ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ತಂಡದೊಂದಿಗೆ ಶ್ವೇತಭವನದಲ್ಲಿ ಮಾತನಾಡುವುದಾಗಿ ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆ ಅಮೆರಿಕ ಮತ್ತು ಏಷ್ಯಾ ಷೇರುಪೇಟೆಗಳಲ್ಲಿ ಹೂಡಿಕೆ ಚಟುವಟಿಕೆಗಳು ಗರಿಗೆದರಿವೆ.
ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಭರ್ಜರಿ ದ್ವಿಶತಕದೊಂದಿಗೆ ಆರಂಭ ಪಡೆದ ಮುಂಬೈ ಷೇರುಪೇಟೆ, ಬೆಳಗ್ಗೆ 10:15ರ ವೇಳೆಗೆ ಸೆನ್ಸೆಕ್ಸ್ 400 ಅಂಶಗಳ ಏರಿಕೆಯೊಂದಿಗೆ 38,280.47ರ ಮಟ್ಟದಲ್ಲಿಯೂ ನಿಫ್ಟಿ 105.85 ಅಂಶಗಳ ಜಿಗಿತದೊಂದಿಗೆ 11,340.40ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
ಇದರ ನಡುವೆ, ಮೂಡಿಸ್ ಇನ್ವೆಸ್ಟರ್ಸ್ ಸೇವೆಯು 2019-20ರ ವಿತ್ತೀಯ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಕಡಿತಗೊಳಿಸಿದೆ. ನಿಧಾನಗತಿಯ ಕಾರಣದಿಂದಾಗಿ ಗ್ರಾಮೀಣ ಭಾಗದ ಕುಟುಂಬಗಳಲ್ಲಿ ಹಣಕಾಸಿನ ಒತ್ತಡ ಮತ್ತು ಉದ್ಯೋಗ ಸೃಷ್ಟಿ ಇಳಿಕೆಯಾಗಿದೆ. ಇದರ ಮಧ್ಯೆಯೂ ಷೇರುಪೇಟೆಯಲ್ಲಿ ಹೂಡಿಕೆ ಚಟುವಟಿಕೆಗಳು ಸಕಾರಾತ್ಮಕ ಹಾದಿಯಲ್ಲಿವೆ.