ಬರ್ಲಿನ್: ಜಗತ್ತಿನ ನಂಬರ್ ಒನ್ ಶ್ರೀಮಂತ ಉದ್ಯಮಿ, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮಂಗಳವಾರ ಬರ್ಲಿನ್‌ನಲ್ಲಿ ತಮ್ಮ ಗಿಗಾಫ್ಯಾಕ್ಟರಿ ಎಲೆಕ್ಟ್ರಿಕ್ ಕಾರು ಘಟಕ ಉದ್ಘಾಟನೆ ವೇಳೆ ಕುಣಿದು ಕುಪ್ಪಳಿಸಿದ್ದಾರೆ. ಮಸ್ಕ್ ನೃತ್ಯ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 2020ರಲ್ಲಿ ಶಾಂಘೈನಲ್ಲಿ ನಡೆದ ಉದ್ಘಾಟನಾ ಸಮಾರಂಭವೊಂದರಲ್ಲಿ ಮಲ್ಕ್ ಮಾಡಿದ್ದ ಸ್ವಲ್ಪ ವಿಚಿತ್ರ ಎನಿಸುವ ನೃತ್ಯವನ್ನು ಹೋಲುವಂತೆಯೇ ಇಲ್ಲೂ ಕೂಡ ಎಲಾನ್ ಮಸ್ಕ ಡ್ಯಾನ್ಸ್ ಮಾಡಿದ್ರು.
-
Elon Musk keeps Tesla tradition alive by dancing during Giga Berlin’s first Model Y handovershttps://t.co/B36qx4ACHy by @ResidentSponge pic.twitter.com/p9VhwKqxOD
— TESLARATI (@Teslarati) March 22, 2022 " class="align-text-top noRightClick twitterSection" data="
">Elon Musk keeps Tesla tradition alive by dancing during Giga Berlin’s first Model Y handovershttps://t.co/B36qx4ACHy by @ResidentSponge pic.twitter.com/p9VhwKqxOD
— TESLARATI (@Teslarati) March 22, 2022Elon Musk keeps Tesla tradition alive by dancing during Giga Berlin’s first Model Y handovershttps://t.co/B36qx4ACHy by @ResidentSponge pic.twitter.com/p9VhwKqxOD
— TESLARATI (@Teslarati) March 22, 2022
ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂಬ ಸ್ಥಳೀಯರ ಆರೋಪದ ಹಿನ್ನೆಲೆಯಲ್ಲಿ ಈ ಘಟಕವನ್ನು ಮುಚ್ಚಲಾಗಿತ್ತು. ಆಡಳಿತ್ಮಾಕ ಮತ್ತು ಕಾನೂನು ಆಡಚಣೆಗಳನ್ನು ಎದುರಿಸಿ ಇದೀಗ ಮತ್ತೆ ಟೆಸ್ಲಾ ಇಲ್ಲಿ ಕಾರು ಉತ್ಪಾದನೆ ಘಟಕ ಪ್ರಾರಂಭಿಸಲು ಪ್ರಾದೇಶಿಕ ಅಧಿಕಾರಿಗಳಿಂದ ಔಪಚಾರಿಕವಾಗಿ ಅನುಮತಿ ಪಡೆದಿದೆ.
ಜರ್ಮನಿಯ ಪೂರ್ವ ರಾಜ್ಯವಾದ ಬ್ರಾಂಡೆನ್‌ಬರ್ಗ್‌ನಲ್ಲಿರುವ ಗ್ರುನ್‌ಹೈಡ್‌ನಲ್ಲಿರುವ ಗಿಗಾಫ್ಯಾಕ್ಟರಿ ಯುರೋಪ್‌ನಲ್ಲಿ ಟೆಸ್ಲಾ ಅವರ ಮೊದಲ ಉತ್ಪಾದನಾ ತಾಣವಾಗಿದೆ. ಸ್ಥಳೀಯ ಅಧಿಕಾರಿಗಳು ಈ ಪ್ರದೇಶವನ್ನು ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಕೇಂದ್ರವಾಗಿ ಇರಿಸಲು ಸಹಾಯ ಮಾಡುತ್ತದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಕ್ಯಾಲಿಫೋರ್ನಿಯಾದ ಈ ಕಂಪನಿಯು ಅಂತಿಮವಾಗಿ ಘಟಕದಲ್ಲಿ ಸುಮಾರು 12,000 ಕಾರ್ಮಿಕರನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು 500,000 ವೈ ಮಾದರಿಯ ಕಾರುಗಳನ್ನು ಉತ್ಪಾದಿಸುತ್ತಾರೆ. ಎಲ್ಲ ಕಾರುಗಳು ಎಲೆಕ್ಟ್ರಿಕ್ ಹಾಗೂ ಕಾಂಪ್ಯಾಕ್ಟ್ ಎಸ್‌ಯುವಿಗಳು.
ಸೌರ, ಗಾಳಿ, ಜೊತೆಗೆ ಬ್ಯಾಟರಿ ಸಂಗ್ರಹಣೆ ಹಾಗೂ ಎಲೆಕ್ಟ್ರಿಕ್ ವಾಹನಗಳ ಸಂಯೋಜನೆಯೊಂದಿಗೆ ಜಗತ್ತು ಸುಸ್ಥಿರ ಇಂಧನ ಭವಿಷ್ಯಕ್ಕೆ ಪರಿವರ್ತನೆಗೊಳ್ಳಬಹುದು ಎಂದು ನಮಗೆ ಅತ್ಯಂತ ವಿಶ್ವಾಸವಿದೆ ಎಂದು ಕಾರು ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಸ್ಕ್ ಹೇಳಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 1 ರಿಂದ ಟಾಟಾ ಮೋಟರ್ಸ್ ವಾಹನಗಳ ಬೆಲೆಯಲ್ಲಿ ಏರಿಕೆ