ನವದೆಹಲಿ: ದೇಶೀಯ ಮೊಬೈಲ್ ಸಾಧನ ತಯಾರಕ ಲಾವಾ ಇಂಟರ್‌ನ್ಯಾಷನಲ್ ಗುರುವಾರ ವಿಶ್ವದ ಮೊದಲ ಕಸ್ಟಮೈಸೆಬಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಗ್ರಾಹಕರು ತಮಗೆ ಬೇಕಾದಂತಹ ಕ್ಯಾಮರಾ, ಮೆಮೊರಿ, ಸ್ಟೋರೆಜ್ ಸಾಮರ್ಥ್ಯ ಮತ್ತು ಬಣ್ಣ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುತ್ತಿದೆ.
ಕಸ್ಟಮೈಸ್ ಮಾಡಬಹುದಾದ ಸ್ಮಾರ್ಟ್‌ಫೋನ್ ಸರಣಿಯನ್ನು ಸ್ಥಳೀಯವಾಗಿ ಲಾವಾ ಅಭಿವೃದ್ಧಿಪಡಿಸಿದೆ. ಜನವರಿ 11ರಿಂದ ಖರೀದಿಗೆ ಲಭ್ಯವಾಗಲಿದೆ ಎಂದು ಲಾವಾ ಇಂಟರ್‌ನ್ಯಾಷನಲ್ ಅಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ಸುನಿಲ್ ರೈನಾ ಹೇಳಿದ್ದಾರೆ.
ಲಾವಾದಿಂದ ವಿಶ್ವದ ಮೊದಲ ಗ್ರಾಹಕರ ಆಯ್ಕೆಯ ಕ್ಯಾಮರಾ, RAM, ROM ಮತ್ತು ಬಣ್ಣಗಳ 66 ಸಂಯೋಜನೆಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ತಮ್ಮ ಬಳಕೆಗೆ ಸೂಕ್ತವೆಂದು ಭಾವಿಸುವ ಆಧಾರದ ಮೇಲೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡುತ್ತದೆ. ಅಗತ್ಯ ಇದ್ದರೆ ಗ್ರಾಹಕರು ತಮ್ಮ ಸ್ಮಾರ್ಟ್ಫೋನ್ಅನ್ನು ಯಾವುದೇ ಸಮಯದಲ್ಲಿ ಕಸ್ಟಮೈಸ್ ಮತ್ತು ಅಪ್‌ಗ್ರೇಡ್ ಮಾಡಬಹುದು ಹೇಳಿದರು.
ಕಂಪನಿಯು ನೋಕಿಯಾದಂತಹ ಬ್ರಾಂಡ್‌ಗಳ ಅಗತ್ಯವನ್ನು ಆಧರಿಸಿ ಈ ಸಾಧನಗಳನ್ನು ತಯಾರಿಸುತ್ತಿದೆ. ಹೊಸ ಉತ್ಪನ್ನ ಬಿಡುಗಡೆಯ ಭಾಗವಾಗಿ ಲಾವಾ ಭಾರತದಲ್ಲಿ ತನ್ನ ಎಂಜಿನಿಯರ್‌ಗಳು ವಿನ್ಯಾಸಗೊಳಿಸಿದ ಮೊದಲ ಫೋನ್ ಝ್ಯಡ್ 1 ಅನಾವರಣಗೊಳಿಸಿದೆ. ಇದು 2 ಜಿಬಿ RAM ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಹೊಂದಿದೆ. ಮಿಲಿಟರಿ ದರ್ಜೆಯ ಪ್ರಮಾಣೀಕರಣದೊಂದಿಗೆ 5,499 ರೂ. ಬೆಲೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: 'ಕ್ಯಾಪಿಟಲ್ ಹಿಂಸಾಚಾರ ನಾಚಿಕೆಗೇಡಿನ ಸಂಗತಿ'... ಯುಎಸ್ ಉದ್ಯಮಿಗಳ ಖಂಡನೆ
ಮಿಲಿಟರಿ ಗ್ರೇಡ್ ಸರ್ಟಿಫಿಕೇಷನ್ ಝ್ಯಡ್ 2, ಝ್ಯಡ್ 4 ಮತ್ತು ಝ್ಯಡ್ 6 ಜೊತೆಗೆ ಕಾರ್ನಿಯಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್, 5,000 ಎಮ್ಎಹೆಚ್ ಬ್ಯಾಟರಿಯೊಂದಿಗೆ 6,999 ರೂ.ನಿಂದ 9,999 ರೂ. ತನಕ ಸಿಗಲಿದೆ.