ಮುಂಬೈ: ಕೇಂದ್ರ ಬಜೆಟ್ ಮಂಡನೆ ಬಳಿಕ ಮುಂಬೈ ಶೇರು ಮಾರುಕಟ್ಟೆಯ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 34 ಪೈಸೆ ಕುಸಿತ ಕಂಡು 71.66ಕ್ಕೆ ತಲುಪಿದೆ.
ಹಣಕಾಸಿನ ಕುಸಿತ ಮತ್ತು ಹೆಚ್ಚುತ್ತಿರುವ ಕೊರೊನಾ ವೈರಸ್ ಆತಂಕ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾಣಲು ಕಾರಣ ಎಂದು ಹೇಳಲಾಗ್ತಿದೆ. ಅಲ್ಲದೇ ದೇಶದಲ್ಲಿ ಹಣಕಾಸಿಕ ಕೊರತೆ ಕಳೆದ ವರ್ಷ 3.3 ಜಿಡಿಪಿ ಇದ್ದರೆ ಪ್ರಸಕ್ತ ವರ್ಷ 3.8 ಜಿಡಿಪಿಗೆ ಕುಸಿತ ಕಂಡಿದೆ ಎಂಬುವುದನ್ನು ಇತ್ತೀಚೆಗೆ ಮಂಡನೆಯಾದ ಕೇಂದ್ರ ಆಯವ್ಯಯದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು 71.62 ರೂ. ಮೂಲಕ ವಹಿವಾಟು ಆರಂಭಿಸಿದ ರೂಪಾಯಿ, ಕೊನೆಗೆ 34 ಪೈಸೆಗಳ ಕುಸಿತ ಕಾಣುವ ಮೂಲಕ 71.66 ರೂ. ಬಂದು ತಲುಪಿದೆ. ಕಳೆದ ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯ 71.32 ಇತ್ತು.
ಸದ್ಯ ಕುಸಿತ ಕಂಡಿರುವ ರೂಪಾಯಿ ಮೌಲ್ಯ ವಿದೇಶಿ ಷೇರುಗಳ ದುರ್ಬಲ ಆರಂಭ ಮತ್ತು ವಿದೇಶಿ ಫಂಡ್ಗಳ ಹರಿವಿನ ಮೇಲೆ ಪರಿಣಾಮ ಬೀರಲಿದೆ ಎಂದು ವಿದೇಶಿ ಮಾರುಕಟ್ಟೆದಾರರು ತಿಳಿಸಿದ್ದಾರೆ. ಆದರೆ, ಜಾಗತಿಕ ತೈಲ ಮಾನದಂಡ ಬೆಂಚ್ ಮಾರ್ಕ್ ಪ್ರಕಾರ ಕಚ್ಚಾ ತೈಲಗಳ ಬೆಲೆ ಕೊಂಚ ಕುಸಿತ ಕಾಣುವ ಸಂಭವವಿದ್ದು, ಶೇ.0.78 ಕುಸಿತ ಕಂಡು ಬ್ಯಾರೆಲ್ಗೆ 56.18ಗೆ ತಲುಪಲಿದೆ