ETV Bharat / business

30 ಸೆಕೆಂಡಿನಲ್ಲಿ ಕೊರೊನಾ ಕಿಲ್ಲರ್‌ ಮೈಕ್ರೊವೇವ್ ಸಿದ್ಧ​: ಈ ಯಂತ್ರದ ವಿಶೇಷತೆ ಇಲ್ಲಿದೆ.. - ಕೊರೊನಾ ವೈರಸ್

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಿತಿನ್ ಗಡ್ಕರಿ ಅವರು ನಾಗ್ಪುರದಲ್ಲಿ ಈ ಸಾಧನವನ್ನು ಅನಾವರಣಗೊಳಿಸಿದರು.

Atulya
ಮೈಕ್ರೊವೇವ್
author img

By

Published : Aug 12, 2020, 9:03 PM IST

ನವದೆಹಲಿ: ಭಾರತದ ಪ್ರಧಾನ ಸಂಶೋಧನಾ ಸಂಸ್ಥೆಯಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ವಿಶೇಷ ಮೈಕ್ರೊವೇವ್ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದು ಕೇವಲ 30 ಸೆಕೆಂಡುಗಳಲ್ಲಿ ಯಾವುದೇ ಆವರಣವನ್ನು ಸೋಂಕುರಹಿತ ಆಗಿಸುತ್ತದೆ.

‘ಅತುಲ್ಯ’ ಎಂದು ಹೆಸರಿಸಲಾಗಿರುವ ಸಾಧನ ಯಾವುದೇ ಆವರಣವನ್ನು ಡಿಫರೆನ್ಷಿಯಲ್ ತಾಪಮಾನದ ಸಹಾಯದಿಂದ ಕೊರೊನಾ ವೈರಸ್ ಬೇರ್ಪಡಿಸಲು ನೆರವಾಗಬಲ್ಲದು. ಇಡೀ ಪ್ರದೇಶವನ್ನು ನಂಬಲಾಗದಷ್ಟು ಪ್ರಮಾಣದಲ್ಲಿ ಸೋಂಕುರಹಿತ ಆಗಿಸುತ್ತದೆ ಎಂದು ಆಲ್ ಇಂಡಿಯಾ ರೆಡಿಯೋ ತನ್ನ ಸುದ್ದಿ ವರದಿಯಲ್ಲಿ ತಿಳಿಸಿದೆ.

ಮೈಕ್ರೊವೇವ್ ಸಾಧನವು ಶೇ 100ರಷ್ಟು ಸ್ಥಳೀಯವಾಗಿಯೇ ತಯಾರಿಸಲ್ಪಟ್ಟಿದೆ ಅನ್ನೋದು ವಿಶೇಷ.

ಏಕಕಾಲದಲ್ಲಿ 5 ಮೀಟರ್ ವಿಸ್ತೀರ್ಣದವರೆಗೆ ಯಾವುದೇ ಪ್ರದೇಶವನ್ನು ಸೋಂಕುರಹಿತಗೊಳಿಸುವ ಜೊತೆಗೆ ಆವರಣದ ಜೊತೆಗೆ ಪೀಠೋಪಕರಣ, ಹಾಸಿಗೆ, ಕಚೇರಿ ಮತ್ತು ಬಾಕ್ಸ್​ ಸೇರಿದಂತೆ ಇತರೆ ಒಳಭಾಗದಲ್ಲಿ ಅಡಗಿದ ವೈರಸ್ ಕಣಗಳನ್ನು ವಿಘಟನೆ ಮಾಡುವ ಸಾಮರ್ಥ್ಯ ಇದಕ್ಕಿದೆ. ಈ ಸಾಧನವನ್ನು ಪೋರ್ಟಬಲ್ ಮತ್ತು ಹಗುರವಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಶ್ರಮವಿಲ್ಲದೆ ಯಾರಾದರೂ ಇದನ್ನು ಬಳಸಬಹುದು ಎಂದು ಡಿಆರ್‌ಡಿಒ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.