ETV Bharat / business

ಮುಂಬೈ ಪೇಟೆಯಲ್ಲಿ ಮುಂದುವರಿದ ಗೂಳಿ ಆರ್ಭಟ: 4 ಸೆಷನ್​ನಲ್ಲಿ 1,385 ಅಂಕ ಗಳಿಸಿದ ಸೆನ್ಸೆಕ್ಸ್​! - ಕೊರೊನಾ ವೈರಸ್

ಬಿಎಸ್ಇ ಸೆನ್ಸೆಕ್ಸ್ ದಿನದ ವಹಿವಾಟನ್ನು ಧನಾತ್ಮವಾಗಿ ಆರಂಭಿಸಿ ಮಧ್ಯಂತರ ಗರಿಷ್ಠ 37,478.87 ಅಂಕಗಳಿಗೆ ತಲುಪಿತು. 37,418.99 ಅಂಶಗಳಿಗೆ ಮುಕ್ತಾಯ ಆಗುವ ಮೊದಲು, 398.85 ಅಂಕ ಅಥವಾ ಶೇ 1.08ರಷ್ಟು ಏರಿಕೆ ಕಂಡಿತು. ನಿಫ್ಟಿ ಸಹ 120.50 ಅಂಕ ಏರಿಕೆ ಕಂಡು 11,022.20 ಅಂಕಗಳಲ್ಲಿ ಕೊನೆಗೊಂಡಿತು. ಸೆನ್ಸೆಕ್ಸ್ ಈ ನಾಲ್ಕು ಸೆಷನ್‌ಗಳಲ್ಲಿ 1,385.93 ಅಂಕ ಗಳಿಸಿದರೆ, ನಿಫ್ಟಿ 414.85 ಅಂಗಳ ಮುನ್ನಡೆ ಸಾಧಿಸಿದೆ.

Sensex
ಸೆನ್ಸೆಕ್ಸ್
author img

By

Published : Jul 20, 2020, 7:51 PM IST

ಮುಂಬೈ: ದೇಶಿಯ ಹಾಗೂ ಜಾಗತಿಕ ಕೊರೊನಾ ಸೋಂಕು ಏರಿಕೆಯ ಮಧ್ಯೆಯೂ ಮುಂಬೈ ಷೇರುಪೇಟೆ ಸೋಮವಾರದ ವಹಿವಾಟಿನಂದು ಸಕಾರಾತ್ಮವಾಗಿ ಕೊನೆಗೊಂಡಿದೆ.

ಬಿಎಸ್ಇ ಸೆನ್ಸೆಕ್ಸ್ ದಿನದ ವಹಿವಾಟನ್ನು ಧನಾತ್ಮವಾಗಿ ಆರಂಭಿಸಿ ಮಧ್ಯಂತರ ಗರಿಷ್ಠ 37,478.87 ಅಂಕಗಳಿಗೆ ತಲುಪಿತು. 37,418.99 ಅಂಶಗಳಿಗೆ ಮುಕ್ತಾಯ ಆಗುವ ಮೊದಲು, 398.85 ಅಂಕ ಅಥವಾ ಶೇ.1.08ರಷ್ಟು ಏರಿಕೆ ಕಂಡಿತು.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಹ 120.50 ಅಂಕ ಅಥವಾ ಶೇ.1.11ರಷ್ಟು ಏರಿಕೆ ಕಂಡು 11,022.20 ಅಂಕಗಳಲ್ಲಿ ಕೊನೆಗೊಂಡಿತು. ಸೆನ್ಸೆಕ್ಸ್ ಈ ನಾಲ್ಕು ಸೆಷನ್‌ಗಳಲ್ಲಿ 1,385.93 ಅಂಕ ಗಳಿಸಿದರೆ, ನಿಫ್ಟಿ 414.85 ಅಂಶಗಳ ಮುನ್ನಡೆ ಸಾಧಿಸಿದೆ.

ಬಜಾಜ್ ಫೈನಾನ್ಸ್ ಷೇರು ಶೇ. 4.23 ರಷ್ಟು ಏರಿಕೆ ಕಂಡಿದ್ದು, ಬಜಾಜ್ ಫಿನ್‌ಸರ್ವ್, ಹೆಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ನಂತರದ ಸ್ಥಾನದಲ್ಲಿವೆ.

ದೇಶದ ಅತಿದೊಡ್ಡ ಖಾಸಗಿ ವಲಯದ ಸಾಲದಾತ ಹೆಚ್​ಡಿಎಫ್​​ಸಿ ಜೂನ್ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇ.20ರಷ್ಟು ಏರಿಕೆ ಕಂಡು 6,658.62 ಕೋಟಿ ರೂ.ಯಷ್ಟಾಗಿದೆ. ಸನ್ ಫಾರ್ಮಾ, ಎನ್‌ಟಿಪಿಸಿ, ಮಾರುತಿ ಸುಜುಕಿ, ಕೊಟಾಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಲ್ & ಟಿ ಶೇ 3.86ರಷ್ಟು ಷೇರು ಮೌಲ್ಯದಲ್ಲಿ ಕುಸಿತ ಕಂಡುಬಂತು.

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆ ಏರಿಕೆ ಕಂಡು ₹ 74.91ಕ್ಕೆ ತಲುಪಿದೆ. ನಿಫ್ಟಿ ತನ್ನ ವೇಗವನ್ನು ಮುಂದುವರೆಸಿದ್ದು, 11,000ಕ್ಕಿಂತಲೂ ಹೆಚ್ಚಿನ ಅಂಕ ಗಳಿಸಿದೆ. ಭಾರತ ಮತ್ತು ವಿದೇಶಗಳಲ್ಲಿ ವೈರಸ್ ಸೋಂಕು ಹೆಚ್ಚುತ್ತಿರುವ ಹೊರತಾಗಿಯೂ ಪೇಟೆಯಲ್ಲಿ ಸಕಾರಾತ್ಮಕ ಮನೋಭಾವ ಮೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.