ETV Bharat / business

ಬೆಲೆ ನಿಯಂತ್ರಣಕ್ಕೆ ಹರಸಾಹಸ: ಅಡುಗೆ ಎಣ್ಣೆ ಆಮದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ: ಕೇಂದ್ರ - ಖಾದ್ಯ ತೈಲಗಳ ಆಮದು

ದೇಶದಲ್ಲಿ ಗಗನಕ್ಕೇರಿರುವ ಅಡುಗೆ ಎಣ್ಣೆ ದರಗಳನ್ನು ಪರಿಶೀಲಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿರುವುದಾಗಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ತಿಳಿಸಿದೆ.

Keeping close watch on cooking oil prices: Govt
ಬೆಲೆ ನಿಯಂತ್ರಣಕ್ಕೆ ಹರಸಾಹಸ: ಅಡುಗೆ ಎಣ್ಣೆ ಆಮದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ - ಕೇಂದ್ರ ಸರ್ಕಾರ
author img

By

Published : Sep 9, 2021, 6:32 PM IST

ನವದೆಹಲಿ: ದೇಶದಲ್ಲಿ ದಿನೇ ದಿನೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅಡುಗೆ ಎಣ್ಣೆ ಬೆಲೆಯಂತೂ ದುಪ್ಪಟ್ಟಾಗಿದೆ. ಕೋವಿಡ್‌ ಸಂಕಷ್ಟದಲ್ಲಿರುವ ಜನರನ್ನು ಇದು ಕಂಗಾಲಾಗಿಸಿದೆ.

ಬೆಲೆ ಏರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ದರ ಪರಿಶೀಲನೆಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ದಿನನಿತ್ಯದ ಬೆಲೆಗಳು ಮತ್ತು ಖಾದ್ಯ ತೈಲಗಳ ಆಮದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆಗಳು ಗರಿಷ್ಠ ಮಟ್ಟದಲ್ಲಿವೆ. ಚಿಲ್ಲರೆ ಮಾರಾಟ ಬೆಲೆಗಳನ್ನು ತಗ್ಗಿಸಲು ಕೇಂದ್ರ ಸರ್ಕಾರವು ಈಗಾಗಲೇ ಪಾಮ್ ಎಣ್ಣೆ ಸೇರಿದಂತೆ ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಕಡಿಮೆ ಮಾಡಿದೆ. ಅಡುಗೆ ಎಣ್ಣೆ ಉತ್ಪಾದನೆ, ಆಮದು ಮತ್ತು ಬೆಲೆಗಳ ಮೇಲೆ ನಿಗಾ ಇರಿಸಲಾಗಿದೆ. ಖಾದ್ಯ ತೈಲದ ಬೆಲೆಯನ್ನು ಪರಿಶೀಲಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ರೈತ, ಕೈಗಾರಿಕೆ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಖಾದ್ಯತೈಲ ಸೇರಿದಂತೆ ಕೃಷಿ ಸರಕುಗಳ ಬೆಲೆ ಮತ್ತು ಲಭ್ಯತೆಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲು ಅಂತರ್-ಸಚಿವಾಲಯದ ಸಮಿತಿ ಇದೆ. ಆಹಾರ ಇಲಾಖೆಯ ಕಾರ್ಯದರ್ಶಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದಾರೆ.

ಈ ಸಮಿತಿಯು, ವಾರಕ್ಕೊಮ್ಮೆ ಬೆಲೆ ಪರಿಸ್ಥಿತಿಯನ್ನು ಪರಿಶೀಲಿಸುತ್ತದೆ. ದೇಶೀಯ ಉತ್ಪಾದನೆ, ಬೇಡಿಕೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಬೆಲೆಗಳು, ಅಂತಾರಾಷ್ಟ್ರೀಯ ವ್ಯಾಪಾರದ ಪ್ರಮಾಣವನ್ನು ಅವಲಂಬಿಸಿ ಖಾದ್ಯ ತೈಲಗಳು ಮತ್ತು ಇತರ ಆಹಾರ ಪದಾರ್ಥಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಪರಿಗಣಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಬೆಲೆಗಳು ಸ್ಥಿರವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು, ಅಂತಾರಾಷ್ಟ್ರೀಯ ಏರಿಳಿತಗಳ ಮಿತಿಯಲ್ಲಿ ಗ್ರಾಹಕರ ಆಸಕ್ತಿಯನ್ನು ರಕ್ಷಿಸಲು ಕಳೆದ ವರ್ಷ ಸರ್ಕಾರ ಮಧ್ಯಸ್ಥಿಕೆಯನ್ನು ಮಾಡಿತ್ತು. ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರದಿಂದಾಗಿ ದೇಶದಲ್ಲಿ ಖಾದ್ಯ ತೈಲಗಳ ಶೇಕಡಾ 60ರಷ್ಟು ಆಮದು ಮೂಲಕ ಪೂರೈಸಲಾಗುತ್ತದೆ.

ಕಳೆದ ವರ್ಷಕ್ಕೆ (91 ಲಕ್ಷ ಟನ್‌) ಹೋಲಿಸಿದರೆ ದೇಶದಲ್ಲಿ ಈ ಬಾರಿ 101 ಲಕ್ಷ ಟನ್‌ಗಳಷ್ಟು ಸಾಸಿವೆ ಬೀಜ ಉತ್ಪಾದನೆ ಆಗಿದೆ. ಪಾಮ್ ಆಯಿಲ್ ಆಮದು (ಕಚ್ಚಾ ಮತ್ತು ಸಂಸ್ಕರಿಸಿದ) ಆಗಸ್ಟ್‌ನಲ್ಲಿ 7.43 ಲಕ್ಷ ಟನ್‌ನಷ್ಟಿತ್ತು. ಜುಲೈನಲ್ಲಿ 5.65 ಟನ್‌ನಷ್ಟಿತ್ತು. ಇದೇ ಆಗಸ್ಟ್‌ನಲ್ಲಿ 7.43 ಲಕ್ಷ ಟನ್‌ ತಾಳೆ ಎಣ್ಣೆ ಆಮದು ಮಾಡಿಕೊಳ್ಳಲಾಗಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಆಮದಿಗಿಂತ ಈ ಬಾರಿ ಕಡಿಮೆ ಇದೆ. 2020ರ ಆಗಸ್ಟ್‌ 7.48 ಲಕ್ಷ ಟನ್‌ ಹಾಗೂ 2019ರ ಆಗಸ್ಟ್‌ನಲ್ಲಿ 8.81 ಲಕ್ಷ ಟನ್‌ ಆಮದು ಮಾಡಿಕೊಳ್ಳಲಾಗಿತ್ತು ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಅಡುಗೆ ಎಣ್ಣೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಗುರಿಯಿದೆ: ಪಿಎಂ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.