ETV Bharat / business

ಸತತ 18ನೇ ದಿನವೂ ಪೆಟ್ರೋಲ್, ಡೀಸೆಲ್​ ಬೆಲೆ ಸ್ಥಿರ.. ಇವತ್ತಿನ ದರ ಇಷ್ಟಿದೆ.. - ಡೀಸೆಲ್ ದರಗಳು

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2021ರಲ್ಲಿ 26ಪಟ್ಟು ಹೆಚ್ಚಾಗಿದೆ. ಎರಡೂ ಆಟೋ ಇಂಧನಗಳು ಈ ವರ್ಷ ಈವರೆಗೆ ಕ್ರಮವಾಗಿ 7.46 ಮತ್ತು 7.60 ರೂ.ಯಷ್ಟು ಏರಿಕೆಯಾಗಿವೆ..

petrol
petrol
author img

By

Published : Mar 17, 2021, 3:25 PM IST

ನವದೆಹಲಿ : ಜಾಗತಿಕ ತೈಲ ಮಾರುಕಟ್ಟೆ ಬೆಲೆಗಳಲ್ಲಿ ನಿಯಮಿತವಾಗಿ ವ್ಯತ್ಯಾಸವಾಗುತ್ತಿದ್ದರೂ ದೇಶದಲ್ಲಿ ಇಂಧನ ಬೆಲೆಗಳು 17 ದಿನಗಳಿಂದ ಸ್ಥಿರವಾಗಿವೆ.

ಬುಧವಾರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 91.17 ರೂ. ಮತ್ತು ಡೀಸೆಲ್ 81.47 ರೂ.ಯಲ್ಲಿ ಮಾರಾಟ ಆಗುತ್ತಿವೆ. ಕಳೆದ 17 ದಿನಗಳಿಂದ ದರದಲ್ಲಿ ಯಾವುದೇ ಪರಿಷ್ಕರಣೆ ಆಗದೆ ಯಥಾವತ್ತಾಗಿವೆ.

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗದೆ ಉಳಿದಿದೆ. ಆದರೆ, ಈ ಸ್ಥಗಿತವು ದೇಶದ ಹಲವು ಭಾಗಗಳಲ್ಲಿ ಪ್ರತಿ ಲೀಟರ್‌ಗೆ 100 ರೂ. (ಪೆಟ್ರೋಲ್) ಗಡಿ ದಾಟಿದ ಬೆಲೆ ತಗ್ಗಿಸಲು ನೆರವಾಗಿಲ್ಲ.

ಇದನ್ನೂ ಓದಿ: ಬನಾರಸ್ ಹಿಂದೂ ವಿವಿಗೆ ನೀತಾ ಅಂಬಾನಿ ಸಂದರ್ಶನ ಪ್ರಾಧ್ಯಾಪಕಿಯೇ?.. ರಿಲಯನ್ಸ್ ಸ್ಪಷ್ಟನೆ ಹೀಗಿದೆ..

ಫೆಬ್ರವರಿ 6ರಿಂದಲೂ ಕಚ್ಚಾ ಬ್ಯಾರೆಲ್‌ಗೆ 7 ಡಾಲರ್​​ಗಿಂತ ಹೆಚ್ಚಾಗಿತ್ತು. ಅದು 14 ಬಾರಿ ಇಂಧನ ಬೆಲೆ ಹೆಚ್ಚಿಸಲು ಒಎಂಸಿಗಳನ್ನು ತಳ್ಳಿತ್ತು. ಆಗಿನಿಂದ ದೆಹಲಿಯಲ್ಲಿ ಪೆಟ್ರೋಲ್‌ ಮೇಲೆ ಪ್ರತಿ ಲೀಟರ್‌ಗೆ 4.22 ರೂ. ಮತ್ತು ಡೀಸೆಲ್‌ಗೆ 4.34 ರೂ.ಯಷ್ಟು ಹೆಚ್ಚಳವಾಗಿದೆ. ಈಗ ಕಚ್ಚಾ ತೈಲ ಬ್ಯಾರೆಲ್‌ಗೆ 69 ಡಾಲರ್​​ನಷ್ಟಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2021ರಲ್ಲಿ 26ಪಟ್ಟು ಹೆಚ್ಚಾಗಿದೆ. ಎರಡೂ ಆಟೋ ಇಂಧನಗಳು ಈ ವರ್ಷ ಈವರೆಗೆ ಕ್ರಮವಾಗಿ 7.46 ಮತ್ತು 7.60 ರೂ.ಯಷ್ಟು ಏರಿಕೆಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.