ನವದೆಹಲಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ತನ್ನ ಖಾದಿ ಫೇಸ್ ಮಾಸ್ಕ್‌ಗಳನ್ನು ತಯಾರಿಸಿ ಈಗಾಗಲೇ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಬಿಟ್ಟಿದ್ದು, ಹತ್ತಿ ಮತ್ತು ರೇಷ್ಮೆ ಮುಖಗವಸುಗಳ ದರ ಕ್ರಮವಾಗಿ 30 ಮತ್ತು 100 ರೂ. ನಿಗದಿಪಡಿಸಿದೆ.
ದೂರದ ಪ್ರದೇಶಗಳಲ್ಲಿನ ಜನರಿಗೆ ವಿಶೇಷವಾಗಿ ಮನೆಗಳಿಂದ ಹೊರ ಹೋಗಲು ಅಥವಾ ನಿರ್ಬಂಧಕ್ಕೆ ಒಳಪಟ್ಟವರಿಗೆ, ಖಾದಿ ಇಂಡಿಯಾ ಮಳಿಗೆಗಳಿಗೆ ಭೇಟಿ ನೀಡಲು ಸಾಧ್ಯವಾಗದ ಜನರಿಗೆ ಇದರ ಪ್ರಯೋಜನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
-
To help manage the shortage & save lives at risk, the artisans of #KVIC came together spearheading and crafting efforts in making special #KhadiMasks. Now available at our Khadi outlets & online as well -https://t.co/iUmlnKXLk6#Atmanirbhar #MakeInIndia #SkillIndia #MadeInIndia pic.twitter.com/oxWVjPzm8x
— Khadi India (@kvicindia) July 2, 2020 " class="align-text-top noRightClick twitterSection" data="
">To help manage the shortage & save lives at risk, the artisans of #KVIC came together spearheading and crafting efforts in making special #KhadiMasks. Now available at our Khadi outlets & online as well -https://t.co/iUmlnKXLk6#Atmanirbhar #MakeInIndia #SkillIndia #MadeInIndia pic.twitter.com/oxWVjPzm8x
— Khadi India (@kvicindia) July 2, 2020To help manage the shortage & save lives at risk, the artisans of #KVIC came together spearheading and crafting efforts in making special #KhadiMasks. Now available at our Khadi outlets & online as well -https://t.co/iUmlnKXLk6#Atmanirbhar #MakeInIndia #SkillIndia #MadeInIndia pic.twitter.com/oxWVjPzm8x
— Khadi India (@kvicindia) July 2, 2020
ಮುಖಗವಸುಗಳ ಆನ್‌ಲೈನ್ ಖರೀದಿಗೆ ಕನಿಷ್ಠ ಆರ್ಡರ್ ಮೊತ್ತ 500 ರೂ. ಆಗಿರಬೇಕು. ಇದರಲ್ಲಿ ಖರೀದಿದಾರರು ಲಭ್ಯವಿರುವ ನಾಲ್ಕು ಬಗೆಯ ಮಾಸ್ಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಪ್ಪು ಪೈಪಿಂಗ್ ಹೊಂದಿರುವ ಬಿಳಿ ಹತ್ತಿಯದ್ದು, ತ್ರಿವರ್ಣ ಪೈಪಿಂಗ್ ಜತೆ ಬಿಳಿ ಹತ್ತಿಯದ್ದು, ಸಾಲಿಡ್ ಬಣ್ಣಗಳಲ್ಲಿ ರೇಷ್ಮೆ ಮಾಸ್ಕ್ ಮತ್ತು ರೇಷ್ಮೆ ಬಟ್ಟೆಯಲ್ಲಿ ಬಹು ವರ್ಣಗಳ ಮಾಸ್ಕ್ ತಯಾರಿಸಲಾಗಿದೆ ಎಂದು ಹೇಳಿದೆ.
ಕೆವಿಐಸಿ ಮಾಸ್ಕ್‌ಗಳನ್ನು ಖರೀದಿಸಿದ ದಿನಾಂಕದಿಂದ 5 ದಿನಗಳಲ್ಲಿ ಉಚಿತವಾಗಿ ಡೆಲಿವರಿ ಮಾಡಲಾಗುತ್ತದೆ. ಆನ್‌ಲೈನ್ ಮಾರಾಟ ಪ್ರಸ್ತುತ ದೇಶದೊಳಗೆ ಮಾತ್ರ ಮಾನ್ಯವಾಗಿದೆ ಎಂದಿದೆ.
ಜನರಿಗೆ ನೈಜ ಖಾದಿ ಮುಖಗವಸು ಲಭ್ಯವಾಗುವಂತೆ ಮಾಡಲು ಆನ್‌ಲೈನ್ ಮಾರಾಟ ಪ್ರಾರಂಭಿಸಲಾಗಿದೆ. ಖಾದಿ ಮುಖಗವಸುಗಳ ಆನ್‌ಲೈನ್ ಮಾರಾಟ ಖರೀದಿದಾರರನ್ನು ಯಾವುದೇ ವಂಚನೆಯಿಂದ ತಡೆಯುವ ಗುರಿ ಹೊಂದಿದೆ. ಅನೇಕ ಆನ್‌ಲೈನ್ ಪೋರ್ಟಲ್‌ಗಳು ಖಾದಿ ಹೆಸರಿನಲ್ಲಿ ಮಾಸ್ಕ್ ಮಾರಾಟ ಮಾಡುತ್ತಿವೆ. ಅವು ನಿಜವಾದ ಖಾದಿ ಬಟ್ಟೆಯದ್ದಲ್ಲ ಅಥವಾ ಕೈಯಿಂದ ತಯಾರಿಸಿದ ಉತ್ಪನ್ನಗಳಲ್ಲ. ಹಲವು ಜನರು ಇದರ ಬಲೆಗೆ ಬೀಳುತ್ತಾರೆ. ದಾರಿ ತಪ್ಪಿಸುವ ಜಾಹೀರಾತುಗಳಿಂದ ಎಚ್ಚರವಾಗಿ ಇರುವಂತೆ ಕೆವಿಐಸಿ ಅಧ್ಯಕ್ಷ ವಿನೈ ಕುಮಾರ್ ಸಕ್ಸೇನಾ ಹೇಳಿದ್ದಾರೆ.