ಮುಂಬೈ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2022-23ನೇ ಸಾಲಿನ ಆಯವ್ಯಯ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರೆದಿದೆ.
ದಿನದ ಆರಂಭದಲ್ಲೇ ಸೆನ್ಸೆಕ್ಸ್ 855 ಅಂಕಗಳ ಏರಿಕೆಯೊಂದಿಗೆ 58,71 ವಹಿವಾಟು ನಡೆಸಿದರೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 240 ಅಂಕಗಳ ಜಿಗಿತದೊಂದಿಗೆ 17,579ರಲ್ಲಿ ವ್ಯಾಪಾರ ನಡೆಸುತ್ತಿದೆ.
ಸೂಚ್ಯಂಕ ಏರಿಕೆ ಹಿನ್ನೆಲೆಯಲ್ಲಿ ಪ್ರಮುಖ ಕಂಪನಿಗಳಾದ ಟೈಟಾನ್, ರಿಲಯನ್ಸ್, ಟಿಸಿಎಂ, ಎಸ್‌ಬಿಐ ಸೇರಿದಂತೆ ಹಲವು ಕಂಪನಿಗಳ ಲಾಭದಲ್ಲಿವೆ. ಮತ್ತೊಂದೆಡೆ ಎಂಆರ್‌ಎಫ್, ಭಾರ್ತಿ ಏರ್ಟೆಲ್, ಐಟಿಸಿ, ವಿಫ್ರೋ ನಷ್ಟದಲ್ಲಿ ಸಾಗಿವೆ. ಇಂದಿನ ಬಜೆಟ್ ಮೇಲೆ ಭಾರಿ ನಿರೀಕ್ಷೆಗಳ ಹಿನ್ನೆಲೆಯಲ್ಲಿ ನಿನ್ನೆಯಿಂದ ಷೇರುಪೇಟೆ ಸಕರಾತ್ಮಕವಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ