ETV Bharat / business

ನಿರ್ಮಲಾ ಬಜೆಟ್​ ಎಫೆಕ್ಟ್​​: ಬೆಳಂಬೆಳಗ್ಗೆ ಹೂಡಿಕೆದಾರರ ಜೇಬಿಗೆ 3 ಕೋಟಿ ರೂ. ಸಂಪತ್ತು.. ಹೇಗೆ ಗೊತ್ತೆ? - Budget impact on Share Market

ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಮಾನದಂಡ ಸೆನ್ಸೆಕ್ಸ್ 1,553.87 ಅಂಕಗಳಷ್ಟು ಹೆಚ್ಚುವರಿ ಏರಿಕೆಯಾಗಿ 50,154.48 ಅಂಕಗಳಿಗೆ ತಲುಪಿದೆ. ಹೂಡಿಕೆದಾರರ ಸಕರಾತ್ಮಕ ಮನೋಭಾವ ಗಮನದಲ್ಲಿಟ್ಟುಕೊಂಡು, ಬಿಎಸ್‌ಇ - ಪಟ್ಟಿಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಬೆಳಗಿನ ವಹಿವಾಟಿನಲ್ಲಿ 3,04,169.3 ಕೋಟಿ ರೂ.ಗೆ ಏರಿ 1,95,50,883 ಕೋಟಿ ರೂ.ಗಳಷ್ಟಾಗಿದೆ.

wealth
wealth
author img

By

Published : Feb 2, 2021, 2:58 PM IST

ನವದೆಹಲಿ: ಕೇಂದ್ರ ಬಜೆಟ್ ಮಂಡನೆಯ ಒಂದು ದಿನದ ನಂತರ ಮಾರುಕಟ್ಟೆ ಉತ್ಸಾಹಭರಿತವಾಗಿ ಮುಂದುವರಿದಿದ್ದು, ಹೂಡಿಕೆದಾರರ ಸಂಪತ್ತು ಮಂಗಳವಾರ ಬೆಳಗ್ಗೆ 3 ಲಕ್ಷ ಕೋಟಿ ರೂ.ನಷ್ಟು ಹೆಚ್ಚಳವಾಗಿದೆ.

ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಮಾನದಂಡ ಸೆನ್ಸೆಕ್ಸ್ 1,553.87 ಅಂಕಗಳಷ್ಟು ಹೆಚ್ಚುವರಿ ಏರಿಕೆಯಾಗಿ 50,154.48 ಅಂಕಗಳಿಗೆ ತಲುಪಿದೆ. ಹೂಡಿಕೆದಾರರ ಸಕರಾತ್ಮಕ ಮನೋಭಾವವನ್ನು ಗಮನದಲ್ಲಿಟ್ಟುಕೊಂಡು, ಬಿಎಸ್‌ಇ - ಪಟ್ಟಿಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಬೆಳಗಿನ ವಹಿವಾಟಿನಲ್ಲಿ 3,04,169.3 ಕೋಟಿ ರೂ.ಗೆ ಏರಿ 1,95,50,883 ಕೋಟಿ ರೂ.ಗಳಷ್ಟಾಗಿದೆ.

ಕಳೆದ ಎರಡು ಅಧಿವೇಶನಗಳಲ್ಲಿ ದಾಖಲೆಯ ಏರಿಕೆಯು ಬಜೆಟ್ ದಿನದ ಲಾಭಾಂಶದಿಂದ ಕಂಡು ಬಂದಿದೆ. ಆ ಮನೋಭಾವ ಇಂದು ಕೂಡ ವಿಸ್ತರಣೆಗೊಂಡಿದೆ. ಕೆಲವು ಲಾಭದ ಬುಕಿಂಗ್ ನಿರೀಕ್ಷಿಸಬಹುದು. ಆದರೆ, ಸ್ಟಾಕ್- ನಿರ್ದಿಷ್ಟ ಕ್ರಮದಲ್ಲಿ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಜೆಎಂ ಫೈನಾನ್ಸ್​ ಸರ್ವೀಸಸ್​ನ ರಾಹುಲ್ ಶರ್ಮಾ ಹೇಳಿದರು.

ಇದನ್ನೂ ಓದಿ: ಬಜೆಟ್​​ನಲ್ಲಿನ ಆಮದು ಮೊಬೈಲ್​ ಫೋನ್ ಬಿಡಿಭಾಗ, ಚಾರ್ಜರ್ ಬೆಲೆ ಏರಿಕೆ ಸ್ವಾಗತಿಸಿದ ಟೆಮಾ

ಬಜೆಟ್ ಪ್ರಸ್ತಾಪಗಳಿಂದ ಉತ್ತೇಜನಗೊಂಡ ಬಿಎಸ್ಇ ಮಾನದಂಡ ಸೆನ್ಸೆಕ್ಸ್, ಸೋಮವಾರ 2,314.84 ಅಂಕ ಅಥವಾ ಶೇ 5ರಷ್ಟು ಏರಿಕೆಯಾಗಿ 48,600.61 ಅಂಕಗಳ ಮಟ್ಟಕ್ಕೆ ತಲುಪಿದೆ. 2021-22ರ ಬಜೆಟ್‌ಗೆ ಮಾರುಕಟ್ಟೆಗೆ ಬೆಂಬಲಾಗಿ ನಿಂತಿದ್ದರಿಂದ ಹೂಡಿಕೆದಾರರು ಸೋಮವಾರ 6.34 ಲಕ್ಷ ಕೋಟಿ ರೂ. ಸಂಪತ್ತು ಗಳಿಸಿಕೊಂಡರು.

1997ರಿಂದ ಸೋಮವಾರ ಮಂಡನೆಯಾದ ಮಾರುಕಟ್ಟೆಗಳಿಗೆ ಉತ್ತಮ ಬಜೆಟ್ ದಿನದ ಲಾಭಾಂಶವೆಂದು ವಿಶ್ಲೇಷಕರು ಹೇಳಿದ್ದಾರೆ.

"2020 ರಲ್ಲಿ ನಿರ್ಣಾಯಕ ಹಣಕಾಸಿನ ಪ್ರಚೋದನೆಯ ಕೊರತೆಯಿಂದಾಗಿ, ಬಜೆಟ್ ಏಕಕಾಲದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಸ್ಪಷ್ಟವಾದ ಕ್ರಮಗಳನ್ನು ಹೊರತಂದಿದೆ, ವಿಶೇಷವಾಗಿ ಮೂಲಸೌಕರ್ಯ, ಆರೋಗ್ಯ, ಹಣಕಾಸು ಮತ್ತು ಆಯ್ದ ಉತ್ಪಾದನಾ ಕ್ಷೇತ್ರಗಳಲ್ಲಿ, ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಸರ್ಕಾರವನ್ನು ಪ್ರಗತಿಪರವಾಗಿ ಹಿಂತೆಗೆದುಕೊಳ್ಳುವ ಸಂಕೇತ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.