ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರವೃತ್ತಿಯ ಮಧ್ಯೆ ಇಂಡೆಕ್ಸ್ ಮೇಜರ್ಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಟ್ವಿನ್ಸ್ ಮತ್ತು ರಿಲಯನ್ಸ್ ಲಾಭ ಗಳಿಸಿದ್ದರಿಂದ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಲ್ಲಿ 834 ಅಂಕಗಳಷ್ಟು ಏರಿಕೆ ದಾಖಲಿಸಿದೆ.
30 ಷೇರುಗಳ ಮುಂಬೈ ಸೂಚ್ಯಂಕ 834.02 ಅಂಕ ಅಥವಾ ಶೇ 1.72ರಷ್ಟು ಹೆಚ್ಚಳವಾಗಿ 49,398.29 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 239.85 ಅಂಕ ಅಥವಾ ಶೇ 1.68ರಷ್ಟು ಏರಿಕೆ ಕಂಡು 14,521.15 ಅಂಕಗಳ ಮಟ್ಟದಲ್ಲಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಬಜಾಜ್ ಫೈನಾನ್ಸ್ ಶೇ 2ರಷ್ಟು ಏರಿಕೆ ಕಂಡಿದ್ದು, ಎಸ್‌ಬಿಐ, ಒಎನ್‌ಜಿಸಿ, ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಮತ್ತು ಆಕ್ಸಿಸ್ ಬ್ಯಾಂಕ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಐಟಿಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಹಿಂದುಳಿದವು.
ಇದನ್ನೂ ಓದಿ: ನಿಮ್ಮ ಹೇಳಿಕೆಗಳನ್ನು ಚಪಾತಿ, ದೋಸಾ ಥರ ಸುರುಳಿ ಸುತ್ತುತ್ತಿರಾ? ಪಾಂಟಿಂಗ್, ಕ್ಲಾರ್ಕ್ಗೆ ಮಹೀಂದ್ರಾ ಪಂಚ್!
ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 470.40 ಅಂಕ ಮತ್ತು ನಿಫ್ಟಿ 152.40 ಅಂಕಗಳಷ್ಟು ಇಳಿಕೆ ದಾಖಲಿಸಿತ್ತು. ವಿನಿಮಯ ಮಾಹಿತಿಯ ಪ್ರಕಾರ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಸೋಮವಾರ 650.60 ಕೋಟಿ ರೂ. ಷೇರು ಖರೀದಿಸಿದ್ದರು.
ಅಮೆರಿಕದಲ್ಲಿನ ಬೃಹತ್ ಹಣಕಾಸಿನ ಪ್ರಚೋದನೆ, ಜಾಗತಿಕ ಬ್ಯಾಂಕ್ಗಳ ಸತತವಾದ ಮೃದು ವಿತ್ತೀಯ ನೀತಿಗಳು, ದುರ್ಬಲ ಡಾಲರ್ ಮತ್ತು ಕಾರ್ಪೊರೇಟ್ ನಿರೀಕ್ಷೆಗಿಂತ ಉತ್ತಮ ಗಳಿಕೆಯ ಬೆಳವಣಿಗೆ ದೇಶೀಯ ಮಾರುಕಟ್ಟೆಗಳಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ.