ನವದೆಹಲಿ: ಫೆಬ್ರವರಿ ಮಾಸಿಕದ ಚಿಲ್ಲರೆ ಹಣದುಬ್ಬರ ಶೇ 6.58ರಷ್ಟಿದ್ದು, ಕಳೆದ ತಿಂಗಳಲ್ಲಿನ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿದ್ದೇ ಇದಕ್ಕೆ ಮುಖ್ಯ ಕಾರಣ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಜನವರಿ ತಿಂಗಳಲ್ಲಿ ಶೇ 7.59ರಷ್ಟಿತ್ತು. 2019ರ ಫೆಬ್ರವರಿ ಮಾಸಿಕದಲ್ಲಿ ಇದು ಶೇ 2.57ರಷ್ಟು ದಾಖಲಾಗಿತ್ತು.
2020ರ ಫೆಬ್ರವರಿ ತಿಂಗಳ ಆಹಾರ ಪದಾರ್ಥಗಳ ಹಣದುಬ್ಬರ ಶೇ 10.81ರಷ್ಟಿದ್ದು, ಕಳೆದ ತಿಂಗಳು ಇದು ಶೇ 13.63ರಷ್ಟಿತ್ತು ಎಂದು ಸಿಪಿಐ ದತ್ತಾಂಶವನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿ ಮಾಸಿಕದಂದು ಚಿಲ್ಲರೆ ಹಣದುಬ್ಬರ ಏರಿಳಿತವನ್ನು ಪರಾಮರ್ಶಿಸುತ್ತಿದೆ.