ಮುಂಬೈ: ಭಾರತೀಯ ಬೆಂಚ್‌ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಶುಕ್ರವಾರ ನಡೆದ ವಹಿವಾಟಿನಂದು ಏರಿಕೆ ದಾಖಲಿಸಿದ್ದು, ಸತತ 6 ಅವಧಿಯಲ್ಲೂ ಗಳಿಕೆ ಕಂಡಿದೆ.
ಶುಕ್ರವಾರದ ವಹಿವಾಟಿನಂದು ಬ್ಯಾಂಕ್ ಮತ್ತು ಹಣಕಾಸು ವಲಯದ ಷೇರುಗಳು ದಿನದ ಲಾಭ ಬಾಚಿಕೊಂಡವು. ತತ್ಪರಿಣಾಮ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 353.84 ಅಂಕ ಏರಿಕೆ ಕಂಡು 39,467.31 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 96 ಅಂಕ ಮುನ್ನಡೆ ಸಾಧಿಸಿ 11,655.25 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಇಂಡಸ್ಇಂಡ್ ಬ್ಯಾಂಕ್ ಶೇ 10ರಷ್ಟು ಷೇರು ಮೌಲ್ಯ ಹೆಚ್ಚಳವಾಯಿತು. ಎಕ್ಸಿಸ್ ಬ್ಯಾಂಕ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಪವರ್ ಗ್ರಿಡ್, ಇನ್ಫೋಸಿಸ್, ಎಚ್‌ಯುಎಲ್, ಸನ್ ಫಾರ್ಮಾ, ಕೋಟಾಕ್ ಬ್ಯಾಂಕ್, ಭಾರ್ತಿ ಏರ್ಟೆಲ್ ಹಾಗೂ ಬಜಾಜ್ ಫೈನಾನ್ಸ್ ಟಾಪ್ ಗೇನರ್ ಸಾಲಿನಲ್ಲಿದ್ದವು.
ನೆಸ್ಲೆ, ಟೈಟನ್, ಟಿಸಿಎಸ್, ಎಚ್ಸಿಎಲ್ ಟೆಕ್, ಬಜಾಜ್ ಆಟೋ, ಟಾಟಾ ಸ್ಟೀಲ್, ಎನ್ಟಿಪಿಸಿ, ಎಂ&ಎಂ, ಏಷ್ಯಾನ್ ಪೆಯಿಂಟ್ಸ್ ಹಾಗೂ ಮಾರುತಿ ಟಾಪ್ ಲೂಸರ್ ಎನಿಸಿದವು.