ಮುಂಬೈ : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಶುರುವಾದ ಕೊಲ್ಲಿ ಯುದ್ಧದ 1991ರ ಜನವರಿ 17ರ ಬಳಿಕ ಕಚ್ಚಾ ತೈಲ ದರದಲ್ಲಿ ಭಾರೀ ಪ್ರಮಾಣ ಕುಸಿತವು ಸೋಮವಾರದಂದು ಕಂಡು ಬಂದಿದೆ.
ತೈಲ ಬೆಲೆಯಲ್ಲಿ ಸೋಮವಾರ ಶೇ. 25ರಷ್ಟು ಕುಸಿದಿದೆ. ಸೌದಿ ಅರೇಬಿಯಾದ ಬೆಲೆ ಕಡಿತ ಮತ್ತು ಏಪ್ರಿಲ್ ತಿಂಗಳಲ್ಲಿ ಕಚ್ಚಾ ಉತ್ಪಾದನೆಯಲ್ಲಿ ದೊಡ್ಡ ಪ್ರಮಾಣದ ಹೆಚ್ಚಳದ ಯೋಜನೆಗಳನ್ನು ರೂಪಿಸಿದ ನಂತರ 1991ರಿಂದೀಚೆಗೆ ಅತ್ಯಧಿಕ ದೈನಂದಿನ ನಷ್ಟ ಉಂಟಾಗಿದೆ.
ಕೊರೊನಾ ವೈರಸ್ ಜಾಗತಿಕ ಹರಡುವಿಕೆಯ ಬಗ್ಗೆ ಆತಂಕಕ್ಕೊಳಗಾದ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಒಪೆಕ್ ರಾಷ್ಟ್ರಗಳು ಉತ್ಪಾದನೆಯನ್ನು ತಗ್ಗಿಸುವ ಪ್ರಸ್ತಾಪ ಇರಿಸಿದವು. ತೈಲ ಉತ್ಪಾದನೆ ಕಡಿತಕ್ಕೆ ರಷ್ಯಾ ಒಪ್ಪದ ಕಾರಣ ಸೌದಿ ಹಾಗೂ ಕಮ್ಯುನಿಷ್ಟ ರಾಷ್ಟ್ರ ಮಧ್ಯೆ ತೈಲ ಯುದ್ಧ ಶುರುವಾಗಿದೆ. ಇದರಿಂದ ಶೇ. 31ರಷ್ಟು ಕುಸಿತ ಕಂಡು ಬಂದಿದೆ.
ಬ್ರೆಂಟ್ ಫ್ಯೂಚರ್ ಕಚ್ಚಾ ತೈಲದ ಪ್ರತಿ ಬ್ಯಾರೆಲ್ ಮೇಲೆ 11.31 ಡಾಲರ್ ಅಥವಾ ಶೇ. 25ರಷ್ಟು ಇಳಿಕೆಯಾಗಿದೆ. 2016ರ ಫೆಬ್ರವರಿ 12ರ ಬಳಿಕೆ ಇದೇ ಪ್ರಥಮ ಬಾರಿಗೆ ಬ್ಯಾರೆಲ್ ಕಚ್ಚಾ ತೈಲ 31.02 ಡಾಲರ್ಗೆ ತಲುಪಿದೆ. ಬ್ರೆಂಟ್ ಫ್ಯೂಚರ್ ತೈಲ 1991ರ ಜನವರಿ 17ರಿಂದ ಮೊದಲ ಬಾರಿಗೆ ಕೊಲ್ಲಿ ಯುದ್ಧ ಆರಂಭವಾದ ಬಳಿಕ ದೊಡ್ಡ ಪ್ರಮಾಣ ಕುಸಿತವಾಗಿತ್ತು.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯುಟಿಐ) ಬ್ಯಾರೆಲ್ ಕಚ್ಚಾ ತೈಲವು 11.73 ಡಾಲರ್ ಅಥವಾ ಶೇ. 26ರಷ್ಟು ಇಳಿಕೆಯಾಗಿ 30.55 ಡಾಲರ್ಗೆ ತಲುಪಿದೆ. ಇದು 2016ರ ಫೆಬ್ರವರಿ 22ರ ನಂತರದ ಕನಿಷ್ಠ ಮಟ್ಟವಾಗಿದೆ. ಅಮೆರಿಕ ಮಾನದಂಡದ ಅನ್ವಯ ಜನವರಿ 1991ರಿಂದ ಅತಿದೊಡ್ಡ ಕುಸಿತವಾಗಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಪೈಸೆ ಲೆಕ್ಕದಲ್ಲಿ ಇಳಿಕೆ : ಭಾರತದ ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಮೇಲೆ ಕ್ರಮವಾಗಿ 24 ಹಾಗೂ 25 ಪೈಸೆಯಷ್ಟು ಕುಸಿತವಾಗಿದೆ. ಈ ಕ್ಯಾಲೆಂಡರ್ ವರ್ಷದಿಂದ ಈವರೆಗೂ ಅನುಕ್ರಮವಾಗಿ ₹ 4.55 ಹಾಗೂ ₹ 4.7 ಇಳಿಕೆ ಆದಂತಾಗಿದೆ.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್ನಲ್ಲಿ ಲೀ. ಪೆಟ್ರೋಲ್ ಹಾಗೂ ಡೀಸೆಲ್ ₹ 70.59 & ₹ 63.26, ₹ 76.29 & ₹ 66.24, ₹ 73.33 & ₹ 66.75, ₹ 73.0 & ₹ 65.42 ಹಾಗೂ ₹ 75.0 & ₹ 68.88 ಮಾರಾಟ ಆಗುತ್ತಿದೆ.