ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ-ಸಿಬಿಡಿಟಿ ಆದಾಯ ತೆರಿಗೆ ಪಾವತಿಯ ದಿನಾಂಕವನ್ನು 2021ರ ಡಿಸೆಂಬರ್ 31ರ ವರೆಗೆ ವಿಸ್ತರಿಸಿದೆ.
ಕೋವಿಡ್ -19 ನಿರ್ಬಂಧಗಳು ಮತ್ತು ಕೊರೊನಾ ಸೋಂಕಿನಿಂದಾಗಿ ತೆರಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ, ಆದಾಯ ತೆರಿಗೆ ಸಲ್ಲಿಕೆ ಹಾಗೂ ಆಡಿಟ್ ವರದಿ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಮೊದಲು, ಐಟಿಆರ್ ಸಲ್ಲಿಸುವ 2021ರ ಜುಲೈ 31 ರಿಂದ 2021 ರ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿತ್ತು. ಅಲ್ಲದೆ, 2020-21ರ ಆಡಿಟ್ ವರದಿ ಸಲ್ಲಿಸುವ ದಿನಾಂಕವನ್ನು 2022ರ ಜನವರಿ 15ರ ವರೆಗೆ ವಿಸ್ತರಿಸಲಾಗಿದೆ.
ಐಟಿ ಕಾಯಿದೆಯ ಸೆಕ್ಷನ್ 92 ಇ ಅಡಿಯಲ್ಲಿ ಅಂತಾರಾಷ್ಟ್ರೀಯ ವಹಿವಾಟುಗಳಿಗೆ ಅಥವಾ ನಿರ್ದಿಷ್ಟ ದೇಶೀಯ ವಹಿವಾಟುಗಳು ಲೆಕ್ಕದ ವರದಿ ಸಲ್ಲಿಸುವ ಅವಧಿ 2022ರ ಜನವರಿ 31 ಅವರೆಗೆ ಇತ್ತು. ದೇಶದ ಐಟಿ ಕ್ಷೇತ್ರದ ದೈತ್ಯ ಸಂಸ್ಥೆ ಇನ್ಫೋಸಿಸ್‌ಗೆ ಆದಾಯ ತೆರಿಗೆ ಪೋರ್ಟಲ್ ನಿರ್ವಣೆಯ ಜವಾಬ್ದಾರಿ ನೀಡಲಾಗಿತ್ತು. ಆದ್ರೆ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷಗಳು ಕಂಡು ಬಂದ ಕಾರಣ ಇ-ತೆರಿಗೆ ಪಾವತಿಗೆ ಹಿನ್ನಡೆಯಾಗಿತ್ತು.