ಕೇವಲ ಒಂದೂವರೆ ವರ್ಷ ಕಳೆದಿವೆ. 2020ರ ಮಾರ್ಚ್‌ನಿಂದ ಸ್ಟಾಕ್ ಮಾರುಕಟ್ಟೆಗೆ ಅತ್ಯಧಿಕ ಪ್ರಮಾಣದಲ್ಲಿ ಸಂಪತ್ತು ಹರಿದುಬರುತ್ತಿರುವುದನ್ನು ಕಾಣುತ್ತಿದೆ. ದೇಶೀಯ ಮತ್ತು ವಿದೇಶೀಯ ಸಾಂಸ್ಥಿಕ ಹೂಡಿಕೆದಾರರಿಗೆ ಅತಿದೊಡ್ಡ ಸಂಪತ್ತು ಲಭ್ಯವಾಗುತ್ತಿದೆ.

Sitharaman
ಸೀತಾರಾಮನ್
author img

By

Published : Dec 29, 2020, 2:47 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಕೆಲವು ತಿಂಗಳಿಂದ ಭಾರತೀಯ ಷೇರು ಮಾರುಕಟ್ಟೆಗಳ ಗೂಳಿ ಓಟದ ಅಧ್ಯಕ್ಷತೆ ವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸೀತಾರಾಮನ್ ಅವರು ಅನೇಕ ವರ್ಷಗಳ ಬಳಿಕ ಅತಿದೊಡ್ಡ ಸಂಪತ್ತು ಸೃಷ್ಟಿಸುವ ಕಥೆ ಹೆಣೆಯುತ್ತಿದ್ದಾರೆ.

ಸೀತಾರಾಮನ್ ಮೊದಲ ಬಾರಿಗೆ ಹಣಕಾಸು ಮಂತ್ರಿಯಾಗಿ ಕೇವಲ ಒಂದೂವರೆ ವರ್ಷ ಕಳೆದಿವೆ. 2020ರ ಮಾರ್ಚ್‌ನಿಂದ ಸ್ಟಾಕ್ ಮಾರುಕಟ್ಟೆಗೆ ಅತ್ಯಧಿಕ ಪ್ರಮಾಣದಲ್ಲಿ ಸಂಪತ್ತು ಹರಿದುಬರುತ್ತಿರುವುದನ್ನು ಕಾಣುತ್ತಿದೆ. ದೇಶೀಯ ಮತ್ತು ವಿದೇಶೀಯ ಸಾಂಸ್ಥಿಕ ಹೂಡಿಕೆದಾರರಿಗೆ ಅತಿದೊಡ್ಡ ಸಂಪತ್ತು ಲಭ್ಯವಾಗುತ್ತಿದೆ.

ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಆರ್ಥಿಕತೆ ಅಡೆತಡೆಯೂ ಸ್ಟಾಕ್ ಮಾರುಕಟ್ಟೆಗಳ ಓಟವನ್ನು ನಿಲ್ಲಿಸಲು ಆಗುತ್ತಿಲ್ಲ. ಕೋವಿಡ್ ಕಾಲದಲ್ಲಿ ಸಾವಿರ ಹೊಸ - ಹೊಸ ಹೂಡಿಕೆದಾರರು ಸೇರ್ಪಡೆ ಆಗುತ್ತಿದ್ದಾರೆ.

ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಯ (ಸೆಬಿ) ದತ್ತಾಂಶದ ಪ್ರಕಾರ ಹೂಡಿಕೆದಾರರು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 3.4 ಮಿಲಿಯನ್ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆದ್ದಾರೆ.

ಸುಲಭ ದ್ರವ್ಯತೆ ಮತ್ತು ಕೇಂದ್ರೀಯ ಬ್ಯಾಂಕ್ ಮುಕ್ತಿಯಂತಹ ಜಾಗತಿಕ ಅಂಶಗಳ ಒಂದು ಪಾತ್ರ ವಹಿಸಿದ್ದರೇ ಆರ್ಥಿಕತೆ ಮತ್ತು ಮಾರುಕಟ್ಟೆಗಳು ಹಣಕಾಸು ಸಚಿವಾಲಯದ ಕಾವಲಿನಲ್ಲಿವೆ ಎಂಬುದನ್ನು ಕೂಡ ಅಲ್ಲಗಳೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಮಾರುಕಟ್ಟೆಗಳು ಯಾರೂ ತಡೆಯಲಾಗದಂತಹ ಹೊಸ ದಾಖಲೆ ಬರೆಯಲಿ ಮತ್ತು ವಿದೇಶಿ ಒಳಹರಿವಿನ ಪ್ರವಾಹವೇ ಬರಲಿದೆ.

ಮಾರುಕಟ್ಟೆಯ ಅದ್ಭುತ ಓಡಕ್ಕೆ ನಾರ್ತ್ ಬ್ಲಾಕ್‌ನ ಮಾರ್ಗದಲ್ಲಿ ಹೆಚ್ಚಿನ ಕ್ರೆಡಿಟ್ ಹೊಳೆ ಹರಿಯಲಿಲ್ಲ. ಷೇರು ಮಾರುಕಟ್ಟೆ ಸ್ಪಷ್ಟವಾಗಿ ಆರ್ಥಿಕ ಚೇತರಿಕೆಯ ಕಥೆಯನ್ನು ಒಳಗೊಳ್ಳುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರತದ ಬೆಳವಣಿಗೆಯ ನಿರೀಕ್ಷೆಗಳನ್ನು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಅತಿದೊಡ್ಡ ಬಾಜಿಕಟ್ಟೆಯನ್ನಾಗಿ ಮಾಡಿದ್ದಾರೆ.

ಇದನ್ನೂ ಓದಿ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಹೋಮ್ ಫೈನಾನ್ಸ್​ ಐಸಿಎ ಗಡುವು ವಿಸ್ತರಣೆ

ಹಣಕಾಸು ಸಚಿವರು ಸೀತಾರಾಮನ್ ಅವರ ಅವಧಿಯ 2020ರಲ್ಲಿ ಈಕ್ವಿಟಿ ಮಾರುಕಟ್ಟೆಯ ಗರಿಷ್ಠ ಜಿಗಿತದ ದಾಖಲೆ ಹೊಂದಿದೆ. ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ವಿದೇಶಿ ಒಳಹರಿವು ಡಿಸೆಂಬರ್ ತಿಂಗಳ ರಜಾ ದಿನಗಳಲ್ಲಿ 7.5 ಬಿಲಿಯನ್​ ಡಾಲರ್​ ಒಳಬಂದದ್ದು ಸುಲಭವಲ್ಲ.

ಕಳೆದ ಕೆಲವು ವರ್ಷಗಳಿಂದ ಡಿಸೆಂಬರ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಜಾದಿನಗಳ ತಿಂಗಳಾಗಿದೆ. ವಿದೇಶಿ ನಿಧಿಗಳು ಅಷ್ಟೊಂದು ಸಕ್ರಿಯವಾಗಿಲ್ಲದ ತಿಂಗಳು ಎಂದು ಪರಿಗಣಿಸಲಾಗಿದೆ. ನವೆಂಬರ್ ಸಾಮಾನ್ಯವಾಗಿ ವಿದೇಶಿ ನಿಧಿಗಳು ಲಾಭದತ್ತ ಒತ್ತಡ ಹಾಕುವ ತಿಂಗಳಾಗಿವೆ. ಇವೆರಡೂ ಈ ವರ್ಷ ಸಂಭವಿಸಿಲ್ಲ.

ಈಕ್ವಿಟಿ ಮಾರುಕಟ್ಟೆಗಳು 2020ರಲ್ಲಿ ಐತಿಹಾಸಿಕ ಓಟ ದಾಖಲಿಸಿವೆ. ನಿಫ್ಟಿ ಸಾರ್ವಕಾಲಿಕ ಗರಿಷ್ಠ ದಾಖಲೆ 2020ರ ಜನವರಿಯಲ್ಲಿ 12,431 ಅಂಕಗಳಿಗೆ ತಲಪಿತ್ತು. ವರ್ಷದ ಅಂತ್ಯದ ವೇಳೆಗೆ ಈ ದಾಖಲೆ ಅಳಿಸಲಾಗಿದೆ.

ಎಫ್‌ಐಐ ಒಳಹರಿವು ನವೆಂಬರ್‌ನಲ್ಲಿ ಪ್ರಬಲವಾದ ವೇಗ ಕಂಡಿದ್ದು, ಇದುವರೆಗೆ ಮಾಸಿಕ 65,200 ಕೋಟಿ ರೂ. ಒಳಹರಿವು ಪಡೆಯಿತು. ಇದು ಡಿಸೆಂಬರ್‌ನಲ್ಲೂ ಮುಂದುವರೆದಿದೆ. ಪೂರ್ಣ ವರ್ಷಕ್ಕೆ ಎಫ್‌ಐಐಗಳ ಒಳಹರಿವು 1,10,000 ಕೋಟಿ ರೂ. ಮೀರಿದ್ದು, ಬಿಎಸ್ಇ ಸೆನ್ಸೆಕ್ಸ್ 47,000 ಅಂಕ ದಾಟಿ ಮುನ್ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.