ETV Bharat / business

ಸಿನಿಮೀಯ ಶೈಲಿಯಲ್ಲಿ 50 ಕೆ.ಜಿ. ಈರುಳ್ಳಿ ಲೂಟಿ ಮಾಡಿದ ದುಷ್ಕರ್ಮಿಗಳು - ಈರುಳ್ಳಿ ದರ

ರಿಕ್ಷಾ ಎಳೆಯು ಕೂಲಿಕಾರನೊಬ್ಬ ಈರುಳ್ಳಿ ಮೂಟೆಗಳನ್ನು ಹೋಟೆಲ್‌ಗೆ ತಲುಪಿಸಲು ಹೊರಟಿದ್ದಾಗ ಮಾರ್ಗ ಮಧ್ಯದಲ್ಲಿ ಬೈಕ್​ ಸವಾರರು ಈರುಳ್ಳಿ ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ನಡೆದಿದೆ.

Onion theft
ಈರುಳ್ಳಿ ಕಳವು
author img

By

Published : Dec 10, 2019, 2:29 PM IST

ಗೋರಖ್​ಪರ: ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಬೈಕ್‌ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು 50 ಕೆ.ಜಿ. ಈರುಳ್ಳಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

ರಿಕ್ಷಾ ಎಳೆಯು ಕೂಲಿಕಾರನೊಬ್ಬ ಈರುಳ್ಳಿಯನ್ನು ಹೋಟೆಲ್‌ಗೆ ತಲುಪಿಸಲು ಹೊರಟಿದ್ದಾಗ ಲೂಟಿ ಮಾಡಲಾಗಿದೆ.

ರಿಕ್ಷಾ ಎಳೆಯುವ ಯಮುನ ಎಂಬುವವರು ಆರು ಚೀಲ ಈರುಳ್ಳಿಯನ್ನು ತಮ್ಮ ರಿಕ್ಷಾದಲ್ಲಿ ಗೋಲ್ಘರ್ ಪ್ರದೇಶದ ಹೋಟೆಲ್​ಗೆ ಸಾಗಿಸುತ್ತಿದ್ದರು. ಮಾರ್ಗ ಮಧ್ಯದಲ್ಲಿ ಓರ್ವ ಬೈಕ್​ ಸವಾರ ಯಮುನ ಗಮನವನ್ನು ಬೇರೆ ಕಡೆ ಸೆಳೆದಿದ್ದಾನೆ. ಹಿಂದಿನಿಂದ ಬಂದ ಮತ್ತೊಬ್ಬ​ ಸವಾರ ಈರುಳ್ಳಿ ಮೂಟೆಯನ್ನು ಬೈಕ್​ನಲ್ಲಿ ಇರಿಸಿಕೊಂಡು ಪರಾರಿ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಗಡಿ ಮಾಲೀಕ ಫಿರೋಜ್ ಅಹ್ಮದ್ ರೈನ್ ಪೊಲೀಸರಿಗೆ ಈ ಬಗ್ಗೆ ಲಿಖಿತ ದೂರು ನೀಡಿದ್ದಾನೆ. ತನಿಖೆಯ ನಂತರವೇ ಎಫ್ಐಆರ್ ದಾಖಲಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ದೂರನ್ನು ಆಧರಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.