ಮುಂಬೈ: ಐಟಿ ಷೇರುಗಳ ಏರಿಕೆ ಕಂಡಿದ್ದರಿಂದ ಮುಂಬೈ ಷೇರುಪೇಟೆಯಲ್ಲಿ 250ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡು ಬಂದಿದೆ. ಇನ್ನು ನಿಫ್ಟಿ ಕೂಡಾ 77 ಅಂಕ ಹೆಚ್ಚಳ ಕಂಡು ವ್ಯವಹಾರ ಮುಂದುವರಿಸಿದೆ.
ಇಂದು ಬೆಳಗ್ಗೆ 11ರ ವೇಳೆಗೆ ಸೆನ್ಸೆಕ್ಸ್ 316 ಅಂಕಗಳ ಏರಿಕೆಯೊಂದಿಗೆ 53,219 ಅಂಕಗಳನ್ನು ತಲುಪಿ ಆಲ್ಟೈಮ್ ರೆಕಾರ್ಡ್ ಮಾಡಿತು. ನಿಫ್ಟಿ ಕೂಡ ಆರಂಭದಲ್ಲಿ 82 ಅಂಕ ಏರಿಕೆ ಕಂಡಿತ್ತು. ಈ ಮೂಲಕ ರಾಷ್ಟ್ರೀಯ ಸಂವೇದಿ ಸೂಚ್ಯಂಕ 15935 ಅಂಕ ತಲುಪಿ ದಾಖಲೆ ಬರೆಯಿತು.
ಎಲ್ ಅಂಡ್ ಟಿ, ಹೆಚ್ಡಿಎಫ್ಸಿ, ಹೆಚ್ಸಿಎಲ್, ಇನ್ಪೋಸಿಸ್, ಐಸಿಐಸಿ ಬ್ಯಾಂಕ್ ಷೇರುಗಳು ಇಂದಿನ ವ್ಯವಹಾರದಲ್ಲಿ ಲಾಭ ಮಾಡಿಕೊಂಡವು. ಆದರೆ ಆಯಿಲ್, ಗ್ಯಾಸ್, ರಿಯಾಲ್ಟಿ ಮತ್ತು ಫಾರ್ಮಾ ಷೇರುಗಳು ಮಾರಾಟದಲ್ಲಿ ತೊಡಗುವ ಮೂಲಕ ತುಸು ಒತ್ತಡ ಎದುರಿಸಿದವು.