ETV Bharat / business

ಅಪಾಚೆ, ಪಲ್ಸರ್​, ಯಮಹಾ ಸ್ಪೋರ್ಟ್ಸ್​ ಬೈಕ್​ಗಳು ₹ 1 ಲಕ್ಷಕ್ಕೂ ಅಗ್ಗ...! -

ಸ್ಪೋರ್ಟ್​ ಬೈಕ್​ ಪ್ರಿಯರ ಅಭಿರುಚಿಯನ್ನು ಗಮನದಲ್ಲಿರಿಸಿಕೊಂಡು ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹತ್ತಾರು ಸ್ಪೋರ್ಟ್ಸ್​ ಬೈಕ್​ಗಳು ಲಗ್ಗೆ ಇಡುತ್ತಿವೆ. ಬಹುತೇಕ ಸ್ಪೋರ್ಟ್ಸ್​ ಬೈಕ್​ಗಳು ದುಬಾರಿ ಬೆಲೆಯಾಗಿದ್ದು, ಮಧ್ಯಮ ವರ್ಗದವರ ಹಾಗೂ ಐದಂಕಿ ವೇತನದಾರರು ಖರೀದಿಸುವುದು ಕಷ್ಟ ಸಾಧ್ಯವಾಗುತ್ತಿದೆ. ಇಂತಹ ಅಸಾಧ್ಯತೆಗಳ ಮಧ್ಯೆ ಕೆಲವೊಂದು ಕಂಪನಿಗಳು ಕಡಿಮೆ ದರದ ಸ್ಪೋರ್ಟ್ಸ್​ ಬೈಕ್​ಗಳನ್ನು ಬಿಡುಗಡೆ ಮಾಡಿವೆ.

ಸಾಂದರ್ಭಿಕ ಚಿತ್ರ
author img

By

Published : Jul 2, 2019, 4:30 PM IST

ಮುಂಬೈ: ವಿದೇಶಿ ಸಂಸ್ಕೃತಿಯ ಸ್ಪೋರ್ಟ್ಸ್ ಬೈಕ್​ ಕ್ರೇಜ್​ ಇತ್ತೀಚಿನ ದಿನಗಳಲ್ಲಿ ಭಾರತೀಯ ಬೈಕ್​ ಪ್ರಿಯರನ್ನು ಅತ್ಯಾಕರ್ಷಣೆಯಿಂದ ಸೆಳೆಯುತ್ತಿದೆ.

ಸ್ಪೋರ್ಟ್​ ಬೈಕ್​ ಪ್ರಿಯರ ಅಭಿರುಚಿಯನ್ನು ಗಮನದಲ್ಲಿ ಇರಿಸಿಕೊಂಡು ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹತ್ತಾರು ಸ್ಪೋರ್ಟ್ಸ್​ ಬೈಕ್​ಗಳು ಲಗ್ಗೆ ಇಡುತ್ತಿವೆ. ಬಹುತೇಕ ಸ್ಪೋರ್ಟ್ಸ್​ ಬೈಕ್​ಗಳು ದುಬಾರಿ ಬೆಲೆಯಾಗಿದ್ದು, ಮಧ್ಯಮ ವರ್ಗದವರ ಹಾಗೂ ಐದಂಕಿ ವೇತನದಾರರು ಖರೀದಿಸುವುದು ಕಷ್ಟಸಾಧ್ಯವಾಗುತ್ತಿದೆ. ಇಂತಹ ಅಸಾಧ್ಯತೆಗಳ ಮಧ್ಯೆ ಕೆಲವೊಂದು ಕಂಪನಿಗಳು ಕಡಿಮೆ ದರದ ಸ್ಪೋರ್ಟ್ಸ್​ ಬೈಕ್​ಗಳನ್ನು ಬಿಡುಗಡೆ ಮಾಡಿವೆ.

ಒಂದು ಲಕ್ಷ ರೂಪಾಯಿ ಒಳಗೆ ಲಭ್ಯವಾಗುವ ಸ್ಪೋರ್ಟ್ಸ್​ ಬೈಕ್​ಗಳು

* ಟಿವಿಎಸ್​ ಅಪಾಚೆ ಆರ್​ಟಿಆರ್​ 4ವಿ:​ 197.75 ಸಿಸಿಯ ಸಿಂಗಲ್​ ಸಿಲಿಂಡರ್ ಎಂಜಿನ್​ನ 20.70 ಹೆಚ್​ಪಿ ಹಾಗೂ 18.10 ಎನ್​ಎಂ ಸಾಮರ್ಥ್ಯದ ಟಿವಿಎಸ್​ ಅಪಾಚೆ ಆರ್​ಟಿಆರ್​ 4ವಿ ಬೈಕ್ ಪ್ರಿಯರ​ ನೆಚ್ಚಿನ ಉತ್ಪನ್ನ. ಟಿವಿಎಸ್​ 3.9 ಸೆಕೆಂಡ್​ಗಳಲ್ಲಿ 0-60 ಕಿ.ಮೀ. ವೇಗ ಪಡೆಯಲಿದೆ. ಎಕ್ಸ್​ ಶೋರೂಮ್ ಬೆಲೆ ₹ 97,600.

* ಯಮಹಾ ಎಜಡ್​ ವಿ3 ಎಬಿಎಸ್​: ಇತ್ತೀಚೆಗೆ ಯಮಹಾ ಲೈಟ್​ವೇಟ್​ ಹಾಗೂ ನಿಪ್ಪಿ ಸ್ಟ್ರೆಂಥ್​ಫೈಟರ್​ನ ಯಮಹಾ ಎಜಡ್​ ವಿ3 ಎಬಿಎಸ್ ಬಿಡುಗಡೆ ಮಾಡಿದೆ. 149ಸಿಸಿ ಸಿಂಗಲ್​ ಸಿಲಿಂಡರ್​ ಎಂಜಿನ್​ ಹೊಂದಿದೆ. 13.2 ಬಿಹೆಚ್​ಪಿ ಮತ್ತು 12.8 ಎನ್​ಎಂನ ಟರ್ಕ್ಯೂ ತ್ವರಿತವಾಗಿ 5 ಗೇರ್ ಸ್ಪೇಡಲ್ಲಿ ಸಾಗಲು ನೆರವಾಗಲಿದೆ. ಎಕ್ಸ್​ ಶೋರೂಮ್​ನ ದರ ₹ 97,000

* ಸುಜುಕಿ ಗಿಕ್ಸರ್​: ಲೈಟ್​ವೇಟ್​ ಸ್ಪೋರ್ಟ್ಸ್​ ಬೈಕ್ ಆದ ಸುಜುಕಿ ಗಿಕ್ಸರ್, ಗಿಕ್ಸರ್​ನಲ್ಲಿ ಜಿಎಸ್​ಎಕ್ಸ್​ ಬಹು ಶ್ರೇಣಿಯ ಬೈಕ್​ಗಳನ್ನು ಹೊಂದಿದೆ. ಇದು 155ಸಿಸಿ ಸಿಂಗಲ್​ ಸಿಲಿಂಡರ್ ಎಂಜಿನ್​, 14 ಬಿಹೆಚ್​ಪಿಯು 8000 ಆರ್​ಪಿಎಂ ಹಾಗೂ 14 ಎನ್​ಎಂ ಇದರಲ್ಲಿದೆ. ಐದು ಗೇರ್​ ಬಾಕ್ಸ್​ ಹೊಂದಿರುವ ಗಿಕ್ಸರ್​ನ ಎಕ್ಸ್​ ಶೋರೂಮ್ ದರ ₹ 88,900

* ಬಜಾಜ್ ಪಲ್ಸರ್​ 220ಎಫ್​: ಬಜಾಜ್ ಪಲ್ಸರ್​ 220ಎಫ್​ 220 ಸಿಸಿ ಎಂಜಿನ್ ಸಾಮರ್ಥ್ಯವಿದೆ. 23.2 ಬಿಹೆಚ್​ಪಿ ಹಾಗೂ 18.3 ಎನ್​ಎಂ ಅತ್ಯಧಿಕ ವೇಗದ ಪವರ್ ಹೊಂದಿದೆ. ದೆಹಲಿ ಎಕ್ಸ್​ ಶೋರೂಮ್​ ದರ ₹ 1 ಲಕ್ಷ ಆಗಿದೆ.

* ಹೀರೋ ಎಕ್ಸ್ಟ್ರಿಮ್​ 200ಎಸ್​: ಹೀರೋ ಮೋಟಾರ್​​ ಕಾರ್ಪ್​ ನೂತನವಾಗಿ 199.6 ಸಿಸಿ ಎಂಜಿನ್ ಸಾಮರ್ಥ್ಯದ ಎಕ್ಸ್ಟ್ರಿಮ್​​ 200ಎಸ್​ ಬೈಕ್​ ಅನ್ನು ಪರಿಚಯಿಸಿದೆ. ಇದರಲ್ಲಿ 8,000 ಆರ್​ಪಿಎಂನ 18.1 ಬಿಹೆಚ್​ಪಿ ಮತ್ತು 6500 ಆರ್​ಪಿಎಂನ 17.1 ಎನ್​ಎಂ ಶಕ್ತಿಯ ಇಂಜಿನ್ ಹೊಂದಿದ್ದು, ಎಕ್ಸ್​-ಶೋರೂಮ್​ನ ದರ ₹ 98,400.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.