ನವದೆಹಲಿ : ದೇಶದಲ್ಲಿ ಕಳೆದ ಎರಡು ವಾರಗಳಿಂದ ಆಗ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಗೆ 'ಹಿಂದಿನ ಸರ್ಕಾರದ ನೀತಿಗಳು ಕಾರಣ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಬಳಿಕ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಗೂಬೆ ಕೂರಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳದಿಂದಾಗಿ ಗ್ರಾಹಕರ ಬೆಲೆಯ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಏನೇ ಆದರೂ ಬೆಲೆಗಳು ಕ್ರಮೇಣ ಕಡಿಮೆಯಾಗುತ್ತವೆ. ಕೋವಿಡ್-19 ಕಾರಣದಿಂದಾಗಿ ಜಾಗತಿಕ ತೈಲ ಪೂರೈಕೆ ಕಡಿಮೆಯಾಗಿದೆ.
ಇದು ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಜಿಎಸ್ಟಿ ಕೌನ್ಸಿಲ್ಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತನ್ನ ವ್ಯಾಪ್ತಿಯಲ್ಲಿ ಸೇರಿಸಿಕೊಳ್ಳುವಂತೆ ವಿನಂತಿಸಲಾಗುತ್ತಿದೆ. ಯಾಕೆಂದರೆ, ಇದು ಜನರಿಗೆ ಅನುಕೂಲವಾಗುತ್ತದೆ ಎಂದರು.
ಇದನ್ನೂ ಓದಿ: ದೇಶಾದ್ಯಂತ ಪೆಟ್ರೋಲ್ - ಡೀಸೆಲ್ ದರ ಸ್ಫೋಟ: ಯಾವ ನಗರದಲ್ಲಿ ಬೆಲೆ ಎಷ್ಟಿದೆ?
ಫೆಬ್ರವರಿ 9ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಏರುತ್ತಿವೆ. ಲೀಟರ್ ಪೆಟ್ರೋಲ್ ಮೇಲೆ 3.63 ರೂ. ಏರಿಕೆಯಾಗಿದ್ರೇ, ಡೀಸೆಲ್ ದರದಲ್ಲಿ 3.84 ರೂ.ಯಷ್ಟು ಹೆಚ್ಚಳವಾಗಿದೆ.
ದೇಶದ ಹಲವು ನಗರಗಳಲ್ಲಿ ಲೀಟರ್ ಪೆಟ್ರೋಲ್ ಸಾರ್ವಕಾಲಿಕ 100 ರೂ. ಗಡಿ ದಾಟಿದೆ. ಪೆಟ್ರೋಲ್‌ನ ಬೆಲೆ ಇಂದು ಲೀಟರ್‌ಗೆ 90.93 ರೂ. ಮತ್ತು ಡೀಸೆಲ್ 81.32 ರೂ.ಯಲ್ಲಿ ಖರೀದಿಯಾಗುತ್ತಿದೆ.