ETV Bharat / business

ಗೂಳಿ-ಕರಡಿ ಕಿತ್ತಾಟದಲ್ಲಿ 8 ಲಕ್ಷ ಕೋಟಿ ಸಂಪತ್ತು ಕಳೆದುಕೊಂಡ ಹೂಡಿಕೆದಾರ!

author img

By

Published : Mar 18, 2021, 7:50 PM IST

ಕರಡಿ ಪ್ರವೃತ್ತಿ ಅನುಸರಿಸಿ ಬಿಎಸ್‌ಇ ಪಟ್ಟಿ ಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಐದು ದಿನಗಳಲ್ಲಿ 8,04,216.71 ಕೋಟಿ ರೂ.ಗಳಿಂದ ಇಳಿದು 2,01,22,436.75 ಕೋಟಿ ರೂ.ಗೆ ತಲುಪಿದೆ.

market plunge
market plunge

ನವದೆಹಲಿ: ಸತತ ಐದು ದಿನಗಳ ಮಾರುಕಟ್ಟೆ ಕುಸಿತದಿಂದಾಗಿ ಈಕ್ವಿಟಿ ಹೂಡಿಕೆದಾರರು 8 ಲಕ್ಷ ಕೋಟಿ ರೂ.ಯಷ್ಟು ಸಂಪತ್ತು ಕಳೆದುಕೊಂಡಿದ್ದಾರೆ.

ಬಿಎಸ್ಇ ಮಾನದಂಡವು ಐದು ವಹಿವಾಟು ಅವಧಿಗಳಲ್ಲಿ 2,062.99 ಅಂಕ ಅಥವಾ ಶೇ 4ರಷ್ಟು ಕ್ಷೀಣಿಸಿದೆ. ಗುರುವಾರ 30 ಷೇರುಗಳ ಸೆನ್ಸೆಕ್ಸ್ 585.10 ಅಂಕ ಕುಸಿದು 49,216.52 ಅಂಕಗಳಿಗೆ ತಲುಪಿತು.

ಕರಡಿ ಪ್ರವೃತ್ತಿ ಅನುಸರಿಸಿ ಬಿಎಸ್‌ಇ ಪಟ್ಟಿಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಐದು ದಿನಗಳಲ್ಲಿ 8,04,216.71 ಕೋಟಿ ರೂ.ಗಳಿಂದ ಇಳಿದು 2,01,22,436.75 ಕೋಟಿ ರೂ.ಗೆ ತಲುಪಿದೆ.

ಕಳೆದ 10 ದಿನಗಳಿಂದ ಭಾರತೀಯ ಮಾರುಕಟ್ಟೆಯು ಅಮೆರಿಕದ ಹೆಚ್ಚಿನ ಬಾಂಡ್ ಇಳುವರಿ ಮತ್ತು ದೇಶಾದ್ಯಂತ ಹೆಚ್ಚುತ್ತಿರುವ ಕೋವಿಡ್​ ಪ್ರಕರಣಗಳಿಂದ ಪ್ರಭಾವಿತವಾಗಿದೆ ಎಂದು ಹಣಕಾಸು ಸೇವೆಗಳ ಮೋತಿಲಾಲ್ ಓಸ್ವಾಲ್ ಹೇಳಿದ್ದಾರೆ.

ಸಕಾರಾತ್ಮಕ ಜಾಗತಿಕ ಸೂಚನೆಗಳ ಮೇಲೆ ಚುರುಕಾದ ಏರಿಕೆ ಅಂತರ ಕಂಡ ಬಳಿಕ, ದೇಶದಲ್ಲಿನ ಈಕ್ವಿಟಿ ಸತತ ಐದನೇ ದಿನವೂ ತೀವ್ರವಾಗಿ ಕುಸಿಯಿತು. ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗಿ ಏರಿಕೆ ಆಗಿರುವುದು ಹೂಡಿಕೆದಾರರನ್ನು ಕಂಗೆಡಿಸಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಮುಖ್ಯ ಕಾರ್ಯತಂತ್ರ ತಜ್ಞ ಬಿನೋದ್ ಮೋದಿ ಹೇಳಿದರು.

ಎರಡು ದಿನಗಳ ನೀತಿ ಸಭೆಯ ಬಳಿಕ ಯುಎಸ್ ಫೆಡ್ ತನ್ನ ಪ್ರಮುಖ ಬಡ್ಡಿದರವನ್ನು 2023ರ ವೇಳೆಗೆ ಶೂನ್ಯದ ಹತ್ತಿರ ಇಡಲು ನಿರೀಕ್ಷಿಸುತ್ತಿದೆ ಎಂದು ಹೂಡಿಕೆದಾರರಿಗೆ ಭರವಸೆ ನೀಡಿತು. ವಾಲ್ ಸ್ಟ್ರೀಟ್‌ನಲ್ಲಿನ ಸ್ಟಾಕ್ ಎಕ್ಸ್‌ಚೇಂಜ್‌ಗಳು ರಾತ್ರಿಯ ವಹಿವಾಟಿನಲ್ಲಿ ಲಾಭದೊಂದಿಗೆ ಕೊನೆಗೊಂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.