ಮುಂಬೈ: ದುರ್ಬಲ ಜಾಗತಿಕ ಮಾರುಕಟ್ಟೆಗಳ ವಹಿವಾಟಿನ ನಡುವೆ ಎಲ್ಲ ವಲಯಗಳಲ್ಲಿನ ಷೇರುಗಳ ಮಾರಾಟ ಒತ್ತಡದಿದಂದ ಮುಂಬೈ ಷೇರುಪೇಟೆ ಮಹಾ ಕುಸಿತ ದಾಖಲಿಸಿದೆ.
ಜಾಗತಿಕ ಮಾರುಕಟ್ಟೆಗಳ ಪ್ರಭಾವಕ್ಕೆ ಒಳಗಾದ ದೇಶಿವ ಷೇರು ವಿನಿಮಯ ಕೇಂದ್ರದಲ್ಲಿ ತೀವ್ರ ಮಾರಾಟ ಒತ್ತಡ ಕಂಡುಬಂತು. ವಾರಾಂತ್ಯದ ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ 633.76 ಅಂಕ ಕುಸಿದು 38,357.18 ಅಂಕಗಳ ಮುಟ್ಟದಲ್ಲೂ ರಾಷ್ಟ್ರೀಯ ಷೇರು ಸ್ಯೂಚಂಕ ನಿಫ್ಟಿ 193.60 ಅಂಕ ಕುಸಿದು 11,333.85 ಅಂಕಗಳ ಮಟ್ಟದಕ್ಕೆ ತಲುಪಿತು.
ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್ ಮತ್ತು ಇನ್ಫೋಸಿಸ್ ಗರಿಷ್ಠ ಲಾಸರ್ ಸಾಲಿಗೆ ಸೇರಿದವು.
ಮಾರುತಿ ಹೊರತುಪಡಿಸಿ ಬಜಾಜ್ ಫೈನಾನ್ಸ್, ಬಜಾಜ್ ಆಟೋ, ಟಿಸಿಎಸ್, ಅಲ್ಟ್ರಾಟೆಕ್, ಬಜಾಜ್ ಫೈನ್ ಸರ್ವೀಸ್, ನೆಸ್ಲೆ, ಎಚ್ಸಿಎಲ್ ಟೆಕ್, ಏಷ್ಯಾನ್ ಪೆಯಿಂಟ್ಸ್, ಒಎನ್ಜಿಸಿ, ಟೆಕ್ ಮಹೀಂದ್ರಾ, ಎಲ್ಟಿ ಸೇರಿದಂತೆ ಬಹುತೇಕ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡಿತು.
ವಾಲ್ ಸ್ಟ್ರೀಟ್‌ನಲ್ಲಿ ರಾತ್ರಿಯ ಮಾರಾಟ ಒತ್ತಡದ ನಂತರ ಚೀನಾ ಮಾರುಕಟ್ಟೆಯ ಷೇರುಗಳು ಶುಕ್ರವಾರ ಇಳಿಕೆಯಾದವು. ಐದು ವಾರಗಳ ಏರಿಕೆ ಬಳಿಕ ಶಾಂಘೈ ಸೂಚ್ಯಂಕವು ನಷ್ಟ ದಾಖಲಿಸಿದೆ. ಬ್ಲೂ-ಚಿಪ್ ಸಿಎಸ್‌ಐ 300 ಸೂಚ್ಯಂಕವು ಶೇ 1ರಷ್ಟು ಕುಸಿದು 4,770.22ಕ್ಕೆ ತಲುಪಿದ್ದರೆ, ಶಾಂಘೈ ಕಾಂಪೊಸಿಟ್ ಸೂಚ್ಯಂಕವು ಶೇ 0.9 ರಷ್ಟು ಇಳಿಕೆ ಕಂಡು 3,355.37 ಅಂಕಗಳಿಗೆ ತಲುಪಿದೆ.
ಸರಕುಗಳ ಪೈಕಿ ತೈಲ ದರವು ಪ್ರತಿ ಬ್ಯಾರೆಲ್‌ಗೆ 44 ಡಾಲರ್ನಷ್ಟಿದೆ. ಜೂನ್‌ನಿಂದ ಈ ವಾರದಲ್ಲಿ ಅತಿದೊಡ್ಡ ಕುಸಿತ ಸಂಭವಿಸಿದೆ. ದುರ್ಬಲ ಬೇಡಿಕೆಯ ಅಂಕಿಅಂಶಗಳು ಕೋವಿಡ್ -19 ಸಾಂಕ್ರಾಮಿಕದಿಂದ ನಿಧಾನವಾಗಿ ಚೇತರಿಸಿಕೊಳ್ಳುವ ಆತಂಕಗಳು ಇದಕ್ಕೆ ಕಾರಣವಾಗಿವೆ.