ಮುಂಬೈ: ದೇಶೀಯ ಪ್ರಮುಖ ಆಟೋ ಕಂಪನಿ ಟಾಟಾ ಮೋಟಾರ್ಸ್, ತನ್ನ ಒಟ್ಟು ದೇಶೀಯ ಮಾರಾಟದಲ್ಲಿ ಶೇ 27ರಷ್ಟು ಬೆಳವಣಿಗೆ ದಾಖಲಿಸಿದ್ದು, ಅಕ್ಟೋಬರ್‌ನಲ್ಲಿ 49,669 ಯೂನಿಟ್ಗಳನ್ನು ಮಾರಾಟ ಮಾಡಿದೆ.
2019ರ ಅಕ್ಟೋಬರ್‌ನಲ್ಲಿ ಕಂಪನಿಯು 39,152 ವಾಹನಗಳನ್ನು ಮಾರಾಟ ಮಾಡಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
2019ರ ಅಕ್ಟೋಬರ್‌ನಲ್ಲಿನ 13,169 ಯುನಿಟ್‌ಗಳಿಗೆ ಹೋಲಿಸಿದರೆ ಹಿಂದಿನ ತಿಂಗಳಲ್ಲಿ ಪ್ರಯಾಣಿಕರ ವಾಹನ ಮಾರಾಟವು ಶೇ79ರಷ್ಟು ಏರಿಕೆ ಕಂಡು 23,617 ಕಾರುಗಳಿಗೆ ತಲುಪಿದೆ.
ಅಕ್ಟೋಬರ್‌ನಲ್ಲಿ ಒಟ್ಟು ವಾಣಿಜ್ಯ ವಾಹನ ಮಾರಾಟವು ಶೇ 2ರಷ್ಟು ಏರಿಕೆ ಕಂಡು 28,472 ವಾಹನಗಳಿಗೆ ತಲುಪಿದೆ. ವಾಣಿಜ್ಯ ವಾಹನಗಳ ದೇಶೀಯ ಮಾರಾಟವು ಹಿಂದಿನ ತಿಂಗಳಲ್ಲಿ 26,052 ರಷ್ಟಿತ್ತು. ಇದು 2019ರ ಅಕ್ಟೋಬರ್‌ನಲ್ಲಿ 25,893 ಯುನಿಟ್‌ಗಳಷ್ಟಿತ್ತು ಎಂದು ಪ್ರಕಟಣೆ ತಿಳಿಸಿದೆ.
ವಾಣಿಜ್ಯ ವಾಹನಗಳ ರಫ್ತು ಅಕ್ಟೋಬರ್‌ನಲ್ಲಿ ಶೇ 20ರಷ್ಟು ಏರಿಕೆಯಾಗಿ 2,420 ಯುನಿಟ್‌ಗಳಿಗೆ ತಲುಪಿದೆ.