ಮುಂಬೈ: ಅಮೆರಿಕ ಫೆಡರಲ್ ಆರ್ಥಿಕ ಚೇತರಿಕೆಯ ಸುತ್ತಲೂ ಅನಿಶ್ಚಿತತೆ ಆವರಿಸಿದೆ ಎಂಬುದನ್ನು ಹೊರಗೆಡವುತ್ತಿದ್ದಂತೆ ಮುಂಬೈ ಷೇರುಪೇಟೆಯಲ್ಲಿ ಮಹಾಕುಸಿತ ಸಂಭವಿಸಿದೆ.
ಪೇಟೆ ಸೂಚ್ಯಂಕದ ಹೆವಿವೇಯ್ಟ್ಸ್ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹೆಚ್ಡಿಎಫ್ಸಿ ಟ್ವಿನ್ಸ್ ಜಾಗತಿಕ ಮಾರುಕಟ್ಟೆಗಳಿಂದ ನಕಾರಾತ್ಮಕದತ್ತ ಸಾಗಿದವು. ಇದರ ತತ್ಪರಿಣಾಮವಾಗಿ ಮುಂಬೈ ಷೇರು ಸೂಚ್ಯಂಕ ದಿನದ ವಹಿವಾಟಿನ ಅಂತ್ಯಕ್ಕೆ 323 ಅಂಕ ಕುಸಿದು 38979.85 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 88.45 ಅಂಕ ಇಳಿಕೆಯಾಗಿ 11,516.10 ಅಂಕಗಳ ಮಟ್ಟಕ್ಕೆ ತಲುಪಿತು.
ದಿನದ ವಹಿವಾಟಿನಲ್ಲಿ ಹೆಚ್ಸಿಎಲ್ ಟೆಕ್, ಇನ್ಫೋಸಿಸ್, ಮಾರುತಿ ಮತ್ತು ಒಎನ್ಜಿಸಿ ಷೇರು ಮೌಲ್ಯ ಧನಾತ್ಮಕವಾಗಿದ್ದರೇ ಟೈಟನ್, ಏಷ್ಯಾನ್ ಪೆಯಿಂಟ್ಸ್, ಬಜಾಜ್ ಆಟೋ, ನೆಸ್ಲೆ, ಎಂ&ಎಂ, ಭಾರ್ತಿ ಏರ್ಟೆಲ್, ಟೆಕ್ ಮಹೀಂದ್ರಾ, ಹಿಂದುಸ್ಥಾನ ಯುನಿಲಿವರ್, ಎಕ್ಸಸ್ ಬ್ಯಾಂಕ್, ರಿಲಯನ್ಸ್, ಐಟಿಸಿ ಹಾಗೂ ಎನ್ಟಿಪಿಸಿ ಷೇರು ಮೌಲ್ಯದಲ್ಲಿ ಇಳಿಕೆ ಕಂಡಿತು.
ವ್ಯಾಪಾರಿಗಳ ಪ್ರಕಾರ, ಅಮೆರಿಕದ ಫೆಡರಲ್ ರಿಸರ್ವ್ ಯಾವುದೇ ಹೆಚ್ಚುವರಿ ಪ್ರಚೋದಕ ಯೋಜನೆಗಳನ್ನು ಘೋಷಿಸಲ್ಲ. ಕನಿಷ್ಠ 2023ರ ವೇಳೆಗೆ ಶೂನ್ಯಕ್ಕೆ ಹತ್ತಿರದಲ್ಲಿ ಪ್ರಮುಖ ಬಡ್ಡಿದರ ಇರಲಿದೆ ಎಂಬ ಸುಳಿವು ನೀಡಿದ ಬಳಿಕ ದೇಶೀಯ ಷೇರುಗಳು ಜಾಗತಿಕ ಮಾರುಕಟ್ಟೆಗಳ ಪ್ರಭಾವಕ್ಕೆ ಒಳಗಾಗಿ ದುರ್ಬಲ ಪ್ರವೃತ್ತಿ ಕಂಡವು.
ಶಾಂಘೈ, ಹಾಂಗ್ ಕಾಂಗ್, ಸಿಯೋಲ್ ಮತ್ತು ಟೋಕಿಯೊ ಪೇಟೆಗಳು ಸಹ ನಕಾರಾತ್ಮಕವಾಗಿ ಕೊನೆಗೊಂಡವು. ಯುರೋಪಿನಲ್ಲಿನ ಸ್ಟಾಕ್ ಮಾರ್ಕೆಟ್ ಸಹ ಕುಸಿತದೊಂದಿಗೆ ವಹಿವಾಟು ಆರಂಭಿಸಸಿದೆ.