ETV Bharat / business

31 ದಿನದಲ್ಲಿ 163 ರೂ. ಇಳಿದ ಸಿಲಿಂಡರ್ ದರ​​​... ರಾಜ್ಯದಲ್ಲಿ ಎಲ್​ಪಿಜಿ ಬೆಲೆ ಎಷ್ಟು? - Cooking gas news

ಬೆಂಗಳೂರಿನಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ₹ 634ಕ್ಕೆ ಲಭ್ಯವಾಗುತ್ತಿದ್ದು, ಪ್ರತಿ ಸಿಲಿಂಡರ್ ಮೇಲೆ ₹ 105 ಕಡಿತವಾಗಿದೆ. ರಾಜ್ಯದ ಆಯಾ ಜಿಲ್ಲೆಗಳ ವಿತರಣೆಗೆ ಅನುಗುಣವಾಗಿ ದರದಲ್ಲಿ ಅಲ್ಪ ವ್ಯತ್ಯಾಸ ಇರಲಿದೆ.

ಸಾಂದರ್ಭಿಕ ಚಿತ್ರ
author img

By

Published : Aug 1, 2019, 8:52 PM IST

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸಬ್ಸಿಡಿ ರಹಿತ ಅಡಿಗೆ ಅನಿಲ ದರ ಪ್ರತಿ ಸಿಲಿಂಡರ್​ಗೆ ₹ 62.50 ಇಳಿಕೆಯಾಗಿದೆ ಎಂದು ಭಾರತೀಯ ತೈಲ ಕಾರ್ಪೊರೇಷನ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ₹ 62.50, ಮುಂಬೈ ಹಾಗೂ ಚೆನ್ನೈನಲ್ಲಿ ₹ 62 ಇಳಿಕೆಯಾಗಿದೆ. ಸಬ್ಸಿಡಿಯೇತರ ಸಿಲಿಂಡರ್ ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ ₹ 574.50, ₹ 601, ₹ 546 ಹಾಗೂ ₹ 590.50 ದರದಲ್ಲಿ ಮಾರಾಟ ಆಗುತ್ತಿವೆ.

cooking gas price
ಪರಿಷ್ಕೃತ ಸಿಲಿಂಡರ್ ದರ

ಬೆಂಗಳೂರಿನಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ₹ 634ಕ್ಕೆ ಲಭ್ಯವಾಗುತ್ತಿದ್ದು, ಪ್ರತಿ ಸಿಲಿಂಡರ್ ಮೇಲೆ ₹ 105 ಕಡಿತವಾಗಿದೆ. ರಾಜ್ಯದ ಆಯಾ ಜಿಲ್ಲೆಗಳ ವಿತರಣೆಗೆ ಅನುಗುಣವಾಗಿ ದರದಲ್ಲಿ ಅಲ್ಪ ವ್ಯತ್ಯಾಸ ಇರಲಿದೆ.

ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರ ಜೂನ್​​ 1 ರಂದು 100.50 ರೂ.ನಷ್ಟು ಕಡಿತಗೊಂಡಿತ್ತು. 31 ದಿನಗಳ ಅಂತರದಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ದರದಲ್ಲಿ ₹ 163ನಷ್ಟು ಕಡಿತಗೊಂಡಂತಾಗಿದೆ.

ಗೃಹ ಬಳಕೆಗೆ ಒಂದು ಕುಟುಂಬಕ್ಕೆ ವಾರ್ಷಿಕ 12 ಸಿಲಿಂಡರ್​ಗಳನ್ನು ಸಬ್ಸಿಡಿಸಹಿತ ಸರ್ಕಾರ ವಿತರಿಸುತ್ತದೆ. ಸಬ್ಸಿಡಿ ಮೊತ್ತವನ್ನು ನೇರವಾಗಿ ಖಾತೆದಾರರ ಬ್ಯಾಂಕ್​ ಖಾತೆಗೆ ವರ್ಗಾಯಿಸಲಾಗುತ್ತದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.