ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರವೃತ್ತಿಯ ಮಧ್ಯೆ ಸೂಚ್ಯಂಕ ಮೇಜರ್ಗಳಾದ ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಏಷ್ಯಾನ್ ಪೇಯಿಂಟ್ಸ್ ಗಳಿಕೆಯ ಲಾಭದಿಂದಾಗಿ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 200 ಅಂಕ ಏರಿಕೆಯಾಗಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕವು ಬೆಳಗ್ಗೆ 11.53ರ ವೇಳೆಗೆ 176.89 ಅಂಕ ಹೆಚ್ಚಳವಾಗಿ 50,571.89 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 61.40 ಅಂಕ ಏರಿಕೆಯಾಗಿ 14,990.90 ಅಂಕಗಳ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಏಷ್ಯನ್ ಪೇಯಿಂಟ್ಸ್ ಶೇ.2ರಷ್ಟು ಏರಿಕೆ ಕಂಡಿದೆ. ಟೈಟಾನ್, ಅಲ್ಟ್ರಾಟೆಕ್ ಸಿಮೆಂಟ್, ಭಾರ್ತಿ ಏರ್‌ಟೆಲ್, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಂ&ಎಂ ದಿನದ ಟಾಪ್ ಗೇನರ್ಗಳಾದವು. ಮತ್ತೊಂದೆಡೆ ಬಜಾಜ್ ಆಟೋ, ಎನ್‌ಟಿಪಿಸಿ ಮತ್ತು ಎಸ್‌ಬಿಐ ಟಾಪ್ ಲೂಸರ್ಗಳಾದವು.
ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 397 ಅಂಕ ಕಡಿಮೆಯಾಗಿದ್ದರೆ ನಿಫ್ಟಿ 101.45 ಕುಸಿದಿತ್ತು. ಸತತ ಎರಡು ವಹಿವಾಟಿನ ಕುಸಿತದ ಬಳಿಕ ಷೇರುಪೇಟೆ ಮತ್ತೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದು, 1,101.35 ಕೋಟಿ ರೂ. ಮೌಲ್ಯದ ಷೇರು ಮಾರಾಟ ಮಾಡಿದ್ದರು.
ಇದನ್ನೂ ಓದಿ: ಔದ್ಯೋಗಿಕ ಸಂಸ್ಥೆಗಳಿಗೆ ಬ್ಯಾಂಕ್ ಮಾರುವುದು ದೊಡ್ಡ ತಪ್ಪು, ರಾಜಕೀಯ ಅಸಮರ್ಥತೆ: ರಘುರಾಮ್ ರಾಜನ್ ಕಿಡಿ
ನಾವು ಈಗ ಹೆಚ್ಚು ಚಂಚಲತೆಯ ಹಂತದಲ್ಲಿದ್ದೇವೆ. ಪ್ರಚೋದಕಗಳಿಗೆ ಪ್ರತಿಕ್ರಿಯಿಸುವ ಮೂಲಕ ಮಾರುಕಟ್ಟೆಯು ನಿತ್ಯ ಬದಲಾಗುತ್ತದೆ. ಈಗ ಮುಖ್ಯವಾದ ಪ್ರಚೋದಕವೆಂದರೆ ಯುಎಸ್ ಬಾಂಡ್ ಇಳುವರಿ, ಇದು ದೊಡ್ಡ ಮೊತ್ತದ ಹಣ ಸಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ ವಿ.ಕೆ.ಜಯಕುಮಾರ್ ಹೇಳಿದ್ದಾರೆ.
ಏರುತ್ತಿರುವ ಬಾಂಡ್ ಇಳುವರಿ ಈಕ್ವಿಟಿ ಮಾರುಕಟ್ಟೆಗಳಲ್ಲಿ ಮಾರಾಟವನ್ನು ಪ್ರಚೋದಿಸುತ್ತದೆ. ಇಳುವರಿ ಪುನಾರಂಭದ ಖರೀದಿ ತಣ್ಣಗಾದಾಗ ಪೇಟೆಯು ಕರಡಿ ಸುತ್ತಿ ತಿರುಗುತ್ತದೆ. ಸತತ 2 ದಿನಗಳ ಸಾಂಸ್ಥಿಕ ಮಾರಾಟವು ಭಾರತೀಯ ಮಾರುಕಟ್ಟೆಯನ್ನು ದುರ್ಬಲಗೊಳಿಸಿತು.
ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (ಎಫ್‌ಒಎಂಸಿ) ಸಭೆ ಮತ್ತು ಫೆಡ್‌ನ ನಿಲುವು ದೃಢೀಕರಿಸಿದ ನಂತರ, ಮಾರುಕಟ್ಟೆ ತನ್ನ ಮೇಲ್ಮುಖ ನಡೆಯ ಕ್ರಮವನ್ನು ಪುನಾರಂಭಿಸಬಹುದು. ಪ್ರಸ್ತುತ ಉತ್ತಮ ಗುಣಮಟ್ಟದ ಹಣಕಾಸು ಖರೀದಿಯ ಅವಕಾಶ ಒದಗಿಸಲಿದೆ ಎಂದು ಅಭಿಪ್ರಾಯಪಟ್ಟರು. ಏಷ್ಯಾದ ಶಾಂಘೈ, ಹಾಂಗ್‌ಕಾಂಗ್, ಟೋಕಿಯೊ ಮತ್ತು ಸಿಯೋಲ್ ಪೇಟೆಗಳು ಮಧ್ಯಂತರ ಅವಧಿಯಲ್ಲಿ ಸಕರಾತ್ಮ ವಹಿವಾಟು ನಡೆಸುತ್ತಿವೆ.