ಮುಂಬೈ: ಅಕ್ಟೋಬರ್ ಮಾಸಿಕದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಾಟ್ ಮಾರುಕಟ್ಟೆಯಿಂದ 15.64 ಬಿಲಿಯನ್ ಡಾಲರ್ ಖರೀದಿಸಿ, ಅಮೆರಿಕ ಕರೆನ್ಸಿಯ ನಿವ್ವಳ ಖರೀದಿದಾರನಾಗಿ ಉಳಿದುಕೊಂಡಿದೆ.
ಅಕ್ಟೋಬರ್ ತಿಂಗಳಲ್ಲಿ ಆರ್‌ಬಿಐ ಯಾವುದೇ ಅಮೆರಿಕನ್ ಕರೆನ್ಸಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿಲ್ಲ ಎಂಬುದು ಆರ್‌ಬಿಐ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ ಮಾಸಿಕ ಬುಲೆಟಿನ್ನಿಂದ ತಿಳಿದುಬಂದಿದೆ.
2019ರ ಅಕ್ಟೋಬರ್ನಲ್ಲಿ ಆರ್‌ಬಿಐ ನಿವ್ವಳವಾಗಿ 7.102 ಬಿಲಿಯನ್ ಡಾಲರ್ ಖರೀದಿಸಿತ್ತು. 7.302 ಬಿಲಿಯನ್ ಡಾಲರ್ ಖರೀದಿಸಿ 200 ಮಿಲಿಯನ್ ಡಾಲರ್ ಅನ್ನು ಸ್ಪಾಟ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು.
ಇದನ್ನೂ ಓದಿ: ವರ್ಷಾಂತ್ಯದ ಲಾಸ್ಟ್ ಮಿನಿಟ್ ಆಫರ್: ಈ ಕಾರುಗಳಿಗೆ 1 ಲಕ್ಷ ರೂ. ತನಕ ಭರ್ಜರಿ ರಿಯಾಯಿತಿ!
2020ರ ಹಣಕಾಸು ವರ್ಷದಲ್ಲಿ ಸೆಂಟ್ರಲ್ ಬ್ಯಾಂಕ್ ನಿವ್ವಳ 45.097 ಬಿಲಿಯನ್ ಡಾಲರ್‌ಗಳನ್ನು ಖರೀದಿಸಿತ್ತು. ಸ್ಪಾಟ್ ಮಾರುಕಟ್ಟೆಯಿಂದ 72.205 ಬಿಲಿಯನ್ ಖರೀದಿಸಿ 27.108 ಬಿಲಿಯನ್ ಡಾಲರ್ ಮಾರಾಟ ಮಾಡಿದೆ.
ಫ್ಯೂಚರ್ ಡಾಲರ್ ಮಾರುಕಟ್ಟೆಯಲ್ಲಿ ಅಕ್ಟೋಬರ್ ಅಂತ್ಯದಲ್ಲಿ ಬಾಕಿ ಇರುವ ನಿವ್ವಳ ಖರೀದಿ 13.556 ಬಿಲಿಯನ್ ಡಾಲರ್ ಆಗಿದ್ದು, ಸೆಪ್ಟೆಂಬರ್‌ನಲ್ಲಿ 13.8811 ಬಿಲಿಯನ್ ಡಾಲರ್ ನಿವ್ವಳ ಖರೀದಿ ಆಗಿತ್ತು ಎಂಬುದು ತಿಳಿದು ಬಂದಿದೆ.