ಮುಂಬೈ: ಜಾಗತಿಕ ಮಾರುಕಟ್ಟೆಗಳ ಋಣಾತ್ಮಕ ಸೂಚನೆಗಳ ಮಧ್ಯೆ ದೇಶೀಯ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಂದು 540 ಅಂಕಗಳಷ್ಟು ಕುಸಿತ ಕಂಡಿದೆ. ಸೂಚ್ಯಂಕದ ಟಾಪ್ ಷೇರುಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಭಾರಿ ನಷ್ಟ ಕಂಡಿವೆ.
ದಿನದ ವಹಿವಾಟಿನ ಮಧ್ಯಂತರ ಅವಧಿಯಲ್ಲಿ 737 ಅಂಕ ಕುಸಿತದ ಬಿಎಸ್‌ಇ ಸೂಚ್ಯಂಕವು ಅಂತ್ಯದ ವೇಳೆಗೆ 540 ಅಂಕ ಇಳಿಕೆಯಾಗಿ 40,145.50 ಅಂಕಗಳಿದೆ ತಲುಪಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 162.60 ಅಂಕ ಇಳಿಕೆಯಾಗಿ 11,767.75 ಅಂಕಗಳ ಮಟ್ಟಕ್ಕೆ ತಲುಪಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಹೂಡಿಕೆದಾರರು ತಮ್ಮ ಲಾಭ ಕಾಯ್ದಿರಿಸಿಕೊಳ್ಳಲು ಇಚ್ಛಿಸಿದ್ದರೇ ಮತ್ತೊಂದು ಕಡೆ ಐರೋಪ್ಯ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನೇರ ಪರಿಣಾಮ ದೇಶಿ ಮಾರುಕಟ್ಟೆಯ ಮೇಲೆ ಬೀರಿದ್ದು, ಆಟೋ, ಮೆಟಲ್ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿ ತೀವ್ರ ನಷ್ಟ ಸಂಭವಿಸಿತು.
ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಇನ್ಫೋಸಿಸ್ ಸೆನ್ಸೆಕ್ಸ್ ನಷ್ಟದಲ್ಲಿ ಕೊನೆಗೊಂಡವು. ನೆಸ್ಲೆ ಇಂಡಿಯಾ, ಕೊಟಕ್ ಮಹೀಂದ್ರ ಬ್ಯಾಂಕ್, ಎಚ್‌ಡಿಎಫ್‌ಸಿ, ಟಿಸಿಎಸ್, ಇಂಡಸ್ ಇಂಡ್ ಬ್ಯಾಂಕ್, ಪವರ್ ಗ್ರಿಡ್, ಹಿಂದೂಸ್ತಾನ ಯುನಿಲಿವರ್ ಷೇರು ಮೌಲ್ಯದಲ್ಲಿ ಏರಿಕೆ ಕಂಡು -ಬಂತು.
ಜಾಗತಿಕ ಮಾರುಕಟ್ಟೆಗಳ ಪ್ರಭಾವ
ಕೊರೊನಾ ವೈರಸ್ ಪ್ರಕರಣಗಳ ಮರು ಏರಿಕೆ ನಿಯಂತ್ರಿಸಲು ಇಟಲಿ ಮತ್ತು ಸ್ಪೇನ್ ಹೊಸ ನಿರ್ಬಂಧಗಳನ್ನು ಹೇರಿದೆ. ಇದರಿಂದ ಯುರೋಪಿಯನ್ ಷೇರುಗಳು ಸೋಮವಾರದ ವಹಿವಾಟಿನಂದು ಇಳಿಕೆ ಕಂಡವು. ಆದರೆ, ಜರ್ಮನ್ ಹೆವಿವೇಯ್ಟ್ ಎಸ್‌ಎಪಿ ಷೇರುಗಳು ಶೇ 20ರಷ್ಟು ಕುಸಿದವು.
ಪ್ಯಾನ್-ಯುರೋಪಿಯನ್ ಎಸ್‌ಟಿಒಎಕ್ಸ್ಎಕ್ಸ್ 600 ಸೂಚ್ಯಂಕವು ಶೇ 1ಕ್ಕಿಂತಲೂ ಹೆಚ್ಚು ಕುಸಿದಿದೆ. ಅಮೆರಿಕ ಉತ್ತೇಜಕ ಪ್ಯಾಕೇಜ್ ಮತ್ತು ಅಧ್ಯಕ್ಷೀಯ ಚುನಾವಣೆಯ ಚಿಂತೆಗಳು ಜಾಗತಿಕ ಅಪಾಯದ ಪ್ರಮಾಣ ಅಲ್ಪ ಕಡಿಮೆಯಾಗಿಸಿವೆ. ಗ್ರಾಹಕ ವಲಯದ ಷೇರುಗಳ ಪ್ರಭಾವದಿಂದ ಚೀನಾ ಪೇಟೆ ಸಹ ಕುಸಿತ ದಾಖಲಿಸಿತು.
ತೈಲ ಬೆಲೆಗಳ ಮೇಲೆ ಸೋಮವಾರ ಶೇ 3ರಷ್ಟು ಕುಸಿದವು. ಕಳೆದ ವಾರ ನಷ್ಟ ವಿಸ್ತರಿಸಿದ್ದು, ಅಮೆರಿಕ ಮತ್ತು ಯುರೋಪ್ನಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಕಚ್ಚಾ ತೈಲ ಬೇಡಿಕೆಯ ಬಗ್ಗೆ ಚಿಂತೆಯನ್ನುಂಟು ಮಾಡಿದೆ.