ನವದೆಹಲಿ: ಸತತ ಮೂರನೇ ದಿನವು ತೈಲ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಪ್ರಮುಖ ಮೆಟ್ರೋ ನಗರಗಳಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ ಲೀಟರ್ ಪೆಟ್ರೋಲ್ ಮೇಲೆ 44 ಪೈಸೆ ಹಾಗೂ ಡೀಸೆಲ್ ಮೇಲೆ 45 ಪೈಸೆಯಷ್ಟು ಇಳಿಕೆಯಾಗಿದೆ.
ತೈಲ ಮಾರಾಟ ಕಂಪನಿಗಳು ಶನಿವಾರದಂದು ಪೆಟ್ರೋಲ್ನಲ್ಲಿ 15 ಪೈಸೆ ಹಾಗೂ ಡೀಸೆಲ್ ಮೇಲೆ 16 ಪೈಸೆಯಷ್ಟು ಕಡಿತ ಮಾಡಿವೆ. ತತ್ಪರಿಣಾಮ ಎಲ್ಲ ಪ್ರಮುಖ ನಗರಗಳಲ್ಲಿ ತೈಲ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.
ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್ ಹಾಗೂ ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ₹ 75.26 & ₹ 68.61, ₹ 80.85 & ₹ 71.94, & ₹ 78.19 & ₹ 72.50, ₹ 77.85 & ₹ 70.97, ₹ 80.03 & ₹ 74.81 ಹಾಗೂ ₹ 77.78 & ₹ 70.90 ದರದಲ್ಲಿ ಮಾರಾಟ ಆಗುತ್ತಿದೆ.