ETV Bharat / business

ಮೇ ತಿಂಗಳಲ್ಲಿ ಮಾರುತಿ ಸುಜುಕಿ ವಾಹನ ಮಾರಾಟ ಶೇ 71ರಷ್ಟು ಇಳಿಕೆ! - ಭಾರತದಲ್ಲಿ ಕೋವಿಡ್ ಪ್ರಕರಣಗಳು

ಏಪ್ರಿಲ್‌ನಲ್ಲಿ 1,59,691 ಯುನಿಟ್‌ಗಳಿಗೆ ಹೋಲಿಸಿದರೆ ಮೇ ತಿಂಗಳ ಮಾರಾಟವು ಸಾಕಷ್ಟು ಕ್ಷೀಣಿಸಿದೆ. ಮುಖ್ಯವಾಗಿ ಕೋವಿಡ್​ -19 ಪ್ರಕರಣಗಳು ಮತ್ತು ಲಾಕ್‌ಡೌನ್‌ ಹೇರಿಕೆಯಿಂದಾಗಿ ರಾಜ್ಯಗಳ ನಡುವೆ ಸಾಗಣೆಗೆ ದೊಡ್ಡ ಹೊಡೆತ ಬಿದ್ದಿದೆ. ವೈದ್ಯಕೀಯ ಉದ್ದೇಶಗಳಿಗಾಗಿ ಕೈಗಾರಿಕಾ ಬಳಕೆಯಿಂದ ಆಮ್ಲಜನಕವನ್ನು ವರ್ಗಾಯಿಸಿಲು ಆಟೋ ದೈತ್ಯ, ಮೇ 1ರಿಂದ ಮೇ 16ರವರೆಗೆ ಉತ್ಪಾದನೆ ಸ್ಥಗಿತಗೊಳಿಸಿತ್ತು.

Maruti Suzuki
Maruti Suzuki
author img

By

Published : Jun 1, 2021, 3:36 PM IST

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಒಟ್ಟು ಮಾರಾಟದಲ್ಲಿ ಶೇ 71ರಷ್ಟು ಕುಸಿತ ದಾಖಲಿಸಿ 46,555 ಯೂನಿಟ್​ಗಳಿಗೆ ತಲುಪಿದೆ.

ಏಪ್ರಿಲ್‌ನಲ್ಲಿ 1,59,691 ಯುನಿಟ್‌ಗಳಿಗೆ ಹೋಲಿಸಿದರೆ ಮೇ ತಿಂಗಳ ಮಾರಾಟವು ಸಾಕಷ್ಟು ಕ್ಷೀಣಿಸಿದೆ. ಮುಖ್ಯವಾಗಿ ಕೋವಿಡ್​ -19 ಪ್ರಕರಣಗಳು ಮತ್ತು ಲಾಕ್‌ಡೌನ್‌ ಹೇರಿಕೆಯಿಂದಾಗಿ ರಾಜ್ಯಗಳ ನಡುವೆ ಸಾಗಣೆಗೆ ದೊಡ್ಡ ಹೊಡೆತ ಬಿದ್ದಿದೆ.

ವೈದ್ಯಕೀಯ ಉದ್ದೇಶಗಳಿಗಾಗಿ ಕೈಗಾರಿಕಾ ಬಳಕೆಯಿಂದ ಆಮ್ಲಜನಕವನ್ನು ವರ್ಗಾಯಿಸಿಲು ಆಟೋ ದೈತ್ಯ, ಮೇ 1ರಿಂದ ಮೇ 16ರವರೆಗೆ ಉತ್ಪಾದನೆ ಸ್ಥಗಿತಗೊಳಿಸಿತ್ತು.

ಕಳೆದ ತಿಂಗಳು ವಿತರಕರಿಗೆ ದೇಶೀಯ ರವಾನೆ 35,293 ಯೂನಿಟ್​ ಆಗಿದ್ದು, ಏಪ್ರಿಲ್‌ನಲ್ಲಿ 1,42,454 ಯುನಿಟ್‌ಗಳಿಂದ ಶೇ 75ರಷ್ಟು ಕಡಿಮೆಯಾಗಿದೆ ಎಂದು ಎಂಎಸ್‌ಐ ತಿಳಿಸಿದೆ.

ಇದನ್ನೂ ಓದಿ: ಆಕ್ಸಿಜನ್ ಸಾಂದ್ರಕಗಳಿಗೆ IGST: ದೆಹಲಿ ನ್ಯಾಯಾಲಯದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

ಆಲ್ಟೊ ಮತ್ತು ಎಸ್-ಪ್ರೆಸ್ಸೊಗಳನ್ನು ಒಳಗೊಂಡಿರುವ ಮಿನಿ ಕಾರುಗಳ ಮಾರಾಟವು ಮೇ ತಿಂಗಳಲ್ಲಿ ಶೇ 81ರಷ್ಟು ಕುಸಿದು 4,760ಕ್ಕೆ ತಲುಪಿದೆ. ಈ ವರ್ಷದ ಏಪ್ರಿಲ್‌ನಲ್ಲಿ 25,041 ಯುನಿಟ್ ಮಾರಾಟವಾಗಿದೆ.

ಏಪ್ರಿಲ್‌ನಲ್ಲಿ 72,318 ಕಾರುಗಳಿಂದ ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಾಲೆನೊ ಮತ್ತು ಡಿಜೈರ್ ಸೇರಿದಂತೆ ಕಾಂಪ್ಯಾಕ್ಟ್ ವಿಭಾಗದ ವಾಹನಗಳ ಮಾರಾಟವು ಶೇ 72ರಷ್ಟು ಇಳಿದು 20,343 ಯುನಿಟ್‌ಗಳಿಗೆ ತಲುಪಿದೆ.

ಮೀಡಿಯಂ ಗಾತ್ರದ ಸೆಡಾನ್ ಸಿಯಾಜ್ ಮಾರಾಟವು ಈ ವರ್ಷದ ಏಪ್ರಿಲ್‌ನಲ್ಲಿ 1,567 ಯುನಿಟ್‌ಗಳಿಗೆ ಹೋಲಿಸಿದರೆ 349 ಯುನಿಟ್‌ಗಳಿಗೆ ಇಳಿದಿದೆ. ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಎರ್ಟಿಗಾ ಸೇರಿದಂತೆ ಯುಟಿಲಿಟಿ ವಾಹನಗಳ ಮಾರಾಟವು ಶೇ 75ರಷ್ಟು ಕುಸಿದು 6,355 ಯೂನಿಟ್​ಗಳಿಗೆ ತಲುಪಿದ್ದು, ಏಪ್ರಿಲ್‌ನಲ್ಲಿ 25,484ರಷ್ಟಿತ್ತು ಎಂದು ಎಂಎಸ್‌ಐ ತಿಳಿಸಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ರಫ್ತು ಶೇ 35ರಷ್ಟು ಇಳಿಕೆ ಕಂಡು 11,262 ಯೂನಿಟ್​ಗಳಿಗೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.