ಸತ್ನಾ: ಚಂದನವನದ ಸೂಪರ್ ಹಿಟ್ 'ದಿಗ್ಗಜರು' ಸಿನಿಮಾದಲ್ಲಿ ಅಂಬರೀಶ್ ಮತ್ತು ವಿಷ್ಣುವರ್ಧನ್ ಆಟೋದಲ್ಲಿ ಮೂಟೆಗಟ್ಟಲೆ ಹಣ ತಂದು ಕಾರು ಖರೀದಿಸಿ ಏಜೆಂಟರನ್ನು ಒಂದು ಕ್ಷಣ ಆಶ್ಚರ್ಯಗೊಳಿಸುತ್ತಾರೆ. ಇದೇ ಮಾದರಿಯಲ್ಲಿ ಮಧ್ಯಪ್ರದೇಶದ ವ್ಯಕ್ತಿಯೋರ್ವ ನಾಣ್ಯಗಳನ್ನು ತಂದು ಸ್ಕೂಟಿ ಖರೀದಿಸಿದ್ದಾನೆ.
ಸತ್ನಾ ಜಿಲ್ಲೆಯ ನಿವಾಸಿ ರಾಕೇಶ್ ಕುಮಾರ್ ಗುಪ್ತಾ ಎಂಬುವರು ದೀಪಾವಳಿಗೆ ಹೋಂಡಾ ಆ್ಯಕ್ಟೀವಾ-125 ಖರೀದಿಸಲು ಮೂಟೆಯಲ್ಲಿ 83 ಸಾವಿರ ರೂ.ಯಷ್ಟು ನಾಣ್ಯಗಳನ್ನು ಹೊತ್ತೊಯ್ದಿದ್ದಾನೆ. ಇವನ ನಡೆಯನ್ನು ಕಂಡು ಹೋಂಡಾ ಮೋಟಾರ್ ಡೀಲರ್ನ ಕೆಲಸಗಾರರು ಒಂದು ಕ್ಷಣ ಆಶ್ಚರ್ಯಕ್ಕೆ ಒಳಗಾಗಿದ್ದಾರೆ.
ಗುಪ್ತಾ ತಂದ ನಾಣ್ಯಗಳಲ್ಲಿ ಬಹುತೇಕವು 5 ಮತ್ತು 10 ರೂ. ಮುಖಬೆಲೆಯದಾಗಿದ್ದವು. ಈ ಎಲ್ಲ ನಾಣ್ಯಗಳನ್ನು ಎಣಿಸಲು ಮಾರಾಟಗಾರು 3 ಗಂಟೆ ತೆಗೆದುಕೊಂಡರು. ಗುಪ್ತಾ ಅವರು ಡಿಸ್ಕ್ ಬ್ರೇಕ್ ಮತ್ತು ಅಲಾಯ್ ವೀಲ್ನ ಆ್ಯಕ್ಟೀವಾ-125 ಮಾಡಲ್ಗೆ 83,000 ರೂ.ಯನ್ನು ಸಂಪೂರ್ಣವಾಗಿ ನಾಣ್ಯಗಳನ್ನು ಪಾವತಿಸಿದ್ದಾರೆ.