ನವದೆಹಲಿ : ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಂಗಳವಾರ ವಿಮಾನ ಇಂಧನ (ಎಟಿಎಫ್) ದರದಲ್ಲಿ ಇಳಿಕೆ ಮಾಡಿವೆ. ಒಎಂಸಿ ಮಂಗಳವಾರ ಪೆಟ್ರೋಲ್‌ನ ಪಂಪ್ ಬೆಲೆಯನ್ನು ಪ್ರತಿ ಲೀಟರ್ ಮೇಲೆ 5 ಪೈಸೆ ಹೆಚ್ಚಿಸಿವೆ. ಒಂದು ದಿನದ ವಿರಾಮದ ನಂತರ ಮತ್ತೆ ಇಂಧನ ಬೆಲೆ ಏರಿಕೆಯಾಗಿದೆ.
ವಿಮಾನ ಟರ್ಬೈನ್ ಇಂಧನದ (ಎಟಿಎಫ್) ಬೆಲೆಯನ್ನು ಪ್ರತಿ ಕಿಲೋ ಲೀಟರ್ ಮೇಲೆ (ಕೆಎಲ್) 1,500 ರೂ. ತಗ್ಗಿಸಿವೆ. ಸಬ್ಸಿಡಿ ರಹಿತ ಅಡುಗೆ ಅನಿಲ ಮತ್ತು ಆಟೋ ಅನಿಲದ ಬೆಲೆಯನ್ನು ಕಳೆದ ತಿಂಗಳಿನಿಂದ ಬದಲಾಗದೆ ಯಥಾವತ್ತಾಗಿ ಉಳಿಸಿಕೊಂಡಿವೆ.
ಪೆಟ್ರೋಲ್ ಬೆಲೆಯಲ್ಲಿ ಅಲ್ಪ ಏರಿಕೆಯೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಲೀಟರ್ ಇಂಧನ 82.08 ರೂ.ಯಲ್ಲಿ ಮಾರಾಟ ಆಗುತ್ತಿದೆ. ಜುಲೈ 30ರಿಂದ ಡೀಸೆಲ್ ಬೆಲೆ ಬದಲಾಗದೆ ಉಳಿದಿದೆ. ಎಟಿಎಫ್ ದರ ಸಂಬಂಧಿತ ಆಗಸ್ಟ್ 1ರಿಂದ ಸೆಪ್ಟೆಂಬರ್ 1ರವರೆಗೆ ದೆಹಲಿಯಲ್ಲಿ ಇದರ ಬೆಲೆ ಪ್ರತಿ ಕಿಲೋಗೆ 43,933.53 ರಿಂದ 42,447.91 ರೂ.ಗೆ ಇಳಿದಿದೆ.
ಕೋವಿಡ್-19ನ ಲಾಕ್ಡೌನ್ ಕಾರಣದಿಂದ ವಾಯುಯಾನ ಕ್ಷೇತ್ರವು ಸೀಮಿತ ಸಾಮರ್ಥ್ಯದೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ದರ ಇಳಿಕೆಯು ವಿಮಾನಯಾನ ಸಂಸ್ಥೆಗಳಿಗೆ ನೆರವಾಗಲಿದ್ದು, ಕೆಲವು ನಷ್ಟಗಳನ್ನು ಭರ್ತಿ ಮಾಡಿಕೊಳ್ಳಬಹುದು.
14.2 ಕೆ.ಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 594 ರೂ.ಗೆ ಬದಲಾಗದೆ ಯಥಾವತ್ತಾಗಿದೆ. ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್‌ನ ಬೆಲೆಯೂ 594 ರೂ.ಗಳಾಗಿದೆ.