ನವದೆಹಲಿ: ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿ ಐಫೋನ್ಗೆ ಸೆಡ್ಡು ಹೊಡೆದಿದ್ದ ಒನ್ಪ್ಲಸ್ ಮತ್ತೊಂದು ಹೊಸ ಮೊಬೈಲ್ನೊಂದಿಗೆ ಮಾರ್ಕೆಟ್ಗೆ ಮರಳುತ್ತಿದೆ.
ಒನ್ಪ್ಲಸ್ ಸಂಸ್ಥೆ ಟಿವಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿರುವ ವೇಳೆಯಲ್ಲೇ ಒನ್ಪ್ಲಸ್ 7T ಮೊಬೈಲ್ ರಿಲೀಸ್ ಮಾಡುವ ಘೋಷಣೆ ಮಾಡಿದೆ. ಜೊತೆಗೆ ಮೊಬೈಲ್ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.
-
Our brand new design with 4th generation matte-frosted glass #OnePlus7T https://t.co/w35HE2AyKj pic.twitter.com/oNEI7NkZPk
— Pete Lau (@PeteLau) September 17, 2019 " class="align-text-top noRightClick twitterSection" data="
">Our brand new design with 4th generation matte-frosted glass #OnePlus7T https://t.co/w35HE2AyKj pic.twitter.com/oNEI7NkZPk
— Pete Lau (@PeteLau) September 17, 2019Our brand new design with 4th generation matte-frosted glass #OnePlus7T https://t.co/w35HE2AyKj pic.twitter.com/oNEI7NkZPk
— Pete Lau (@PeteLau) September 17, 2019
ಒನ್ಪ್ಲಸ್ ಸಂಸ್ಥೆಯ ಸಿಇಒ ಪೀಟ್ ಲೌ ಟ್ವಿಟರ್ ಮೂಲಕ ಒನ್ಪ್ಲಸ್ 7T ಮೊಬೈಲ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಒನ್ಪ್ಲಸ್ 7T ಮೊಬೈಲ್ನಲ್ಲಿ ಮೂರು ಕ್ಯಾಮರಾ ಇರಲಿದ್ದು, ವಿಶೇಷ ರೀತಿಯಲ್ಲಿ ವಿನ್ಯಾಸಗೊಂಡಿದೆ.
ಈ ವರ್ಷದ ಆರಂಭದಲ್ಲಿ ಒನ್ಪ್ಲಸ್ 7 ಪ್ರೋ ಮಾರುಕಟ್ಟೆ ಪ್ರವೇಶಿಸಿತ್ತು. ಬಹುತೇಕ ಅದೇ ವಿನ್ಯಾಸದಲ್ಲಿ ಒನ್ಪ್ಲಸ್ 7T ಮೊಬೈಲ್ ಸಹ ತಯಾರಾಗಿದೆ. ಅಂದ ಹಾಗೆ ಒನ್ಪ್ಲಸ್ 7T ಮೊಬೈಲ್ ಇದೇ ತಿಂಗಳ 26ರಂದು ಬಿಡುಗಡೆಯಾಗಲಿದೆ.